ಘರ್ಜಿಸಲಿದೆಯೇ ಸಿಂಹ? ಕಳೆದ ಬಾರಿ 19 ಮತ್ತು ಈ ಬಾರಿ?

ಘರ್ಜಿಸಲಿದೆಯೇ ಸಿಂಹ? ಕಳೆದ ಬಾರಿ 19 ಮತ್ತು ಈ ಬಾರಿ?

0

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಪಾರುಪತ್ಯ ಮೆರೆದಿತ್ತು, ಆದರೆ  ಅಧಿಕಾರದಲ್ಲಿ ಇಲ್ಲದಿರುವ ಪಕ್ಷ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಪಕ್ಷವೊಂದು  ಯಾರೂ ಊಹಿಸದ ರೀತಿಯಲ್ಲಿ 19 ಕ್ಷೇತ್ರಗಳಲ್ಲಿ ಗೆದ್ದು ಪ್ರತಿಪಕ್ಷಗಳಿಗೆ ಶಾಕ್ ನೀಡಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಕೆಲವು ಬಿಜೆಪಿ ನಾಯಕರ ವರ್ತನೆಯಿಂದ ಬೇಸರಗೊಂಡಿದ್ದ ಜನರಿಗೆ   ಕೇವಲ ಮೋದಿ ರವರ ವರ್ಚಸ್ಸನ್ನು ಬಳಸಿಕೊಂಡು ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಅಳಿಸಿಹೋಗದಂತೆ ಯುವಕರ ಎಲ್ಲರನ್ನೂ  ಒಟ್ಟುಗೂಡಿಸಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಸುವ ಏಕೈಕ ಗುರಿಯಿಂದ ನಮೋ ಬ್ರಿಗೇಡ್ ಎಂಬ ಸಂಘಟನೆ ಹೊರಬಂದಿತ್ತು.

ಕಳೆದ ಬಾರಿ ಮಂಗಳೂರಿನಿಂದ ಪ್ರಾರಂಭವಾದ ಈ ಸಂಘಟನೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಹೆಸರು ಮಾಡಲು ಚಕ್ರವರ್ತಿ ಸೂಲಿಬೆಲೆ ಪ್ರಮುಖ ಪಾತ್ರವಹಿಸಿದ್ದರು. ಈಗ ‘ಮತ್ತೊಮ್ಮೆ ಮೋದಿ ‘ ಎಂಬ ಘೋಷವಾಕ್ಯದೊಂದಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಮೋ ಬ್ರಿಗೇಡ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಯುವ ಪೀಳಿಗೆಯಲ್ಲಿ ಹೆಚ್ಚಿದ ನಮೋ ಅಭಿಮಾನ ಪರಿಗಣಿಸಿ ಮತ್ತು ಯುವ ಶಕ್ತಿಯಲ್ಲಿ ಅಡಕವಾಗಿರುವ ಅಭಿಮಾನ ವ್ಯರ್ಥವಾಗದ ರೀತಿಯಲ್ಲಿ ಸೂಕ್ತವಾಗಿ ಬಳಸಿ ಒಂದೇ ಸೂರಿನಡಿಯಲ್ಲಿ ಸೇರಿಸುವುದು ಆ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಮೋದಿಯವರ ಪರ ಅತ್ಯಧಿಕ ಸೀಟು ಗೆಲ್ಲಿಸುವುದು ಇದರ ಮುಖ್ಯ ಉದ್ದೇಶ ಅಂತ ಹೇಳಲಾಗುತ್ತಿದೆ.

ಒಂದು ವೇಳೆ ಕಳೆದ ಬಾರಿಯಂತೆ ಈ ಬಾರಿಯೂ ನಮೋ ಬ್ರಿಗೇಡ್ ಮಹತ್ವದ ಪಾತ್ರ ವಹಿಸಿದ ಲ್ಲಿ ಬಿಜೆಪಿ ಪಕ್ಷವು ಕನಿಷ್ಠ 23 ರಿಂದ 25 ಸೀಟುಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗುತ್ತಿದೆ. ಬೆಂಬಲವಿದ್ದರೆ ಶೇರ್ ಮಾಡಿ