ವಿಲನ್ ಯಾರೆಂದು ಫಸ್ಟ್ ಡೇ ಫಸ್ಟ್ ಶೋ ತಿಳಿದುಕೊಳ್ಳಬೇಕಾ? ಹಾಗಿದ್ದರೆ ಹೀಗೆ ಮಾಡಿ

ವಿಲನ್ ಯಾರೆಂದು ಫಸ್ಟ್ ಡೇ ಫಸ್ಟ್ ಶೋ ತಿಳಿದುಕೊಳ್ಳಬೇಕಾ? ಹಾಗಿದ್ದರೆ ಹೀಗೆ ಮಾಡಿ

0

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ದಿ ವಿಲನ್ ಚಿತ್ರದ ಕಾವು ದಿನೇ ದಿನೇ ಏರುತ್ತಿದೆ.   ಶಿವರಾಜ್ ಕುಮಾರ್ ಮತ್ತು ಸುದೀಪ್ ರವರ ಅಭಿನಯದ ಈ ಚಿತ್ರವು ಮುಂದಿನ ತಿಂಗಳು ಅಕ್ಟೋಬರ್ 18 ನೇ ತಾರೀಖಿನಂದು ಬಿಡುಗಡೆಯಾಗುತ್ತಿದೆ.

ಕನ್ನಡದ ಇಬ್ಬರು ದೊಡ್ಡ ನಟರು ನಟಿಸಿರುವ ಈ ಚಿತ್ರದಲ್ಲಿ ನಟಿ ಆಮಿ ಜಾಕ್ಸನ್ ನಟಿಸಿರುವುದು ಮತ್ತೊಂದು ವಿಶೇಷವಾಗಿದೆ. ಇಂತಹ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಮತ್ತು ನಿಜವಾದ ವಿಲನ್ ಯಾರು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತುರರಾಗಿ ಕಾದು ಕುಳಿತಿದ್ದಾರೆ.

ಒಂದು ವೇಳೆ ಅಭಿಮಾನಿಗಳಲ್ಲಿ ನೀವು ಒಬ್ಬರಾಗಿದ್ದರೆ ಫಸ್ಟ್ ಡೇ ಫಸ್ಟ್ ಶೋ ನೋಡಬೇಕಾದರೆ ನೀವು ಈ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಸಿನಿಮಾಗೂ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶವಿರುತ್ತದೆ.ಸಾಮಾನ್ಯ ಸಿನಿಮಾಗಳಿಗೆ ಒಂದೆರಡು ದಿನ ಮುಂಚಿತವಾಗಿ ಬೂಟ್ ಮಾಡಲು ಅವಕಾಶ ನೀಡುತ್ತಾವೆ ಚಿತ್ರ ದಂಡಗಳು.

ಆದರೆ ದಿ ವಿಲನ್ ಚಿತ್ರತಂಡ ಅಭಿಮಾನಿಗಳಿಗೆ ಬರೋಬ್ಬರಿ ಎರಡು ವಾರ ಗಳಿಗೂ ಮುನ್ನ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ನೀಡುತ್ತಿದೆ. ಅಂದರೆ ನೀವು ಅಕ್ಟೋಬರ್ 2 ನೇ ತಾರೀಖಿನಂದು ಟಿಕೆಟ್ ಬುಕ್ ಮಾಡಿದರೆ ನಿಮಗೆ ಫಸ್ಟ್ ಡೇ ಫಸ್ಟ್ ಶೋ ನೋಡುವ ಅವಕಾಶ ಸಿಗುತ್ತದೆ.