ನೆಹರು ಮಾಡಿದ ತಪ್ಪನ್ನು ಸರಿಪಡಿಸುವುದೇ ಕಾಶ್ಮೀರ ಸಮಸ್ಯೆಗೆ ಪರಿಹಾರ: ಹಿಂದೂ ನಾಯಕ ಸುಬ್ರಮಣಿಯನ್ ಸ್ವಾಮಿ

ನೆಹರು ಮಾಡಿದ ತಪ್ಪನ್ನು ಸರಿಪಡಿಸುವುದೇ ಕಾಶ್ಮೀರ ಸಮಸ್ಯೆಗೆ ಪರಿಹಾರ: ಹಿಂದೂ ನಾಯಕ ಸುಬ್ರಮಣಿಯನ್ ಸ್ವಾಮಿ

0

ಹೌದು ಸುಬ್ರಹ್ಮಣ್ಯ ಸ್ವಾಮಿ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಸೂಚಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡಲು ಒಂದು ಕಡೆ ಸೇನೆ ಪ್ರಯತ್ನಿಸುತ್ತಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದೆ.ಇದರ ವಿರುದ್ಧ ಕಿಡಿಕಾರಿರುವ ಸುಬ್ರಹ್ಮಣ್ಯ ಸ್ವಾಮಿ ರವರು ಕಣಿವೆ ರಾಜ್ಯದಲ್ಲಿ ಶಾಂತಿ ನಿಲ್ಲಿಸಲು ಒಂದು ಪರಿಹಾರವೊಂದನ್ನು ಸೂಚಿಸಿದ್ದಾರೆ.

ಅಷ್ಟಕ್ಕೂ ನೆಹರು ಮಾಡಿದ ಆ ತಪ್ಪು ಯಾವುದು ?ಅದರ ವಿವರಗಳೇನು ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನೆಹರೂರವರು ಒಂದು ಸಂಪ್ರದಾಯವನ್ನು ತಂದಿದ್ದರು, ಅದುವೇ ಮುಸ್ಲಿಂ ಮುಖ್ಯಮಂತ್ರಿ , ರಾಜ್ಯದಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಿದೆ ಎಂಬ ಒಂದೇ ಒಂದು ಕಾರಣಕ್ಕೆ ನೆಹರೂರವರು ಕಾಶ್ಮೀರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಎಂಬ ಸಂಪ್ರದಾಯವನ್ನು ತಂದರು. ಇದರ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ್ದಾರೆ ಸುಬ್ರಹ್ಮಣ್ಯಂ ಸ್ವಾಮಿ.

ಜಮ್ಮು-ಕಾಶ್ಮೀರಕ್ಕೆ ಮುಸ್ಲಿಮರೇ ಮುಖ್ಯಮಂತ್ರಿಯಾಗಬೇಕು ಎಂಬ ಸಂಪ್ರದಾಯವನ್ನು ನೆಹರುರವರು ತಂದಿದ್ದಾರೆ, ಜಮ್ಮು-ಕಾಶ್ಮೀರದಲ್ಲಿ ಈ ಸಂಪ್ರದಾಯವನ್ನು ಕೊನೆಗೊಳಿಸಿ ಪಿ ಡಿ ಪಿ ಹಿಂದೂ ಅಥವಾ ಸಿಖ್ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಸುಬ್ರಹ್ಮಣ್ಯಂ ಸ್ವಾಮಿ ರವರು ಮುಖ್ಯಮಂತ್ರಿಯಾಗಿ ಮುಸ್ಲಿಮರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಮತ ನೀಡುತ್ತಿರುವುದು ಯಾವುದೇ ಆರ್ಥಿಕ ಶಕ್ತಿ ಗಳಿಂದಲ್ಲ ಬದಲಾಗಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆದ ಕೆಲಸಗಳು ಎಂದು ಹೇಳಿದ್ದಾರೆ.

2014ರಲ್ಲಿ ನೀಡಿದ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಸಾಧ್ಯವಾಗಿಲ್ಲ, ನಮಗೆ ಮತ್ತೆ ಐದು ವರ್ಷ ಅಧಿಕಾರ ಬೇಕು, ಆಗ ಪೂರ್ಣ ಪ್ರಮಾಣದಲ್ಲಿ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.