ಭಾರತೀಯ ಸೈನಿಕರ ಈ ಕಾರ್ಯ ನೋಡಿದರೆ ಭೇಷ್ ಎನ್ನುತ್ತೀರಾ

ಭಾರತೀಯ ಸೈನಿಕರ ಈ ಕಾರ್ಯ ನೋಡಿದರೆ ಭೇಷ್ ಎನ್ನುತ್ತೀರಾ

0

ಸದಾ ಶಾಂತಿಯನ್ನು ಬಯಸುತ್ತಿದ್ದ ಭಾರತವು ದೇಶದ ಉಳಿವಿಗಾಗಿ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದೆ. ಇತ್ತ ಪ್ರತಿಪಕ್ಷಗಳು ಇದನ್ನು ತಡೆಯಬೇಕು ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿಲ್ಲ ಎಂದು ಟೀಕೆಗಳನ್ನು ಮಾಡುತ್ತಿವೆ. ಇತ್ತ ಸೈನಿಕರು ಉಗ್ರರ ವಿರುದ್ಧ ದಾಳಿ ನಡೆಸಿ ತಮ್ಮ ಬಲ ವೇನೆಂದು ತೋರಿಸುತ್ತಿದ್ದಾರೆ. ನಾವು ಕೈಕಟ್ಟಿ ಕುಳಿತಿರಬಹುದು ಆದರೆ ಕೈಲಾಗದವರ ಎಂಬುದನ್ನು  ತಮ್ಮ ಗನ್ ಗಳ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಈಗ ಅದೇ ಭಾರತದ ಹೆಮ್ಮೆಯ ಸೈನಿಕರು ಮತ್ತೊಮ್ಮೆ ತಮ್ಮ ಕಾರ್ಯದ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.

ಅಷ್ಟಕ್ಕೂ ಅವರು ಯಾವುದೇ ಉಗ್ರರನ್ನು ಕೊಂದು ಅಥವಾ ದಾಳಿ ನಡೆಸಿ ಬೇಸ್ ಎನಿಸಿ ಕೊಳ್ಳುತ್ತಿಲ್ಲ, ಬದಲಾಗಿ ಅವರ ಕಾರ್ಯ ನೋಡಿದರೆ ಶತ್ರುಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ಭಾರತದ ಸೈನಿಕರು ಮಾಡಿದ್ದಾದರೂ ಏನು ಎಂಬ ವಿವರಕ್ಕಾಗಿ ಸಂಪೂರ್ಣ ಓದಿ.

11 ವರ್ಷದ ಬಾಲಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ವಿವಾಹಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಗಡಿಯನ್ನು ದಾಟಿ ಆಕಸ್ಮಿತವಾಗಿ ಭಾರತದೊಳಗೆ ಬಂದಿದ್ದ, ಇದೇ ಕೆಲಸ ನಮ್ಮ ಭಾರತದ ಪುಟ್ಟ ಬಾಲಕ ಮಾಡಿದ್ದರು ಪಾಪ ಆತನ ಸಾವು ನೋಡಬೇಕಿತ್ತು, ಆದರೆ ಇಲ್ಲಿ ಯೋಧರ ಕಾರ್ಯ ನೋಡಿದರೆ ಭಾರತದ ಸೈನಿಕರು ಎಂತಹ ಮನಸ್ಸಿನವರು ಎಂಬುದು ತಿಳಿಯುತ್ತದೆ.

ಬಾಲಕ ಮೊಹಮ್ಮದ್ ಅಬ್ದುಲ್ಲಾ ನನ್ನು ಕಂಡ ಭಾರತೀಯ ಸೇನಾ ಅಧಿಕಾರಿಗಳು ಆತನನ್ನು ಜೂನ್ 24 ರಂದು ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅದಕ್ಕೆ ಕೂಡಲೇ ಬಾಲಕನನ್ನು ವಾಪಸ್ ಕಳಿಸಲು ಬೇಕಾದ ಅಗತ್ಯ ವಿಧಿ ವಿಧಾನಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಪೂರೈಸಿದರು. ಬಾಲಕ ಗಡಿ ಪ್ರವೇಶಿಸಿದ ನಾಲ್ಕು ದಿನಗಳೊಳಗೆ ಆತನನ್ನು ಹೊಸ ಬಟ್ಟೆ ತೊಡಿಸಿ ಸಿಹಿ ತಿಂಡಿಗಳೊಂದಿಗೆ ಮರಳಿ ಇಂದು ಪಾಕಿಸ್ತಾನಕ್ಕೆ ಕಳುಹಿಸಲಾಯಿತು.

ಭಾರತೀಯ ಸೇನೆಯು ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಶಕ್ತಿಯಾಗಿದೆ. ಅದು ಮುಗ್ಧ ನಾಗರಿಕರೊಂದಿಗೆ ವ್ಯವಹರಿಸುವಾಗ ಸೂಕ್ಷ್ಮತೆಯಿಂದ ವರ್ತಿಸುತ್ತದೆ ಎಂದು ಸೇನಾ ವಕ್ತಾರರು ಹೇಳಿದರು.