ಬ್ರೇಕಿಂಗ್ : ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಅವಕಾಶ ಕೇಳಿದ ಬಿಜೆಪಿ

ಬ್ರೇಕಿಂಗ್ : ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಅವಕಾಶ ಕೇಳಿದ ಬಿಜೆಪಿ

0

ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮೇ 12ರಂದು ನಡೆದ ಚುನಾವಣೆ ನಡೆದಿದ್ದು ಬಿಜೆಪಿ 104 ಸ್ಥಾನಗಳನ್ನು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರ್ಕಾರ ರಚನೆಗೆ ಬೇಕಿರುವ ಮಾಂತ್ರಿಕ ಸಂಖ್ಯೆಯಿಂದ 9 ಸ್ಥಾನಗಳಷ್ಟು ದೂರವಿದೆ. ಈ ಅವಕಾಶವನ್ನು ಬಳಸಿಕೊಂಡು 78 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ದಾಳ ಉರುಳಿಸಿ 38 ಸ್ಥಾನ ಗಳಿಸಿರುವ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ನಾನು ಯಾವುದೇ ಷರತ್ತುಗಳಿಲ್ಲದ ಬೆಂಬಲ ನೀಡುವುದಾಗಿ ಘೋಷಿಸಿದೆ. ಇದು ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು.

ಈ ನಡುವೆ ರಾಜ್ಯದಲ್ಲಿ ಸಮಿಶ್ರ ಸರ್ಕಾರ ರಚನೆ ಮಾಡುವುದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ಒಂದು ಸುತ್ತಿನ ಮಾತುಕಥೆ ಕೂಡ ನಡೆದು ಹೋಗಿದ್ದು ಹೆಚ್.ಡಿ ಕುಮಾರ ಸ್ವಾಮಿ ಸರ್ಕಾರ ರಚನೆ ಮಾಡುವ ಬಗ್ಗೆ ಹಕ್ಕನ್ನು ಮಂಡಿಸುವ ಸಲುವಾಗಿ ರಾಜ್ಯಪಾಲರ ಬಳಿ ಸಮಯವನ್ನು ಕೇಳಿದ್ದಾರೆ.

ಅವಕಾಶ ಕೊಟ್ಟರೆ ಬಹುಮತ ಸಾಬೀತು ಪಡಿಸುವ ಈ ಅಂಶವನ್ನು ರಾಜ್ಯಪಾಲರಿಗೆ ಅರುಹಿದ್ದೇವೆ ಎಂದ ಯಡಿಯೂರಪ್ಪ ತಿಳಿಸಿದರು.

‘ಇದು ಹೊಲಸು ರಾಜಕೀಯ. ಇದೆಂಥ ಮೈತ್ರಿ. ನಾವು ಖಂಡಿಸುತ್ತೇವೆ’ –ಇದು ಯಡಿಯೂರಪ್ಪ ಅವರ ಖಡಕ್ ಮಾತು.

ವಿಧಾನಸಭೆ ಚುನಾವಣೆ ಫಲಿತಾಂಶದ ಚಿತ್ರಣ ಸ್ಪಷ್ಟವಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಸಮ್ಮತಿಸಿದೆ. ಇದೆ ಬೆನ್ನಲ್ಲೆ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಿಂದ ಸರ್ಕಾರ ರಚಿಸುವುದು ಸರಿಯಲ್ಲ. ಇದು ಹೊಲಸು ರಾಜಕೀಯ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ವಿರೋಧಿ ಮತಗಳು ನಿರ್ಣಾಯಕವಾಗಿ ಜೆಡಿಎಸ್‌ಗೆ ಹೋಗಿವೆ. ಜನರ ಆರ್ಶೀವಾದದಿಂದ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ’ ಎನ್ನುವುದು ಅವರ ಖಚಿತ ನುಡಿ.

‘ಬಿಜೆಪಿ ಶಾಸಕರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಸರ್ಕಾರ ರಚನೆಗೆ ಅವಕಾಶ ಕೋರಿ ನಾವು ರಾಜ್ಯಪಾಲರ ಭೇಟಿಗೆ ಹೋಗುತ್ತಿದ್ದೇವೆ. ಜನಾದೇಶ ನಮ್ಮ ಪರವಾಗಿದೆ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದನ್ನು ಖಂಡಿಸುತ್ತೇವೆ’ ಎಂದು ಅವರು ಘೋಷಿಸಿದರು.