ಜಿಯೋಗೆ ಶಾಕ್ ನೀಡಿದ ಏರ್ಟೆಲ್: ಬಿಗ್ ಆಫರ್ಸ್

ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದರ ಸಮರವನ್ನು ಕಾಣಬಹುದಾಗಿದೆ. ಜಿಯೋಗೆ ಕೌಂಟರ್ ನೀಡುವ ಸಲುವಾಗಿ ಏರ್‌ಟೆಲ್ ದಿನಕ್ಕೊಂದು ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಡೇಟಾ ಆಡ್ ಆನ್ ಪ್ಲಾನ್ ವೊಂದನ್ನು ನೀಡಿದ್ದು, ಜಿಯೋ ಪ್ಲಾನ್‌ಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಈ ಪ್ಲಾನ್ ಕಾಣಿಸಿಕೊಂಡಿದೆ.

ಈಗಾಗಲೇ ಜಿಯೋ ಲಾಂಚ್ ಮಾಡಿರುವ ಡೇಟಾ ಆಡ್ ಆನ್ ಪ್ಲಾನ್‌ಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಏರ್‌ಟೆಲ್ ತನ್ನದೇ ಆಡ್ ಆನ್ ಪ್ಲಾನ್ ಅನ್ನು ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರಿಗೆ ಡೇಟಾ ಮಾತ್ರವೇ ದೊರೆಯಲಿದ್ದು, ಬೇರೆ ಯಾವುದೇ ಲಾಭಗಳು ದೊರೆಯುವುದಿಲ್ಲ.

ರೂ.193 ಪ್ಲಾನ್:

ಈಗಾಗಲೇ ಏರ್‌ಟೆಲ್ ಕಾಂಬೋ ಪ್ಯಾಕ್ ಅನ್ನು ಹಾಕಿಸಿಕೊಂಡಿರುವವರಿಗೆ ಹೆಚ್ಚಿನ ಲಾಭವನ್ನು ಇದು ಮಾಡಿಕೊಡಲಿದೆ. ರೂ.193 ರೀಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ಬಳಕೆದಾರರಿಗೆ ನಿತ್ಯ 1 GB ಡೇಟಾ ಹೆಚ್ಚುವರಿಯಾಗಿ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ನಿತ್ಯ ಹೆಚ್ಚಿನ ಡೇಟಾ ದೊರೆಯಲಿದೆ.

ಉದಾಹರಣೆ:

ನೀವು ರೂ.509 ಪ್ಲಾನ್ ರೀಚಾರ್ಜ್ ಮಾಡಿಸಿದ್ದ ಸಂದರ್ಭದಲ್ಲಿ ನಿತ್ಯ 1.4GB ಡೇಟಾವನ್ನು ಬಳಕೆ ಪಡೆದುಕೊಳ್ಳುವಿರಿ ಇದೇ ಮಾದರಿಯಲ್ಲಿ ನೀವು ಆಡ್ ಆನ್ ಪ್ಯಾಕ್ ಹಾಕಿಸಿಕೊಂಡಲ್ಲಿ ನಿತ್ಯ 2.4 GB ಡೇಟಾವನ್ನು ಪ್ರತಿ ನಿತ್ಯ ಪಡೆಯುವಿರಿ. ಇದು ನಿಮ್ಮ ಪ್ಯಾಕ್ ವ್ಯಾಲಿಡಿಟಿ ಇರುವವರೆಗೂ ಇರಲಿದೆ.

ರೂ.49 ಪ್ಲಾನ್:

ಇದೇ ಮಾದರಿಯಲ್ಲಿ ರೂ.49 ಪ್ಲಾನ್ ಸಹ ಡೇಟಾ ಆಡ್ ಅನ್‌ನೊಂದಿಗೆ ಕಾಣಿಸಿಕೊಂಡಿದೆ. ಇದರಲ್ಲಿ ಬಳಕೆದಾರರಿಗೆ ಕಾಂಬೋ ಪ್ಲಾನ್ ಅವಧಿಗೆ 1 GB ಡೇಟಾವನ್ನು ನೀಡಲಿದೆ. ಯಾವಾಗ ಬೇಕಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.

ಜಿಯೋದಲ್ಲಿ ಇಲ್ಲ:

ಏರ್‌ಟೆಲ್ ನೀಡುವ ಈ ಪ್ಲಾನ್ ಮಾದರಿಯಲ್ಲಿ ಜಿಯೋ ದಲ್ಲಿಯೂ ಇಲ್ಲ ಎನ್ನಲಾಗಿದೆ. ಈ ಮಾದರಿಯ ಆಫರ್ ಅನ್ನು ಜಿಯೋ ತನ್ನ ಬಳಕೆದಾರರಿಗೆ ನೀಡಿಲ್ಲ. ಬೇರೆ ಮಾದರಿಯ ಡೇಟಾ ಆಡ್ ಆನ್ ಪ್ಲಾನ್ ಗಳನ್ನು ಬಳಕೆಗೆ ನೀಡಿದೆ ಎನ್ನಲಾಗಿದೆ.

Post Author: Ravi Yadav