ಮತ್ತೆ ಸದ್ದು ಮಾಡುತ್ತಿದೆ ಮಾರಣಾಂತಿಕ ಕಾಯಿಲೆ !!

ಮತ್ತೆ ಸದ್ದು ಮಾಡುತ್ತಿದೆ ಮಾರಣಾಂತಿಕ ಕಾಯಿಲೆ !!

0

ನೀಫಾ ಕಾಯಿಲೆ ದೇಶದಲ್ಲಿ ಮತ್ತೆ ಸದ್ದು ಮಾಡುತ್ತಿದೆ , ಕೇರಳ ದಲ್ಲಿ ನೀಫಾ ದಾಳಿಗೆ ಜನರು ಅಕ್ಷರಶಃ ತತ್ತರಿಸಿದ್ದಾರೆ ,ಮೃತಪಟ್ಟವರ ಸಂಖ್ಯೆ ಎಂಟಕ್ಕೇರಿದೆ ,ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರದ ಪ್ರತ್ಯಾಕ ತಂಡ ಕೇರಳಕೆ ಆಗಮಿಸಿದ್ದು ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದೆ,ನೀಫಾ ಪೀಡಿತರ ಮೇಲೆ ವಿಶೇಷ ನಿಗಾ ವಹಿಸುವಂತೆ ನಿರ್ದೇಶನ ನೀಡಿದೆ .

ಏನಿದು ನೀಫಾ?
ಹೇನಿಪಾವೈರೆಸ್ ಕರೆಯಲ್ಪಡುವ ನೀಫಾ , ಪ್ರಾಣಿ ಹಾಗು ಮಾನವ ಇಬ್ಬರಲ್ಲೂ ಕಂಡುಬರುತ್ತದೆ .ಇದು ಮೆದುಳು ಹಾಗು ಹೃದಯಕ್ಕೆ ಹಾನಿಯುಂಟುಮಾಡಿ ಜೀವಕ್ಕೆ ಕುತ್ತು ತರಬಲ್ಲದು . ೧೧೯೮ ಮೊದಲು ಮಲೇಷ್ಯಾದ ನೀಫಾ ಎಂಬಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದರಿಂದ ಎಡಕ್ಕೆ ನೀಫಾ ಎಂದು ಹೆಸರು ಬಂದಿದೆ .೨೦೦೧ ರಲ್ಲಿ ಭಾರತ ದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದಾಗ ೪೫ ಮಂದಿಯನ್ನು ಬಲಿಪಡೆದಿತ್ತು .


ಹೇಗೆ ಹರಡುತ್ತೆ?
ಸಾಮಾನ್ಯವಾಗಿ ಈ ನೀಫಾ ಒಂದು ಬಗೆಯ ಬಾವಲಿ ಗಳಿದ ಹರಡ ಬಹುದಾದ ವೈರಸ್ ಆಗಿದೆ .ಬಾವಲಿ ಗಳು ತಿಂದಿರುವ ಹಣ್ಣು ಗಳ್ಳನ್ನು ತಿನ್ನುವುದರಿದ ಹಾಗು ಸೋಂಕಿತ ಪ್ರಾಣಿ ಪಕ್ಷಿಗಳಿಂದ ಹರಡುತ್ತೆ ಮತ್ತು ಸೋಂಕಿತ ಮಾನವನ ಎಂಜಲು ,ಬೆವರು ಕೆಮ್ಮು ಅಥವಾ ಸೀನಿದಾಗ ಬೇಗನೆ ಹರಡುತ್ತೆ .

ಲಕ್ಷಣಗಳು :
ಜ್ವರ ,ತಲೆನೋವು , ವಾಂತಿ ,ಮೂರ್ಛೆರೋಗ ಬರುವುದು . ಈ ಲಕ್ಷಣ ಗಳು ೧೦ ರಿಂದ ೧೨ ದಿನದ ವರೆಗೆ ಇರುತ್ತದೆ .ನಂತರ ಮಿದುಳು ಜ್ವರ ಕೆ ತಲುಪಿ ಸಾವು ಸಂಭವಿಸ ಬಹುದು .


ಮುಂಜಾಗೃತಾ ಕ್ರಮಗಳು :
ಪ್ರಾಣಿ ಪಕ್ಷಿಗಳು ತಿಂದ ಹಣ್ಣುಗಳನ್ನು ತಿನ್ನಬಾರದು, ನೆಗಡಿ ಕೆಮ್ಮು ಇರುವವರಿದ ಆದಷ್ಟು ದೂರವಿರಿ , ಬಾವಲಿಗಳು ಹೆಚ್ಚಿರಿವ ಪ್ರದೇಶದಲ್ಲಿ ಮದ್ಯ, ಸೇಂದಿ ಇನ್ನಿತರ ಆಹಾರ ದಿಂದ ದೂರವಿರಿ .

ಸೋಂಕು ನಿವಾರಣೆಗೆ ಸದ್ಯಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ

ಲೇಖಕ: ನಾಗೇಶ್ ಯಾದವ್