ಶುರುವಾಗಿ ಬಿಟ್ಟೀತೆ ಆಪರೇಷನ್ ಕಮಲ? ಮೂರು ಶಾಸಕರು ಬಿಜೆಪಿ ಗೆ?

ಶುರುವಾಗಿ ಬಿಟ್ಟೀತೆ ಆಪರೇಷನ್ ಕಮಲ? ಮೂರು ಶಾಸಕರು ಬಿಜೆಪಿ ಗೆ?

0

ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸರ್ಕಾರ ರಚಿಸುವ ಬಗ್ಗೆ  ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಸರ್ಕಸ್ ನಡೆಯುತ್ತಿದೆ. ಶತಾಯ ಗತಾಯ ಸರ್ಕಾರ ಮಾಡಿಯೇ ಸಿದ್ದ ಎಂದು ಹೊರಟಿರುವ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.  ಆಪರೇಶನ್ ಕಮಲ ಶುರು ಮಾಡಿದೆ.

ಮಂಗಳವಾರ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸಂಜೆ ವೇಳೆ ಕೇಂದ್ರ ಸಚಿವರಾದ ಪ್ರಕಾಶ್ ಜಾವ ಡೇಕರ್, ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್ ಮೊದಲಾದವರು ನಗರಕ್ಕೆ ಆಗಮಿಸಿ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ ಪಕ್ಷವು ಸರ್ಕಾರ ರಚಿಸಬಹುದು ಎಂಬುದನ್ನು ಸುಪ್ರೀಂಕೋರ್ಟ್ ತಿಳಿಸಿದೆ. ಅದರಂತೆ ಪಕ್ಷವು ಮುಂದುವರಿಯಲಿದೆ. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯ ರಾಜಕಾರಣ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ಮೂಲಕ ಜೆಡಿಎಸ್‌ಗೆ ಗಾಳ ಹಾಕಲು ಹೊರಟಿದೆ.  3 ಜೆಡಿಎಸ್ ಶಾಸಕರ ಆಪರೇಷನ್‌ಗೆ  ಬಸವರಾಜು ಹೊಣೆ ಹೊತ್ತಿದ್ದಾರೆ. ತಮ್ಮ ಭಾಗದ 3 ಜೆಡಿಎಸ್  ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಜೆಡಿಎಸ್ ಶಾಸಕರು ನಿರಂತರವಾಗಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರನ್ನು ನಾನು ಪಕ್ಷಕ್ಕೆ ಕರೆ ತರುತ್ತೇನೆ ಎಂದು ಬಿಎಸ್ ವೈಗೆ ಭರವಸೆ ನೀಡಿದ್ದಾರೆ. . ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದೆ ಎಂದು ಸುವರ್ಣನ್ಯೂಸ್‌ಗೆ ಬಿಜೆಪಿ ಉನ್ನತ ಮೂಲಗಳು ಮಾಹಿತಿ ನೀಡಿದೆ

ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಅಮಿತ್ ಶಾ ಭೀತಿ ಶುರುವಾಗಿದೆ.

ಎಲ್ಲಿ ನಮ್ಮ ಶಾಸಕರನ್ನ ಹೈಜಾಕ್ ಮಾಡಿಸುತ್ತಾರೋ ಅನ್ನುವ ಭಯ ಶುರುವಾಗಿದೆ.  ಕೇರಳದತ್ತ ಉಭಯ ಪಕ್ಷಗಳ ಶಾಸಕರ ಚಿತ್ತ ನೆಟ್ಟಿದೆ.  ಕೇರಳದ ಕೊಚ್ಚಿನ್ ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.  ವಿಶೇಷ ವಿಮಾನಗಳಲ್ಲಿ ಶಾಸಕರನ್ನ ಕರೆದುಕೊಂಡು ಹೋಗುವ ಮಾಹಿತಿ ಇದೆ.  ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನ ಪ್ರತ್ಯೇಕವಾಗಿ ಬೇರೆ ಬೇರೆ ರೆಸಾರ್ಟ್’ಗಳಿಗೆ ಕರೆದುಕೊಂಡು ಹೋಗಬೇಕೋ ಅಥವಾ ಒಂದೆಡೆ ಸೇರಿಸಬೇಕೋ ಅನ್ನೋದರ ಬಗ್ಗೆ ಅಂತಿಮ ನಿರ್ಧಾರವಾಗಬೇಕಿದೆ.  ವಿಶೇಷ ಬಸ್ ಮೂಲಕ ಕರೆದುಕೊಂಡು ಹೋಗುವ ಚಿಂತನೆಯೂ ಇದೆ.

ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯನ್ನು ಸಂಪರ್ಕಿಸುತ್ತಿದ್ದಾರೆ. ಆ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬೇಕಿಲ್ಲವಂತೆ. ಅವರಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯಾರು ಎಷ್ಟು ಅಂತಾ ಈಗ ಹೇಳಲ್ಲ ಎಂದ ಈಶ್ವರಪ್ಪ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಇತ್ತ ಈಶ್ವರಪ್ಪ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಬಿ.ಎಸ್.ಯಡಿಯೂರಪ್ಪರ ಮನೆಗೆ ಕರೆತಂದಿದ್ದಾರೆ. ಈಶ್ವರಪ್ಪರ ದೂರದ ಸಂಬಂಧಿಯಾಗಿರುವ ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.