ತೃತೀಯರಂಗದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ಮೋದಿ

ತೃತೀಯರಂಗದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ಮೋದಿ

0

ಇದೇ ಮೊದಲ ಬಾರಿಗೆ ವಿಪಕ್ಷಗಳ ತೃತಿಯ ರಂಗ ಬಗ್ಗೆ ಮೋದಿ ರವರು ಮಾತನಾಡಿದ್ದಾರೆ ಒಮ್ಮೆ ಓದಿ ಅವರ ಮಾತುಗಳಿಗೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ. ಶುಕ್ರವಾರದಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಿದ ಮೋದಿ ರವರು ವಿಪಕ್ಷಗಳ ಮೇಲೆ ಹರಿಹಾಯ್ದು ವಾಗ್ದಾಳಿ ನಡೆಸಿದ್ದಾರೆ. ಇದೇ ಸಮಯದಲ್ಲಿ ತೃತೀಯರಂಗದ ಬಗ್ಗೆ ಮೋದಿ ಅವರು ಮಾತನಾಡಿದ್ದಾರೆ.

ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ಒಮ್ಮೆ ಓದಿ.

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ರೈತ ಕಲ್ಯಾಣ ರ್ಯಾಲಿಯಲ್ಲಿ ಬೃಹತ್ ಸಂಖ್ಯೆಯ ರೈತರ ನ್ನುದ್ದೇಶಿಸಿ ಮಾತನಾಡಿದರು. 2019 ರ ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ 50ಕ್ಕೂ ಹೆಚ್ಚು ರ್ಯಾ ಲಿಯಲ್ಲಿ ಮೋದಿ ಭಾಗಿಯಾಗುವ ತಂತ್ರವನ್ನು ಬಿಜೆಪಿ ರೂಪಿಸಿದೆ. ‘ಅವರಲ್ಲಿ (ಪ್ರತಿಪಕ್ಷಗಳು) ಒಂದು ದಳ(ರಾಜಕೀಯ ಪಕ್ಷ)ವಿಲ್ಲ. ಆದರೆ, ದಳಗಳ ಮೇಲೆ ದಳ ಗಳಿರುವುದರಿಂದ ಪರಿಸ್ಥಿತಿ ಈಗ ‘ದಲ-ದಲ (ಜವುಗು ಭೂಮಿ)’ ವಾಗಿದೆ.

ಇದು ಹೆಚ್ಚು ಕಮಲಗಳು ಅರಳುವುದಕ್ಕೆ ಸಹಾಯಕವಾಗಲಿದೆ’ ಎಂದು ಲೇವಡಿ ಮಾಡಿದರು. ‘ಪ್ರತಿಪಕ್ಷಗಳು ಬಡವರು, ಯುವಕರು, ರೈತರನ್ನು ಕಡೆಗಣಿಸಿ ಕುರ್ಚಿಯತ್ತ ಓಡುತ್ತಿದ್ದಾರೆ. ಪಕ್ಷಗಳು ಹೆಚ್ಚಿದಂತೆ ಕೊಚ್ಚೆ ಹೆಚ್ಚಾಗುತ್ತದೆ, ಅಲ್ಲೇ ಕಮಲ ಅರಳುತ್ತದೆ.


ಎಷ್ಟೇ ಪಕ್ಷಗಳು ಸೇರಿದರು ಮೈತ್ರಿಕೂಟ ರಚಿಸಿದರು, ಭಾರತದಲ್ಲಿ ಕಮಲ ಇನ್ನಷ್ಟು ಹೊರಡಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕೇವಲ ಪ್ರಧಾನಿ ಕುರ್ಚಿ ಮೇಲೆ ಮಾತ್ರ ಕಣ್ಣಿದೆ, ಅದೇ ಕಣ್ಣು ದೇಶದ ಅಭಿವೃದ್ಧಿ ಮತ್ತು ಬಡವರ ಬಗ್ಗೆ ಇದ್ದಿದ್ದರೆ ಭಾರತವು ಈ ಸ್ಥಿತಿಯನ್ನು ತಲುಪುತ್ತಿರಲಿಲ್ಲ ಎಂದು ಹೇಳಿದ್ದಾರೆ.