ಮತ್ತಿಬ್ಬರು ಶಾಸಕರು ಬಿ ಜೆ ಪಿ ಗೆ: ಜೆಡಿಎಸ್ ಕಾಂಗ್ರೆಸ್ ಗೆ ಶಾಕ್

ಮತ್ತಿಬ್ಬರು ಶಾಸಕರು ಬಿ ಜೆ ಪಿ ಗೆ: ಜೆಡಿಎಸ್ ಕಾಂಗ್ರೆಸ್ ಗೆ ಶಾಕ್

0

ಬೆಂಗಳೂರು, ಮೇ 19 : ಎಣಿಸಿದಂತೆ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಅವರು ನಾಪತ್ತೆಯಾಗಿದ್ದಾರೆ. ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ ಅವರು ಬಿಜೆಪಿಗೆ ವಿಶ್ವಾಸಮತದಲ್ಲಿ ಬೆಂಬಲ ನೀಡುತ್ತಾರೆ ಎಂದು ಸುದ್ದಿ ಹಬ್ಬಿತ್ತು.

ಆನಂದ್ ಸಿಂಗ್ ಅವರು ಎಲ್ಲೂ ನಾಪತ್ತೆಯಾಗಿಲ್ಲ, ಅವರು ದೆಹಲಿಗೆ ಹೋಗಿದ್ದಾರೆ, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಅವರು ಖಂಡಿತ ಸದನಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ, ಕಾಂಗ್ರೆಸ್ ನಿರೀಕ್ಷೆಯಂತೆ ಅವರು ಸದನಕ್ಕೆ ಬಂದಿಲ್ಲ.

ಹೀಗಾಗಿ ಕಾಂಗ್ರೆಸ್ಸಿಗೆ ಒಂದು ಮತ ಕಡಿಮೆಯಾದಂತೆ ಮತ್ತು ಬಿಜೆಪಿಗೆ ಒಂದು ಮತ ಸೇರ್ಪಡೆಯಾಗುವುದೂ ತಪ್ಪಿದೆ. ಈ ಬಗ್ಗೆ ವಿಚಾರಿಸಿದಾಗ, ತಾವು ಯಾವ ಪಕ್ಷದ ಪರವೂ ಮತ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಹೊಸಪೇಟೆ ಕ್ಷೇತ್ರದಿಂದ ಜಯಗಳಿಸಿರುವ ಆನಂದ್ ಸಿಂಗ್ ಫಲಿತಾಂಶ ಬಂದಾಗಿನಿಂದಲೂ ಕಾಣಿಸಿಕೊಂಡಿರಲಿಲ್ಲ.ನಾನು ಯಾವುದೇ ಪಕ್ಷಕ್ಕೂ ಬೆಂಬಲ ಕೊಡಲ್ಲ. ನನ್ನನ್ನು ಈ ಬಾರಿ ಕ್ಷಮಿಸಿಬಿಡಿ. ಎರಡು ದಿನಗಳಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ‘ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಅವರೊಂದಿಗೆ ಕಾಂಗ್ರೆಸ್ ನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ ಅವರು ಕೂಡ ಸದನಕ್ಕೆ ಹಾಜರಾಗಿಲ್ಲ. ಹೀಗಾಗಿ ಮತ್ತೊಂದು ಸಂಖ್ಯೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಕಡಿಮೆಯಾಗುವುದು ಗ್ಯಾರಂಟಿ. 117 ಸಂಖ್ಯಾಬಲವಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಇವರಿಬ್ಬರ ಗೈರಿನಿಂದಾಗಿ 115ಕ್ಕೆ ಇಳಿಯಲಿದೆ. ಬಹುಮತ ಸಾಬೀತಿಗೆ ಬೇಕಿರುವುದು 112 ಸಂಖ್ಯೆ.

ಇವರಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರು. ಇನ್ನೂ ಇಪ್ಪತ್ತು ಲಿಂಗಾಯತ ನಾಯಕರಿದ್ದು, ಅವರು ಯಾವ ಪಕ್ಷದ ಪರವಾಗಿ ಮತ ಹಾಕುತ್ತಾರೆ ಎಂಬುದು ಸಂಜೆ 4 ಗಂಟೆಗೆ ತಿಳಿದುಬರಲಿದೆ. ವಿಶ್ವಾಸಮತದ ಫಲಿತಾಂಶದ ಮೇಲೆ ಯಡಿಯೂರಪ್ಪ ಅವರ ಭವಿಷ್ಯವೂ ನಿಂತಿದೆ.