ರಾಮನಗರ: ಡಿ ಕೆ ಬ್ರದರ್ಸ್ ಗೆ ಶಾಕ್ ನೀಡಲು ಬಿಜೆಪಿಗೆ ಸಿಕ್ಕಿದೆ ಹೊಸ ಅವಕಾಶ

ರಾಮನಗರ: ಡಿ ಕೆ ಬ್ರದರ್ಸ್ ಗೆ ಶಾಕ್ ನೀಡಲು ಬಿಜೆಪಿಗೆ ಸಿಕ್ಕಿದೆ ಹೊಸ ಅವಕಾಶ

0

ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ರಾಮನಗರ ಬಿಜೆಪಿ ಅಭ್ಯರ್ಥಿಯಾದ ಚಂದ್ರಶೇಖರ್ ರವರು ಉಪಚುನಾವಣೆ ಕಣದಿಂದ ಹಿಂದಕ್ಕೆ ಸರಿದು ಬಿಜೆಪಿಗೆ ಬಹು ದೊಡ್ಡ ಶಾಕ್ ನೀಡಿದ್ದರು. ರಾಮನಗರದಲ್ಲಿ ಕೆಲವು ಕಡೆ ಜೆಡಿಎಸ್ ವಿರುದ್ಧ ಅಲೆ ಇರುವುದನ್ನು ಕಂಡಿದ್ದ ಬಿಜೆಪಿ ಪಕ್ಷವು ಜಿದ್ದಾ ಜಿದ್ದಿನ ಹೋರಾಟ ನೀಡಿ ಗೆಲುವನ್ನು ಪಡೆಯಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಂತೆ ಕಾಣುತ್ತಿತ್ತು.

[do_widget id=et_ads-2]

ಆದರೆ ಇದ್ದಕ್ಕಿದ್ದ ಹಾಗೆ ಡಿ ಕೆ ಶಿವಕುಮಾರ್ ರವರ ಸಹೋದರರಾದ ಸುರೇಶ್ ಕುಮಾರ್ ರವರ ಜೊತೆ ಕಾಣಿಸಿಕೊಂಡ ಚಂದ್ರಶೇಖರ್ ರವರು ತಾನು ಬಿಜೆಪಿ ಬಿಟ್ಟು ಮತ್ತೆ ವಾಪಸ್ಸು ಕಾಂಗ್ರೆಸ್ಗೆ ಹೋಗುವುದಾಗಿ ಘೋಷಿಸಿದ್ದರು. ಇದರಿಂದ ಒಂದು ಕ್ಷಣ ಬಿಜೆಪಿ ನಾಯಕರು ದಂಗಾಗಿದ್ದರು ಯಾಕೆಂದರೆ ಉಪಚುನಾವಣೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದವು.

[do_widget id=et_ads-3]

ಈ ವಿದ್ಯಮಾನಗಳನ್ನು ಗಮನಿಸಿದ ಬಿಜೆಪಿ ನಾಯಕರು ಇದೆಲ್ಲಾ ಡಿಕೆ ಬ್ರದರ್ಸ್ ರವರ ಹಣ ಬಲ ಎಂದು ಡಿಕೆ ಬ್ರದರ್ಸ್ ರವರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಆದರೆ ಇದರಲ್ಲಿ ನಮ್ಮ ಕೈವಾಡವಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು. ಆದರೆ ಇದ್ಯಾವುದನ್ನು ನಂಬದೇ ಬಿಜೆಪಿ ನಾಯಕರು ರಾಮನಗರ ಚುನಾವಣೆಯಲ್ಲಿ ಡಿಕೆ ಬ್ರದರ್ಸ್ ರವರಿಗೆ ಶಾಕ್ ನೀಡಲು ತಯಾರು ಮಾಡಿ ಕೊಂಡಿದ್ದಾರೆ ಎನ್ನಲಾಗಿದೆ.

[do_widget id=et_ads-4]

ತಮ್ಮ ಅಭ್ಯರ್ಥಿಯು ಕಣದಿಂದ ಹಿಂದಕ್ಕೆ ಸರಿದಿದ್ದರು ಬಿಜೆಪಿ ನಾಯಕರು ಏನಪ್ಪಾ ಶಾಕ್  ನೀಡುತ್ತಾರೆ ಎಂದುಕೊಳ್ಳುತ್ತಿದ್ದೀರಾ? ತಿಳಿಯಲು ಕೆಳಗಡೆ ಓದಿ

ಅಭ್ಯರ್ಥಿಯು ವಿಶ್ವಾಸದ್ರೋಹ ವನ್ನು ಮಾಡಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಹೈ ಕೋರ್ಟ್ ಮೆಟ್ಟಲು ಏರಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಕರ್ನಾಟಕದ ಹೈಕೋರ್ಟ್ ಈ ವಿಷಯವನ್ನು ಚರ್ಚಿಸಲು ಚುನಾವಣೆಗೆ ಮುನ್ನ ಅವಕಾಶ ನೀಡಿದಲ್ಲಿ ರಾಮನಗರ ಚುನಾವಣೆ ಮುಂದೂಡಲ್ಪಡುತ್ತದೆ. ಆದರೆ ಬಿಜೆಪಿಗೆ ಕೇವಲ ಕೆಲವೇ ಕೆಲವು ಗಂಟೆಗಳು ಸಮಯ ಮಾತ್ರ ಬಾಕಿ ಉಳಿದಿದೆ ಯಾಕೆಂದರೆ ಚುನಾವಣೆ ನಡೆಯುವ ಮುನ್ನ 24 ಗಂಟೆ ಗೂ ಮುಂಚೆ ಚುನಾವಣೆ ನಿಲ್ಲಿಸುವ ಆದೇಶವನ್ನು ಹೈಕೋರ್ಟ್ ಹೊರಡಿಸಬಹುದಾಗಿದೆ.

[do_widget id=et_ads-5]

ಒಂದು ವೇಳೆ ಅದೇ ನಡೆದಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಗೆ ಶಾಕ್ ನೀಡಲು ಡಿಕೆ ಬ್ರದರ್ಸ್ ಮಾಡಿದ ತಂತ್ರ ಗಳೆಲ್ಲವೂ ವಿಫಲವಾಗಲಿವೆ. ಆದರೆ ಬಿಜೆಪಿ ನಾಯಕರು ಈಗ ಯಾವ ಕಾರ್ಯತಂತ್ರಗಳನ್ನು ಅನುಸರಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದು ಯಾವುದೇ ನಾಯಕರು ಅಧಿಕೃತ ಯೋಜನೆಗಳನ್ನು ಇನ್ನೂ ಹೊರ ಬಿಟ್ಟಿಲ್ಲ.

[do_widget id=et_ads-6]