ಭಾರತದ ಮುಂದೆ ಮತ್ತೊಮ್ಮೆ ಮಾನ ಕಳೆದುಕೊಂಡ ಕರ್ನಾಟಕ ಸರ್ಕಾರ

ಭಾರತದ ಮುಂದೆ ಮತ್ತೊಮ್ಮೆ ಮಾನ ಕಳೆದುಕೊಂಡ ಕರ್ನಾಟಕ ಸರ್ಕಾರ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಹೆಮ್ಮೆಯ ಪ್ರಧಾನ ಸೇವಕರಾದ ಮೋದಿ ರವರು ಅಧಿಕಾರ ತೆಗೆದುಕೊಂಡ ಮೇಲೆ ಭಾರತವನ್ನು ಸ್ವಚ್ಛ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ ಎಂಬ ಮಹತ್ವಕಾಂಕ್ಷೆ ಯೋಜನೆಯನ್ನು ಜಾರಿಗೆ ತಂದರು. ಒಂದು ಕಡೆ ಬೇರೆ ರಾಜ್ಯಗಳು ಸ್ವಚ್ಛ ಭಾರತದ ಅನುದಾನವನ್ನು ಬಳಸಿಕೊಂಡು ತಮ್ಮ ರಾಜ್ಯಗಳ ಅಭಿವೃದ್ಧಿಯನ್ನು ಮಾಡಿಕೊಂಡು ಎಲ್ಲೆಡೆ ಸುದ್ದಿ ಮಾಡುತ್ತಿದ್ದರೆ ಇತ್ತ ಕರ್ನಾಟಕದ ಸರ್ಕಾರ ಏನು ಮಾಡಿದೆ ಎಂಬುದನ್ನು ನೋಡಿ.

ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷ ಲಕ್ಷ ಹಣವನ್ನು ನುಂಗಲು ಹೊರಟಿದ್ದಾರೆ. 2017-18 ರ ಸ್ವಚ್ಚ ಭಾರತ ಮಿಶನ್ ಯೋಜನೆಯಡಿಯಲ್ಲಿ 200 ಕ್ಕೂ ಹೆಚ್ಚು ಶೌಚಾಲಯಗಳ ಬಿಲ್ ನ್ನ ಆಯಾ ಫಲಾನುಭವಿಗಳ ಅಕೌಂಟ್ ಗೆ ಜಮಾ ಆಗಬೇಕಿತ್ತು, ಆದರೆ ಆ ಹಣ ಕೇವಲ ಒಬ್ಬರ ಗುತ್ತಿಗೆದಾರನ ಅಕೌಂಟ್ ಗೆ ಸಂದಾಯ ಮಾಡಿದ್ದಾರೆ. ಆದರೆ ಶೌಚಾಲಯಗಳು ಎಲ್ಲವೂ ಕಳಪೆ ಮಟ್ಟದ ಶೌಚಾಲಯಗಳಿವೆ. ಇನ್ನು ಪಂಚಾಯತ್ ಅಭಿವೃದ್ದಿ ಇಲಾಖೆ ಅದಿಕಾರಿಗಳು ಈ ಗೋಲ್ಮಾಲ್ ಮಾಡಿದ್ದಾರೆ. ಈ ಕುರಿತು ಅದಿಕಾರಿಗಳನ್ನ ಕೇಳಿದರೆ ಪೋನ್ ಕೂಡಾ ರಿಸಿವ್ ಮಾಡಲ್ಲ. ಆದರೆ ಈ ಅವ್ಯವಹಾರವನ್ನ ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ ನಾಯಿಕಮನಿ ಅವರು ಮಾಹಿತಿ ಹಕ್ಕಿನಲ್ಲಿ ಬಯಲಿಗೆ ಎಳದಿದ್ದಾರೆ.

ಈ ಕುರಿತು ಫಲಾನುಭವಿಗಳನ್ನ ಕೇಳಿದರೆ ನಮ್ಮ ಅಕೌಂಟಗೆ ಹಣ ಬಂದಿಲ್ಲ. ತಯಾರಾಗಿದ್ದ ಶೌಚಾಲಯವನ್ನು ತಂದಿಟ್ಟಿದ್ದಾರೆ. ಆದರೆ ಈ ಕುರಿತು ಸಂಭಂದಪಟ್ಟವರನ್ನು ಸಂಪರ್ಕಿಸಿದರೆ ಸರಿಯಾದ ಮಾಹಿತಿಯನ್ನ ನಿಡುತ್ತಿಲ್ಲ. ಇನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಕಾರ್ಯದರ್ಶಿ ಅವರು ಇಂತಹ ಪ್ರಕರಣಗಳಲ್ಲಿ ತಪ್ಪುಮಾಡಿದವರ ವಿರುದ್ದ ಕ್ರಮ ಜರುಗಿಸಬೇಕು ಎಂದು ರಾಜ್ಯದ ಎಲ್ಲ ಜಿ ಪಂ ಕಾರ್ಯನಿರ್ವಾಹಕ ಅದಿಕಾರಿಗಳಿಗೆ ಆದೆಶ ಮಾಡಿದ್ದರು. ಇನ್ನುವರೆಗೂ ಯಾವುದೆ ಕ್ರಮವನ್ನು ಜರುಗಿಸದೆ ಅದಿಕಾರಿಗಳು ಸುಮ್ಮನಿರುವದು ಅನುಮಾನಕ್ಕೆ ಎಡೆಮಾಡಿದಂತಾಗಿದೆ.

ಒಂದೆಡೆ ಅನುದಾನ ಬಂದಿಲ್ಲ ಬಂದಿಲ್ಲ ಎಂದು ಬೊಬ್ಬೆ ಹೊಡೆಯುವ ರಾಜ್ಯ ಸರ್ಕಾರವು ಬಂದ ಹಣವನ್ನು ಈ ರೀತಿ ಮಾಡುತ್ತಿದ್ದರೆ ಯಾರಿಗೆ ತಾನೆ ಸರ್ಕಾರದ ಮೇಲೆ ನಂಬಿಕೆ ಬರಲು ಸಾಧ್ಯ. ಇದೆಲ್ಲದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಕರ್ನಾಟಕ ಸರ್ಕಾರದ ಪತ್ತೆಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮತ್ತೊಮ್ಮೆ ಕರ್ನಾಟಕ ಸರ್ಕಾರದ ಮಾನ ಮತ್ತೊಮ್ಮೆ ಕರ್ನಾಟಕ ಸರ್ಕಾರದ ಮಾನ.