ಇವರ ಮನಸ್ಸು ಇವರ ಮುಖದಷ್ಟೇ ಸುಂದರ: ಮಂಡ್ಯದ ೨೦೦ ಕಾರ್ಮಿಕರಿಗೆ ಇವರು ಮಾಡಿದ ಸಹಾಯ ನೋಡಿ

ಇವರ ಮನಸ್ಸು ಇವರ ಮುಖದಷ್ಟೇ ಸುಂದರ: ಮಂಡ್ಯದ ೨೦೦ ಕಾರ್ಮಿಕರಿಗೆ ಇವರು ಮಾಡಿದ ಸಹಾಯ ನೋಡಿ

0

ಅಲಿಯಾ ಭಟ್, ಇತ್ತೀಚಿಗೆ ಬಾಲಿವುಡ್ ಅಂಗಳದಲ್ಲಿ ತಮ್ಮ ನಟನೆಯ ಮೂಲಕ ಈ ಚೆಲುವೆ ಎಲ್ಲ ಹೃದಯವನ್ನು ಕದ್ದಿದ್ದಾರೆ, ಯಾವ ಜಾಹಿರಾತುಗಳಲ್ಲಿ ನೋಡಿದರೂ ಇವರೇ ಕಾಣ ಸಿಗುತ್ತಾರೆ ಕಡಿಮೆ ದಿನಗಳಲ್ಲಿ ತಮ್ಮ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಈ ಸುಂದರ ಮುಖದ ಮುಗ್ದ ಚೆಲುವೆ ಈಗ ಮತ್ತೊಂದು ಕಾರ್ಯದ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದುಕೊಂಡಿದ್ದಾರೆ.

ಅಷ್ಟಕ್ಕೂ ಅವರು ಏನು ಮಾಡಿದ್ದಾರೆ ಗೊತ್ತಾ?

ಕೆಲವು ದಿನಗಳ ಹಿಂದೆ ಬೆಂಗಳೂರು ಮೂಲದ ಅರೋಹಾ ಎನ್ ಜಿ ಒ ಒಂದು ಅಭಿಯಾನವನ್ನು ಪ್ರಾರಂಭಿಸಿತ್ತು, ಅಭಿಯಾನದ ಹೆಸರೇ  ಮೈವಾರ್ಡ್ ರೋಬ್ ಇಸ್ ಯುವರ್ ವಾರ್ಡ್ ಈ ಅಭಿಯಾನದ ಮೂಲಕ ಸೆಲೆಬ್ರಿಟಿಗಳು ತಮ್ಮ ವಸ್ತುಗಳನ್ನು ಹರಾಜಿಗೆ ಇಟ್ಟು ಅದರಿಂದ ಬಂದ ಹಣವನ್ನು ತಮ್ಮ ಸಂಸ್ಥೆಯ ಮೂಲಕ ಬಡ ಜನರನ್ನು ತಲುಪುವುದು ಅವರ ಉದ್ದೇಶವಾಗಿತ್ತು.

ರೋಹಾ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿಕೊಂಡು ವಿದ್ಯುತ್ ಇಲ್ಲದ ಕುಗ್ರಾಮಗಳಿಗೆ ಸೌರಶಕ್ತಿ ದೀಪ ನೀಡುವ ಕೆಲಸ ಪ್ರಾರಂಭಿಸಿದ್ದ ಈ ಸಂಸ್ಥೆಗೆ ಆಲಿಯಾ ಭಟ್ ರವರು ಕೈಜೋಡಿಸಿದ್ದರು, ತಾವು ಬಳಕೆ ಮಾಡಿದ ಉಡುಪುಗಳನ್ನು ಹರಾಜಿಗೆ ಇಟ್ಟಿದ್ದ ಆಲಿಯಾ ಭಟ್ ರವರು ಅದರಿಂದ ಬಂದ ಹಣವನ್ನು ಸಂಸ್ಥೆಗೆ ನೀಡಿದ್ದರು.

ಈ ಹಣವನ್ನು ಬಳಸಿಕೊಂಡ ಎನ್ ಜಿ ಓ  ಕತ್ತಲಲ್ಲಿ ಜೀವನ ದೂಡುತ್ತಿದ್ದ 200 ಕಾರ್ಮಿಕರಿಗೆ ಬೆಳಕು ನೀಡಿದ್ದಾರೆ, ಅಭಿಯಾನದ ಮೊದಲ ಹಂತದಲ್ಲಿ ಯಶಸ್ಸು ಕಂಡಿರುವುದಕ್ಕೆ ಆಲಿಯಾ ಭಟ್ ಸಹ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇವರ ಈ ಸಮಾಜ ಸೇವಾ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಅವರ ಮೊದಲ ಹಂತದಲ್ಲಿ ದೊರೆತ ಯಶಸ್ಸು ಪ್ರತಿ ಹಂತದಲ್ಲಿ ದೊರೆಯಲಿ ಎಂದು ಹಾರೈಸುತ್ತಿದ್ದೇನೆ.