ರಾಹುಲ್ ಗಾಂಧಿಗೆ ಟ್ವೀಟ್ ನಲ್ಲಿ ಬಿಸಿ ಮುಟ್ಟಿಸಿದ ಚಾಣಕ್ಯ

ರಾಹುಲ್ ಗಾಂಧಿಗೆ ಟ್ವೀಟ್ ನಲ್ಲಿ ಬಿಸಿ ಮುಟ್ಟಿಸಿದ ಚಾಣಕ್ಯ

0

ಪ್ರಮಾಣವಚನ ಸ್ವೀಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನಡುರಾತ್ರಿ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಭಾರತೀಯ ಜನತಾ ಪಕ್ಷ ಮತ್ತು ಯಡಿಯೂರಪ್ಪ ನಿರಾಳರಾಗಿದ್ದಾರೆ. ದಿನಬೆಳಗಾಗುತ್ತಲೇ ಯಡಿಯೂರಪ್ಪನವರ ಪ್ರಮಾಣವಚನ ಸ್ವೀಕಾರ ಸಮಾರಂಭವೂ ಮುಗಿದುಹೋಗಿದೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ವಿರೋಧಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಇಂದು ಪ್ರಜಾಪ್ರಭುತ್ವದ ಸೋಲಿಗೆ ದೇಶದ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡುವ ಮೂಲಕ ಬಿ ಜೆ ಪಿ ರವರಿಗೆ ಮಾತಿನ ಏಟು ನೀಡಲು ಪ್ರಯತ್ನಿಸಿದರು.

ಈ ಟ್ವೀಟ್ ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಚಾಣಕ್ಯ ಅಮಿತ್ ಶಾ ರೀ ಟ್ವೀಟ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಪ್ರಜಾಪ್ರಭುತ್ವದ ಹತ್ಯೆ ಯಾವಾಗ ಆಯ್ತು ಅಂದ್ರೆ ಅವಕಾಶವಾದಿ ಕಾಂಗ್ರೆಸ್ ಪಕ್ಷವು, ಜೆಡಿಎಸ್ ಜೊತೆ ಕೈಜೋಡಿಸುವುದಕ್ಕೆ ಮುಂದಾದಾಗ, ಆದರೆ ಅದು ಕರ್ನಾಟಕದ ಕಲ್ಯಾಣಕ್ಕಾಗಿ ಅಲ್ಲ, ಬದಲಾಗಿ, ಆ ಪಕ್ಷದ ಕ್ಷುಲಕ ರಾಜಕೀಯ ಲಾಭಕ್ಕಾಗಿ ಎಂದು ಪ್ರತಿಕ್ರಿಯಿಸಿದ್ದಾರೆ.

ಬಹುಮತದ ಕೊರತೆಯ ನಡುವೆಯೂ ಯಡಿಯೂರಪ್ಪನವರು ನೂತನ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಅಂದುಕೊಂಡಂತೆ 17ರಂದೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಬಿ ಜೆ ಪಿ ಬಹುಮತ ಸಾಭೀತು ಪಡಿಸದೆ ಅಧಿಕಾರಕ್ಕೆ ಬಂದಿರುವುದಕ್ಕೆ ನಿಮ್ಮ ಸಹಮತವಿದ್ದಲ್ಲಿ ಶೇರ್ ಮಾಡಿ.