ಮತ್ತೊಂದು ಟೀಕೆಗೆ ಕೆಲಸದ ಮೂಲಕ ಉತ್ತರ ನೀಡಿದ ಮೋದಿ

ಮತ್ತೊಂದು ಟೀಕೆಗೆ ಕೆಲಸದ ಮೂಲಕ ಉತ್ತರ ನೀಡಿದ ಮೋದಿ

0

ಹೌದು ಮತ್ತೊಮ್ಮೆ ಮೋದಿ ಅವರು ಟೀಕೆಗಳಿಗೆ ತಮ್ಮ ಕಾರ್ಯಗಳ ಮೂಲಕ ಉತ್ತರ ನೀಡಿದ್ದಾರೆ. ಪ್ರತಿ ಪಕ್ಷಗಳು ಮೋದಿ ರವರ ನಿರ್ಧಾರಗಳನ್ನು ಗುರಿಯಾಗಿರಿಸಿಕೊಂಡು ಅದಕ್ಕೆ ತಕ್ಕಂತೆ ವಿವಾದಗಳನ್ನು ಸೃಷ್ಟಿಸಿ ಟೀಕೆಗಳ ಬಾಣಗಳನ್ನೇ ಬಿಡುತ್ತಾರೆ. ಆದರೆ ಇದುವರೆಗೂ ಮೋದಿ ರವರು ಯಾವ ಟೀಕೆಗಳಿಗೂ ಜಗ್ಗದೆ ಟೀಕೆ ಮಾಡುವವರಿಗೆ ತಮ್ಮ ಕಾರ್ಯಗಳಿಂದ ಉತ್ತರ ನೀಡಿದ್ದಾರೆ.

ದೇಶದಲ್ಲಿ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಹೋಲಿಸಿದರೆ ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ವಾದವಿದೆ,ನಿರುದ್ಯೋಗ ಸಮಸ್ಯೆಯು ಯುವ ಜನತೆಯನ್ನು ಕಾಡುತ್ತಿದೆ ಎಂದು ಪ್ರತಿಪಕ್ಷಗಳು ಮೋದಿರವರ ಸರ್ಕಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಈ ಶಾಕಿಂಗ್ ಅಂಕಿ-ಅಂಶಗಳಿಂದ ಇದೆಲ್ಲ ಸುಳ್ಳು ಎಂಬುದು ತಿಳಿದು ಬಂದಿದೆ. ಆ ಅಂಕಿ ಅಂಶಗಳನ್ನು ಗಮನಿಸಿದರೆ ಮೋದಿ ರವರ ಕಠಿಣ ನಿರ್ಧಾರಗಳು ಉದ್ಯೋಗ ಸೃಷ್ಟಿಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಉದ್ಯೋಗಗಳು ಸೃಷ್ಟಿಯಾಗಿಲ್ಲ ಎಂಬುವವರಿಗೆ ಶಾಕ್ ನೀಡಿದೆ.

ಅಷ್ಟಕ್ಕೂ ಭಾರತದಲ್ಲಿ ಯಾವ ಯಾವ ಸಮಯದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎಂಬ ಅಂಕಿ ಅಂಶಗಳು ಕೆಳಗಡೆ ಇದೆ ಸಂಪೂರ್ಣ ಓದಿ.

ಪ್ರಸಕ್ತ ವರ್ಷದ ಏಪ್ರಿಲ್‌ವರೆಗಿನ ಕಳೆದ 8 ತಿಂಗಳಲ್ಲಿ ಔಪಚಾರಿಕ ವಲಯದಲ್ಲಿ 40 ಲಕ್ಷ ಉದ್ಯೋಗಗಳು ಸೇರ್ಪಡೆಯಾಗಿವೆ ಎನ್ನುವುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ(ಇಪಿಎಫ್‌ಒ) ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.

ಅದರಲ್ಲೂ ಏಪ್ರಿಲ್‌ನಲ್ಲಿ ಅತಿ ಹೆಚ್ಚಿನ ಅಂದರೆ, 6,85,000 ಉದ್ಯೋಗಗಳು ಈ ವಲಯಕ್ಕೆ ಸೇರ್ಪಡೆಯಾಗಿವೆ. ಔಪಚಾರಿಕ ವಲಯದ ಉದ್ಯೋಗಗಳಲ್ಲಿ ಸುಮಾರು ಶೇ.43ರಷ್ಟು ಏರಿಕೆ ಕಂಡು ಬಂದಿದೆ. ಏಪ್ರಿಲ್‌ ಅನ್ನುವುದು ಹೊಸ ಹಣಕಾಸು ವರ್ಷದ ಮೊದಲ ತಿಂಗಳಾಗಿದ್ದು, ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ. ಮಾರ್ಚ್‌ನಲ್ಲಿ 4,80,000 ಉದ್ಯೋಗಗಳು ಸೇರ್ಪಡೆಯಾಗಿದ್ದವು.

ಇಪಿಎಫ್‌ಒ, ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ(ಇಎಸ್‌ಐಸಿ), ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಸೇರಿದಂತೆ ಉದ್ಯೋಗಿಗಳ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದ್ದು, ಔಪಚಾರಿಕ ವಲಯದಲ್ಲಿ ಹೊಸ ಉದ್ಯೋಗ ಸೃಷ್ಟಿ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ವಿವರಗಳನ್ನು ಕ್ರೋಡೀಕರಿಸಿರುವ ಅಂಕಿಅಂಶಗಳ ಸಚಿವಾಲಯವು, ಮೂರನೇ ಉದ್ಯೋಗ ಸಂಬಂಧಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಇಪಿಎಫ್‌ಒ ಪ್ರಕಾರ, 18-25 ವರ್ಷದ ವಯೋಮಾನದ ಗುಂಪನ್ನು ಹೊಸ ಉದ್ಯೋಗಗಳು ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್‌ನಲ್ಲಿ ಇಂಥ 3,76,942 ಹೊಸ ಉದ್ಯೋಗಗಳು ಕಂಡು ಬಂದಿವೆ.ರಾಷ್ಟ್ರೀಯ ಪಿಂಚಣಿ ಯೋಜನೆ ಡೇಟಾಗಳನ್ನು ನೋಡಿದರೆ, ಸೆಪ್ಟೆಂಬರ್‌-ಏಪ್ರಿಲ್‌ ಅವಧಿಯಲ್ಲಿ 5.12 ಲಕ್ಷ ರೂ. ಜಮೆಯಾಗಿದೆ. ಏಪ್ರಿಲ್‌ನಲ್ಲಿ ಹೊಸದಾಗಿ 46,863 ಹೊಸ ಸದಸ್ಯರು ಎನ್‌ಪಿಎಸ್‌ ಪ್ರವೇಶಿಸಿದ್ದಾರೆ. ಇದರಲ್ಲಿ 12,510 ಉದ್ಯೋಗಿಗಳು 25 ವರ್ಷಕ್ಕಿಂತ ಕಡಿಮೆ ವಯೋಮಾನದವರು.