ಕಾಂಗ್ರೆಸ್ ಮುಸ್ಲಿಮರ ಪಕ್ಷವೇ? ರಾಹುಲ್ ಗಾಂಧಿಗೆ ಸವಾಲೆಸೆದ ನಿರ್ಮಲಾ ಸೀತಾರಾಮನ್

ಕಾಂಗ್ರೆಸ್ ಮುಸ್ಲಿಮರ ಪಕ್ಷವೇ? ರಾಹುಲ್ ಗಾಂಧಿಗೆ ಸವಾಲೆಸೆದ ನಿರ್ಮಲಾ ಸೀತಾರಾಮನ್

0

ಹೌದು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವು ಹೊಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸುತ್ತಿದ್ದರು. ಆದರೆ ಈಗ ನಿರ್ಮಲಾ ಸೀತಾರಾಮನ್ ರವರು ಪುರಾವೆ ಸಮೇತ ರಾಹುಲ್ ಗಾಂಧಿರವರಿಗೆ ಸವಾಲುಗಳನ್ನು ಎಸೆದಿದ್ದಾರೆ, ನಿರ್ಮಲಾ ಸೀತಾರಾಮನ್ ರವರ ಮಾತುಗಳನ್ನು ಕೇಳಿದರೆ ನೀವೇ ಹೌದು ಎನ್ನುತ್ತೀರಾ.

ಅಷ್ಟಕ್ಕೂ ವಿಷಯದ ಮೂಲವೇನು?

ಲೋಕಸಭಾ 2019ರ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಬೇರೆ ದಾರಿ ಇಲ್ಲದೆ ಧರ್ಮದ ಆಧಾರದ ಮೇಲೆ ಮತ ವಿಭಜನೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ, ಎಂಬ ವರದಿಯನ್ನು ಸೀತಾರಾಮನ್ ರವರು ಹೊರಗೆಳೆದಿದ್ದಾರೆ ಇದಕ್ಕೆ ರಾಹುಲ್ ಗಾಂಧಿ ರವರ ಸ್ಪಷ್ಟನೆಯನ್ನು ಸಹ ಕೇಳಿದ್ದಾರೆ.

ಅಷ್ಟಕ್ಕೂ ವರದಿಗಳು ಯಾವುವು?

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಹೇಳಿಕೆಗಳ ಮತ್ತು ವರದಿಗಳನ್ನು ಗಮನಿಸಿರುವ ಸೀತಾರಾಮನ್ ರವರು ಮತಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ ಇತ್ತೀಚೆಗೆ ದೆಹಲಿಯ ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ನಡೆಸಿದ ಸಭೆಯಲ್ಲಿ ರಾಹುಲ್ ಗಾಂಧಿ ರವರು ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ ಎಂದು ಹೇಳಿರುವುದರ ಬಗ್ಗೆ ಮಾಧ್ಯಮಗಳು ವರದಿಯನ್ನು ಮಾಡಿವೆ. ಇಷ್ಟು ದಿವಸ ಕಾಂಗ್ರೆಸ್ ಮುಸ್ಲಿಮರ ಓಲೈಕೆಯನ್ನು ಮಾಡಿತ್ತು, ,ಆದರೆ ಈಗ ಆ ಪಕ್ಷದ ಹೆಸರಿನಿಂದಲೇ ಹೋಲಿಕೆ ಮಾಡಲಾಗುತ್ತಿದೆ ಎಂದು ಸೀತಾರಾಮನ್ ರವರು ವಾಗ್ದಾಳಿ ನಡೆಸಿದರು. ಇನ್ನು ಶಶಿತರೂರ್ ಅವರ ಇಂದು ಪಾಕಿಸ್ತಾನ ಹೇಳಿಕೆಯೇ ಹೇಳಿಕೆಯ ಬಗ್ಗೆ ಮಾತನಾಡಿದ ಸೀತಾರಾಮನ್ ರವರು ಇದರಿಂದ ಜನರಲ್ಲಿ ಗೊಂದಲ ಉಂಟಾಗಿದ್ದು ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲವಾದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.

ಮಾಧ್ಯಮಗಳ ವರದಿ ಮತ್ತು ಶಶಿತರೂರ್ ಅವರ ಹೇಳಿಕೆಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಮತಗಳನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲು ಸಿದ್ಧ ವಾದಂತೆ ಕಾಣುತ್ತಿದೆ.ಬೇರೆ ಯಾವುದೇ ದಾರಿ ಇಲ್ಲದೆ ಮೋದಿಯವರನ್ನು ಎದುರಿಸಲು ಕಾಂಗ್ರೆಸ್ ಈ ದಾರಿ ಹಿಡಿದಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿವೆ. ಇಷ್ಟು ದಿವಸ ಜನರ ಮಾತುಗಳಲ್ಲಿ ಕೇಳುತ್ತಿದ್ದ ಈ ವಿಷಯವನ್ನು ನಿರ್ಮಲಾ ಸೀತಾರಾಮನ್ ರವರು ವರದಿಯೊಂದಿಗೆ ರಾಹುಲ್ ಗಾಂಧಿರವರಿಗೆ ಸ್ಪಷ್ಟನೆ ಕೇಳಿರುವುದು
ಬಹಳ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ