2 ಭಾಗವಾಗಲಿದೆಯೇ ಕರ್ನಾಟಕ? ಹೊಡೆದು ಆಳುವ ನೀತಿ ಪಾಲಿಸಲಿದೆಯೇ ಕಾಂಗ್ರೆಸ್?

2 ಭಾಗವಾಗಲಿದೆಯೇ ಕರ್ನಾಟಕ? ಹೊಡೆದು ಆಳುವ ನೀತಿ ಪಾಲಿಸಲಿದೆಯೇ ಕಾಂಗ್ರೆಸ್?

0

ಹೌದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ಗೆ ಸೋಲಿನ ಅರಿವಾದರೆ ತನ್ನ ಪ್ರಮುಖ ಅಸ್ತ್ರವಾದ ಹೊಡೆದು ಆಳುವ ನೀತಿಯನ್ನು ಅನುಸರಿಸುತ್ತದೆ ಎಂಬ ಮಾತಿದೆ. ಈ ಮಾತನ್ನು ಸತ್ಯ ಮಾಡುವಂತೆ ಕಾಂಗ್ರೆಸ್ ಹೊರಟಿದೆ, ಕರ್ನಾಟಕವನ್ನೇ ಎರಡು ಭಾಗವನ್ನಾಗಿ ವಿಭಜಿಸಲು ಕಾಂಗ್ರೆಸ್ ಒಂದು ಪ್ಲಾನ್ ರೂಪಿಸಿದೆ ಎಂಬಂತೆ ಕಾಣುತ್ತಿದೆ. ಇದನ್ನು ನಾವು ಹೇಳುತ್ತಿಲ್ಲಬದಲಾಗಿ ಕಾಂಗ್ರೆಸ್ ನ ಮಾಜಿ ಸಚಿವರಾದ ಆರ್ ಬಿ ತಿಮ್ಮಾಪುರ ರವರು ಹೇಳಿದ್ದಾರೆ.

ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಜಿಲ್ಲಾ ಉತ್ಸವ ಈ ಸಭೆಯ ನಂತರ ಮಾತನಾಡಿದ ಆರ್ ಬಿ ತಿಮ್ಮಪ್ಪನವರು ಎಲ್ಲಾ ಪಕ್ಷಗಳು ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ರಾಜ್ಯವನ್ನು ಎರಡು ಭಾಗವಾಗಿ ಹೊಡೆಯಲು ನಾವು ಸಿದ್ಧರಿದ್ದೇವೆ ಎಂದು ತಿಮ್ಮಪ್ಪನವರು ಗುಡುಗಿದ್ದಾರೆ.ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಉತ್ತರ ಕರ್ನಾಟಕದಲ್ಲಿ ಹಿಂದುಳಿದ ಕ್ಷೇತ್ರಗಳು ಎಂದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕ್ಷೇತ್ರಗಳು. ಆದಕಾರಣ ಆಗಿ ಹೇಳಿಕೆಯು ಸ್ಪಷ್ಟವಾಗಿ ಲೋಕಸಭಾ ಚುನಾವಣೆಯನ್ನು ದೃಷ್ಟಿಯಾಗಿ ಇಟ್ಟುಕೊಂಡು ಹೇಳಿದಂತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಸೀಟುಗಳ ಸಂಖ್ಯೆ ಗಣನೀಯವಾಗಿ ಇಳಿದಿತ್ತು. ಇನ್ನು ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳುಗಳು ಇರುವುದರಿಂದ ಕಾಂಗ್ರೆಸ್ ತನ್ನ ಪ್ರಮುಖ ಅಸ್ತ್ರವಾದ ಹೊಡೆದು ಆಳುವ ನೀತಿಯನ್ನು ಉತ್ತರ ಕರ್ನಾಟಕದ ಜನರ ಮನಸ್ಸಲ್ಲಿ ಬಿತ್ತುವಂತೆ ಕಾಣುತ್ತಿದೆ. ಇದೇ ನಡೆದಲ್ಲಿ ಕರ್ನಾಟಕ ಇಬ್ಭಾಗವಾಗಲಿದೆ.


ದೇಶದ ಜನರು ತಾವು ಎಲ್ಲಾ ಒಂದು ಎಂಬಂತೆ ಇದ್ದರೂ ಸಹ ಇಂತಹ ಕೆಲವು ನಾಯಕರು ಪ್ರತ್ಯೇಕ ರಾಜ್ಯದ ಕಾವೂ ಹೆಚ್ಚಿಸಿ ಜನರ ಮನಸಲ್ಲಿ ವಿಷ ಬೀಜ ಬಿತ್ತು ತದನಂತರ ಅದನ್ನು ಹೋರಾಟವಾಗಿ ತಿರುಗಿಸಿ ರಾಜ್ಯಗಳನ್ನು ವಿಭಾಗ ಮಾಡಿಬಿಡುತ್ತಾರೆ.

ದಯವಿಟ್ಟು ಕನ್ನಡದ ಜನರು ಯಾವುದೇ ಆಮಿಷಗಳಿಗೆ ಅಥವಾ ವದಂತಿಗಳಿಗೆ ಕಿವಿಗೊಟ್ಟು ಪ್ರತ್ಯೇಕ ರಾಜ್ಯವಾದರೆ ಅನುಕೂಲವಾಗುತ್ತದೆ ಎಂಬ ಮನಸ್ಥಿತಿಯನ್ನು ತಂದುಕೊಳ್ಳಬಾರದು ಎಂಬುದು ನಮ್ಮ ವಿನಂತಿ. ನಾವು ಇಷ್ಟು ವರ್ಷ ಜೊತೆಗೆ ಇದ್ದೇವೆ ಇನ್ನು ಮುಂದೆಯೂ ಸಹ ಕರ್ನಾಟಕದ ಭಾಗವಾಗಿ ಇರಲು ಬಯಸುತ್ತೇವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಎರಡು ಪದಗಳು ಬಿಟ್ಟರೆ ನಾವೆಲ್ಲರೂ ಕರ್ನಾಟಕದವರು ಕನ್ನಡಿಗರು ಎಂಬುದು ನಿಮ್ಮ ಮನಸ್ಸಿನಲ್ಲಿ ಇರಲಿ.