ಮೋದಿ ಸರ್ಕಾರ ಭ್ರಷ್ಟಾಚಾರವಿಲ್ಲದೆ ವ್ಯವಹಾರ ನಡೆಸಿದ್ದು ಎಷ್ಟು ಲಕ್ಷ ಕೋಟಿಗಳ ಗೊತ್ತಾ?

ಮೋದಿ ಸರ್ಕಾರ ಭ್ರಷ್ಟಾಚಾರವಿಲ್ಲದೆ ವ್ಯವಹಾರ ನಡೆಸಿದ್ದು ಎಷ್ಟು ಲಕ್ಷ ಕೋಟಿಗಳ ಗೊತ್ತಾ?

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಯಾವುದೇ ಸರಕಾರಿ ಯೋಜನೆಯ ಫಲವನ್ನು ಅನುಭವಿಸಬೇಕಾದರೆ ಲಂಚ ಕೊಡಲೇಬೇಕು. ಒಬ್ಬ ಸಾಮಾನ್ಯ ಸರ್ಕಾರಿ ನೌಕರನಿಂದ ಹಿಡಿದು ಅತ್ಯಂತ ಹಿರಿಯ ಅಧಿಕಾರಿಗಳು ಸಹ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಎಂಬುದು ಒಂದು ಕನಸಾಗಿ ಉಳಿದಿತ್ತು. ಆದರೆ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಪರ ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ, ಅದಕ್ಕೆ ಈ ಸಂಖ್ಯೆಗಳೇ ಸಾಕ್ಷಿ.

ನೀವು ಯಾವುದೇ ರೀತಿಯ ಸರ್ಕಾರಿ ಸೌಲಭ್ಯವನ್ನು ಪಡೆಯಬೇಕಾದರೆ ಕನಿಷ್ಠ ಹತ್ತು ಪರ್ಸೆಂಟ್ ಹಣವನ್ನು ಸರ್ಕಾರಿ ಅಧಿಕಾರಿಗಳು ನುಂಗಿ ಬಿಡುವುದು ಅರಗಿಸಿಕೊಳ್ಳಲಾಗದ ಸತ್ಯ. ಮೋದಿ ರವರಿಗೆ ಈ ಸತ್ಯ ಬಹಳ ಚೆನ್ನಾಗಿ ತಿಳಿದಿತ್ತು ನಾನು ಯಾವುದೇ ಯೋಜನೆಯನ್ನು ಸಿದ್ಧಪಡಿಸಿದರು ಅದು ಸರ್ಕಾರಿ ಅಧಿಕಾರಿ ಗಳ ಪಾಲಾಗುತ್ತದೆ ಎಂಬುದನ್ನು ಅರಿತ ಮೋದಿ ರವರು ಇದನ್ನು ತಡೆಯಲೆಂದು ಫಲಾನುಭವಿಗಳ ಅಕೌಂಟಿಗೆ ಹಣ ವನ್ನು ನೇರವಾಗಿ ಜಮಾ ಮಾಡುವ ವ್ಯವಸ್ಥೆಯನ್ನು ತಂದರು. ಇದರಿಂದ ಜನಸಾಮಾನ್ಯರಿಗೆ ಹಣ ನೇರವಾಗಿ ಅಕೌಂಟಿಗೆ ಬರುವಂತೆ ಆಯಿತು. ಭ್ರಷ್ಟ ಅಧಿಕಾರಿಗಳಿಗೆ ಆದಾಯ ತಪ್ಪಿತು.

 

ಅಷ್ಟಕ್ಕೂ ಎಷ್ಟು ಹಣ ಜನಸಾಮಾನ್ಯರಿಗೆ ನೇರವಾಗಿ ತಲುಪಿದೆ?

ಕೇಂದ್ರ ಸರ್ಕಾರ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ ಕೇವಲ 431 ಯೋಜನೆಗಳಿಂದ ಬರೋಬ್ಬರಿ ₹3,65,996 ಕೋಟಿ ಹಣ ನೇರವಾಗಿ ಜನಸಾಮಾನ್ಯರ ಖಾತೆಗಳಿಗೆ ವರ್ಗಾವಣೆ ಆಗಿದೆ. ಇದರಲ್ಲಿ ಏನಿಲ್ಲ ಅಂದರೂ ಹತ್ತು ಪರ್ಸೆಂಟ್ ನಷ್ಟು ಅಧಿಕಾರಿಗಳು ನುಂಗಿದ್ದರೂ 36 ಸಾವಿರ ಕೋಟಿ ಅಧಿಕಾರಿಗಳ ಪಾಲಾಗುತ್ತಿತ್ತು. ಮೋದಿ ರವರ ಯೋಜನೆಯಿಂದ ಜನಸಾಮಾನ್ಯರಿಗೆ ಮೊದಮೊದಲು ಕೊಂಚ ತೊಂದರೆಯಾದರೂ ಯಾವುದೇ ಅಧಿಕಾರಿಗಳಿಗೆ ಲಂಚವನ್ನು ಕೊಡದೆ ದುಂಬಾಲು ಬೀಳದೆ ತಮ್ಮ ಅಕೌಂಟಿಗೆ ನೇರವಾಗಿ ಹಣ ಬಂದಿದೆ.

ಇದರಿಂದ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲ ವಾಗದಿದ್ದರೂ ಮುಂದೊಂದು ದಿನ ಭಾರತವನ್ನು ಮೋದಿ ಅವರು ಭ್ರಷ್ಟಾಚಾರ ಮುಕ್ತ ಮಾಡುತ್ತಾರೆ ಎಂಬ ಆಶಾ ಭಾವನೆ ಎಲ್ಲರಲ್ಲೂ ಮೂಡಿದೆ. ಈ ಅಂಕಿಅಂಶಗಳು ಮೋದಿ ರವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಾಧ್ಯವೇ? ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೋದಿ ರವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವರೆ? ಕಾದುನೋಡಬೇಕಿದೆ.. ಮೋದಿ ರವರ ಈ ನಡೆಗೆ ನಿಮ್ಮ ಸಹಮತ ವಿದ್ದಲ್ಲಿ ಶೇರ್ ಮಾಡಿ.