ರಾಜ್ಯದ ರೈತರಲ್ಲಿ ಮೂಡಿದ ಸಂತಸ: ಮೋದಿ ಮೇನಿಯಾ

ರಾಜ್ಯದ ರೈತರಲ್ಲಿ ಮೂಡಿದ ಸಂತಸ: ಮೋದಿ ಮೇನಿಯಾ

0

ಹುಬ್ಬಳ್ಳಿ: ಕಳಸಾ ಬಂಡೂರಿ ವಿವಾದ ಪರಿಹಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದು ಈ ನಿಟ್ಟಿನಲ್ಲಿ ಕಳಸಾ ಬಂಡೂರಿ ಹೋರಾಟಗಾರರ ಜೊತೆ ಮಾತುಕತೆ ನಡೆಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಮೋದಿ ಬುಲಾವ್ ನೀಡಿದ್ದು, ಹೀಗಾಗಿ ಕಳಸಾ ಬಂಡೂರಿ ಹೋರಾಟದ ರೈತ ಮುಖಂಡರು ದೆಹಲಿಗೆ ಪ್ರಯಾಣ ಬೆಳೆಸಿದರು.

14 ಹಾಗೂ 15 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಇದೇ ಸಮಯ ನಿಗದಿಯಾಗಿದ್ದು, ಇದೇ ವೇಳೆ ಮೋದಿ ಜೊತೆ ನಡೆಯಲಿರುವ ಮಾತುಕತೆಯಲ್ಲಿ ಪ್ರಮುಖ ರೈತ ಮುಖಂಡರ ನಿಯೋಗ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ಭೇಟಿಯಾಗಲಿದ್ದಾರೆ.

ಹುಬ್ಬಳ್ಳಿ, ಧಾರವಾಡ, ರಾಮದುರ್ಗ, ನರಗುಂದ ಸೇರಿದಂತೆ 23 ಜನ ರೈತ ಮುಖಂಡರು ಇಂದು ಹುಬ್ಬಳ್ಳಿಯಿಂದ ರೈಲು ಮೂಲಕ ಬೆಂಗಳೂರಿಗೆ ತೆರಳಿ, ನಾಳೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಹಾಗೂ ಸಹಯೋಗ, ಮಹದಾಯಿ ಮಹಾವೇದಿಕೆ ಸಹಯೋಗದಲ್ಲಿ ಭೇಟಿಯಾಗಿ ಯೋಜನೆ ಇತ್ಯರ್ಥಗೊಳಿಸುವಂತೆ ಪ್ರಧಾನಿಗೆ ಮನವಿ‌ ಮಾಡಲಿದ್ದಾರೆ ಎನ್ನಲಾಗಿದೆ.

ಮೋದಿ ರವರು ತಾವೇ ಆಸ್ತಕ್ತಿ ತೆಗೆದುಕೊಂಡು ಕರೆದಿರುವುದರ ಹಿಂದೆ ಸಮಸ್ಯೆ ಪರಿಹಾರವಿದೆ ಎಂದು ಜನರೆಲ್ಲರು ನಿಟ್ಟುಸಿರು ಬಿಡುತ್ತಿದ್ದಾರೆ