ಕಾಂಗ್ರೆಸ್: ಉಕ್ಕಿನ ಮನುಷ್ಯನಿಗೆ ಪಾಕಿಸ್ತಾನದ ಅಧ್ಯಕ್ಷರ ಜೊತೆಗೆ ನಂಟು

ಕಾಂಗ್ರೆಸ್: ಉಕ್ಕಿನ ಮನುಷ್ಯನಿಗೆ ಪಾಕಿಸ್ತಾನದ ಅಧ್ಯಕ್ಷರ ಜೊತೆಗೆ ನಂಟು

0

ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರು ಎಂತಹ ದೇಶಭಕ್ತರೆಂದು ನಾವು ನಿಮಗೆ ತಿಳಿಸುವ ಅಗತ್ಯವಿಲ್ಲ ಅವರು ಮಾಡಿದ ಹೋರಾಟ ಮತ್ತು ಸಾಧನೆಗಳಿಗೆ ಸಾಕ್ಷಿಯಾಗಿ ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತಿ ಪಡೆದಿದ್ದಾರೆ.

ಆದರೆ ಈಗ ಕಾಶ್ಮೀರದ ಕುರಿತು ಕಾಂಗ್ರೆಸ್ ನ ಹಿರಿಯ ನಾಯಕ ಸೈಫುದ್ದೀನ್ ಸೋಜ್ ಬರೆದಿರುವ ಪುಸ್ತಕದಲ್ಲಿ ಸರ್ದಾರ್ ವಲ್ಲಬಾಯಿ ಪಟೇಲರ ವಿರುದ್ಧ ಬಹುದೊಡ್ಡ ಆರೋಪಗಳನ್ನು ಪಟ್ಟಿಯೇ ಇದೆ. ಬಹುದೊಡ್ಡ ಆರೋಪಗಳನ್ನು ಪಟ್ಟಿಯೇ ಇದೆ ಕೆಲವೇ ದಿನಗಳಲ್ಲಿ ಉಗ್ರ ಹೋರಾಟ ವಾದರೂ ಅಚ್ಚರಿ ಇಲ್ಲ.

ಅಷ್ಟಕ್ಕೂ ಸೈಫುದ್ದೀನ್ ಹೇಳಿರುವುದೇನು?

ಸೋಮವಾರವಷ್ಟೇ ಬಿಡುಗಡೆಯಾದ “ಕಾಶ್ಮೀರ ಹೋರಾಟ ಮತ್ತು ಇತಿಹಾಸದ ಇಣುಕುನೋಟ” ಎಂಬ ಪುಸ್ತಕದಲ್ಲಿ ಸೈಫುದ್ದೀನ್ ರವರು ಕಾಶ್ಮೀರದ ಕುರಿತು ಜವಾಹರ್ಲಾಲ್ ನೆಹರು ಮತ್ತು ಪಟೇಲ್ ರವರ ನಿಲುವಿನ ಬಗ್ಗೆ ಪುಸ್ತಕದಲ್ಲಿ ಬರೆದಿದ್ದಾರೆ.

ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದ ಲಿಕಾಯತ್ ಆಲಿ ಖಾನ್ ಬಗ್ಗೆ ಸರ್ದಾರ್ ಪಟೇಲ್ ರವರು ಭಾರಿ ನಂಬಿಕೆಯನ್ನು ಇಟ್ಟಿದ್ದರು ಆದ ಕಾರಣ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಿದ್ದರು ಎಂದು ಹೇಳಿದ್ದಾರೆ. 1947ರಲ್ಲಿ ಪಾಕ್ ನುಸುಳುಕೋರರನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆಗೆ ಅಡ್ಡಗಾಲು ಆಗಿತ್ತು ಇದೇ ಸರ್ದಾರ್ ಪಟೇಲ್ ರವರು ಎಂದಿದ್ದಾರೆ.

ಮೊದಲಿನಿಂದಲೂ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಎಂಬುದೇ ಪಟೇಲ್ ರವರ ಅಚಲ ನಿಲುವಾಗಿತ್ತು. ಹೈದ್ರಾಬಾದ್ ಬದಲಾಗಿ ಕಾಶ್ಮೀರವನ್ನು ಪಡೆಯುವಂತೆ ಪಾಕಿಸ್ತಾನದ ಅಧ್ಯಕ್ಷರಿಗೆ ದುಂಬಾಲು ಬಿದ್ದಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ನಾನು ನಿಮಗೆ ಆಕರ್ಷಕ ಕಥೆಯೊಂದನ್ನು ಹೇಳುತ್ತೇನೆ ಎಂದ ಸೈಫುದ್ದೀನ್, ನಿಮ್ಮ ಸೇನೆ ಶ್ರೀನಗರದಲ್ಲಿ ಬಂದಿಳಿದ ಅದೇ ದಿನ ಮೌಂಟ್‌ಬ್ಯಾಟನ್ ಲಾಹೋರ್‌ಗೆ ತೆರಳಿದ್ದರು. ಅವರಿಗೆ ಪಾಕಿಸ್ತಾನದ ಗವರ್ನರ್, ಪ್ರಧಾನಿ ಮತ್ತು ನಾಲ್ವರು ಸಚಿವರ ಜತೆ ಔತಣಕೂಟ ಏರ್ಪಡಿಸಲಾಗಿತ್ತು. ಅಲ್ಲಿ ಮಾತನಾಡಿದ ಮೌಂಟ್‌ಬ್ಯಾಟನ್ ‘ನಾನು ಭಾರತದ ಪ್ರಮುಖ ವ್ಯಕ್ತಿ ಸರ್ದಾರ್ ಪಟೇಲ್ ಅವರಿಂದ ನಿಮಗೊಂದು ಸಂದೇಶ ತಂದಿದ್ದೇನೆ. ನಿಮ್ಮ ಸಂಪರ್ಕದಲ್ಲಿಲ್ಲದ ಹೈದರಾಬಾದ್ ಅನ್ನು ಮರೆತುಬಿಡಿ. ಕಾಶ್ಮೀರವನ್ನು ಪಡೆದುಕೊಳ್ಳಿ’ ಎಂದು ಹೇಳಿದ್ದರು.

ಆದರೆ, ಪಾಕಿಸ್ತಾನದ ಖ್ಯಾತ ರಾಜಕಾರಣಿ ಸರ್ದಾರ್ ಶೌಕತ್ ಹಯಾತ್ ಖಾನ್ ತಮ್ಮ ಪುಸ್ತಕದಲ್ಲಿ ಬರೆದಿರುವ ಪ್ರಕಾರ, ಲಿಖಾಯತ್ ಅಲಿಗೆ ಇತಿಹಾಸ, ಭೂಗೋಳದ ಬಗ್ಗೆ ಜ್ಞಾನವಿರಲಿಲ್ಲ. ಹೀಗಾಗಿ ಅವರು ಪಟೇಲ್ ಪ್ರಸ್ತಾವವನ್ನು ಒಪ್ಪಿರಲಿಲ್ಲ ಎಂದು ಸೈಫುದ್ದೀನ್ ತಿಳಿಸಿದ್ದಾರೆ.

ಕಾಶ್ಮೀರ ಬಿಡಲು ಸಿದ್ಧರಿರಲಿಲ್ಲ ನೆಹರು:

ಕಾಶ್ಮೀರದ ಬಗ್ಗೆ ಜವಹರಲಾಲ್‌ ನೆಹರು ನಿಲುವು ಕಠಿಣವಾದದ್ದಾಗಿತ್ತು. ಹೀಗಾಗಿ ಆ ವಿಚಾರದಲ್ಲಿ ಮೇಲುಗೈ ಸಾಧಿಸುವುದು ಪಟೇಲರಿಗೆ ಸಾಧ್ಯವಾಗಲಿಲ್ಲ ಎಂದು ಸೈಫುದ್ದೀನ್ ಹೇಳಿದ್ದಾರೆ.

ಆದರೆ ಕಾಂಗ್ರೆಸ್ಸಿಗರು ಇದು ಕೇವಲ ಉಕ್ಕಿನ ಮನುಷ್ಯ ರಾದ ಸರ್ದಾರ್ ಪಟೇಲ್ ರವರಿಗೆ ಮಾಡಿದ ದ್ರೋಹ ವಲ್ಲ ಇದು ಒಂದು ದೇಶದ್ರೋಹ? ಏನಂತೀರಾ ಓದುಗರೆ ಇದು ಕಾಂಗ್ರೆಸ್ಸಿಗರು ದೇಶಕ್ಕೆ ಮಾಡಿದ ಮತ್ತೊಂದು ದ್ರೋಹವೇ? ಹೌದು ಎಂದಾದಲ್ಲಿ ಶೇರ್ ಮಾಡಿ.

ಹೈದರಾಬಾದ್ ಮತ್ತು ಕಾಶ್ಮೀರದ ಸತ್ಯದ ಬಗ್ಗೆ ಕೆಲವೇ ದಿನಗಳಲ್ಲಿ ನಾವು ಒಂದು ಅಂಕಣವನ್ನು ಬರೆಯುತ್ತಿದ್ದೇವೆ.