ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಗಳು ಯಾವುವು ಗೊತ್ತಾ? ಕನ್ನಡಕ್ಕೆ ಎಷ್ಟನೇ ಸ್ಥಾನ?

ಭಾರತದಲ್ಲಿ ನಿಗದಿತ ಮತ್ತು ಅನಿಗದಿತ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಲು ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಗಿತ್ತುಆ ಸಮೀಕ್ಷೆ ಸಂಪೂರ್ಣ ವಿವರಕ್ಕಾಗಿ ಆ ಸಮೀಕ್ಷೆ ಸಂಪೂರ್ಣ ವಿವರಕ್ಕಾಗಿ.

2001ರಿಂದ 2011ರ ವರೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಯಲ್ಲಿ ಶೇಕಡಾವಾರು ಪ್ರಮಾಣ ಕಡಿಮೆಯಾಗಿದೆ ಆದರೆ ಕನ್ನಡ ಮಾತನಾಡುವವರ ಸಂಖ್ಯೆ ಏನು ಕಡಿಮೆ ಇಲ್ಲ.ಆದರೆ ಕರ್ನಾಟಕದ ಮತ್ತೊಂದು ಭಾಷೆಯಾದ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ ಇದರಿಂದ ಕೊಡವ ಭಾಷೆ ಅಳಿವಿನ ಅಂಚಿಗೆ ಬರುವ ಸುಳಿವು ನೀಡಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಭಾಷೆ ಮಾತನಾಡುವವರ ಸಂಖ್ಯೆ ಇಡಿ ಮುಖವಾದರೆ ಆ ಸಮುದಾಯದ ಜನ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಇದರಿಂದ ಭಾಷೆ ಮುಂದಿನ ದಿನಗಳಲ್ಲಿ ಭಾಷೆ ಅಳಿವಿನ ಕಡೆಗೆ ಸಾಗಬಹುದು ಎಂದು ಸಮೀಕ್ಷೇ ವರದಿ ಮಾಡಿದೆ.ಭಾಷೆಗಳ ಶೇಕಡಾವಾರು ಸಮೀಕ್ಷೆ ಇಲ್ಲಿದೆ.

ಸಮೀಕ್ಷೆಯ ಪ್ರಕಾರ ಭಾರತ ದೇಶದಲ್ಲಿ ಹಿಂದಿ ಮಾತನಾಡುವವರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಶೇಕಡ 44ರಷ್ಟು ಮಂದಿ ಹಿಂದಿ ಮಾತನಾಡುತ್ತಿದ್ದಾರೆ. ಉಳಿದಂತೆ ಬೆಂಗಾಲಿ ತೆಲುಗು ಮರಾಠಿ ತಮಿಳು ಗುಜರಾತಿ ಮತ್ತು ಮಾತನಾಡುವವರ ಸಂಖ್ಯೆ ಕನ್ನಡಕ್ಕಿಂತ ಹೆಚ್ಚಾಗಿದೆ. ಕರ್ನಾಟಕದ ಹನಿ ಗತವಾದ ಭಾಷೆಗಳಾದ ತುಳು ಮತ್ತು ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕುಸಿದಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕರ್ನಾಟಕಕ್ಕೆ ಎಂಟನೇ ಸ್ಥಾನ ಲಭಿಸಿದ್ದರೂ ಕೊಡವ ಮತ್ತು ತುಳು ಭಾಷೆಗಳಿಗೆ ಇನ್ನು ಕೆಳಗಿನ ಕ್ರಮಾಂಕ ಲಭಿಸಿದೆ.
ಪ್ರತಿಯೊಬ್ಬರಲ್ಲೂ ವಿನಂತಿ ದಯವಿಟ್ಟು ತಮ್ಮ ಮಾತೃಭಾಷೆಯನ್ನು ಎಂದು ಮರೆಯಬೇಡಿ.ನಿಮ್ಮ ಕೆಲಸಕ್ಕೆ ಆಂಗ್ಲ ಭಾಷೆಯ ಅಥವಾ ಹಿಂದಿ ಭಾಷೆಗಳು ಉಪಯುಕ್ತ ವಾಗಿರಬಹುದು ಆದರೆ ನಿಮ್ಮ ಮಾತೃಭಾಷೆಯನ್ನು ಎಂದು ಮರೆಯಬೇಡಿ.

Post Author: Ravi Yadav