ಅತ್ಯಾಚಾರ ಮುಕ್ತ ಭಾರತಕ್ಕೆ ಮೋದಿ ಪಣ – ಅತ್ಯಾಚಾರವೆಸಗಿದರೆ ಗಲ್ಲು

ಅತ್ಯಾಚಾರ ಮುಕ್ತ ಭಾರತಕ್ಕೆ ಮೋದಿ ಪಣ – ಅತ್ಯಾಚಾರವೆಸಗಿದರೆ ಗಲ್ಲು

0

ಹೌದು, ಮಕ್ಕಳ ಮೇಲೆ ಅತ್ಯಾಚಾರವೆಸಗುವವರಿಗಿನ್ನು ಗಲ್ಲು ಶಿಕ್ಷೆ ಪ್ರಕಟಿಸಿದ ಮೋದಿ ಸರ್ಕಾರ

ಭಾರತದಲ್ಲಿ ನಡೆಯುತ್ತಿರುವ ಮಕ್ಕಳ ಮೇಲೆ ಅತ್ಯಾಚಾರವೆಸಗುವಂತಹ ಪೈಶಾಚಿಕ ಕೃತ್ಯಗಳಿಗೆ ಬ್ರೇಕ್​ ಹಾಕುವುದಕ್ಕೆ ಮುಂದಾಗಿರು ಸರ್ಕಾರ 12 ವರ್ಷಕ್ಕಿಂತ ಚಿಕ್ಕ ಮಕ್ಕಳ ಮೇಲೆ ನಡೆಸುವ ಅತ್ಯಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ನೀಡಲು ಕಾನೂನಿಗೆ ತಿದ್ದುಪಡಿ  ತಂದಿದೆ ಕೆಂದ್ರ ಸರ್ಕಾರ.

ಇತ್ತೀಚೆಗೆ ನಡೆದಿರುವ ಕತುವಾ ಮತ್ತು ಉನ್ನೂವೋ ದಲ್ಲಿ ನಡೆದಿರುವ ಅತ್ಯಚಾರ ಮತ್ತು ಕೊಲೆ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಮೇನಕ ಗಾಂಧಿ ಅವರು ಇಂತಹ ಕೃತ್ಯವೆಸಗುವವರಿಗೆ ಗಲ್ಲುಶಿಕ್ಷೇ ವಿಧಿಸಬೇಕು ಎಂದು ಆಗ್ರಹಿಸಿದ್ದರು ಈ ಬಗ್ಗೆ ಸಂಸತ್ತಿನಲ್ಲಿ ಟಿಪ್ಪಣಿ ಒಂದನ್ನು ಹೊರಡಿಸಿ 12 ವರ್ಷದಿಂದ ಕೆಳಗಿನ ಮಕ್ಕಳ ಮೇಲೆ ನಡೆಯುವ ಮೃಗೀಯ ಘಟನಗಳಿಗೆ ಅನ್ವಯಿಸುವಂತೆ ಪೊಕ್ಸೋ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ರಚನೆಗೆ ಮುನ್ನುಡಿ ಬರೆಯುವುದಾಗಿ ಹೇಳಿದ್ದಾರೆ.

ಕುತುವಾ ಮತ್ತು ಉನ್ನಾವೋ ಪ್ರಕರಣದ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿಕೆ ಸಿಂಗ್​ ‘‘ನಾವೆಲ್ಲರೂ ಮನುಷ್ಯರಾಗಿ ವಿಫಲರಾಗಿದ್ದೇವೆ, ಅವರಿಗೆ ನ್ಯಾಯ ಕೊಡಿಸೋಣ ಎಂದು ಹೇಳಿದ್ದರು.

ಈಗಾಗಲೇ ದೇಶಾಧ್ಯಂತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್​ ದೇಶಾಧ್ಯಂತ ಪ್ರತಿಭಟನೆ ನಡೆಸಿದ್ದಾರೆ.

ಪೋಕ್ಸ್​ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕಾಮಿ ಕ್ರಿಮಿಗಳಿಗೆ ಗಲ್ಲು ಶಿಕ್ಷೆ ವಿದಿಸಿದ್ದರಿಂದ ಸಮಾಜದಲ್ಲಿ ಸ್ವಲ್ಪ ಭಯ ಬರುತ್ತದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಹೊರಬೀದ್ದಿದೆ. ಇಂದು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆ ಇದ್ದಂತಹ ಫೋಕ್ಸೊ ಕಾಯಿದೆ ಬದಲಾಗಲಿದೆ.

ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾಯಿದೆಯ ತಿದ್ದುಪಡಿಯ ಮೂಲಕ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ದೇಶದೆಲ್ಲೆಡೆ ಕಠಿಣ ಸಂದೇಶ ರವಾನಿಸಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ಕಥುವಾ ಮತ್ತು ಉನ್ನಾವೋ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ವ್ಯಕ್ತವಾದ ರಾಷ್ಟ್ರಾದ್ಯಂತದ ಆಕ್ರೋಶ ಮತ್ತು ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆಯ ಶಿಕ್ಷೆ ನೀಡಬೇಕೆಂಬ ಆಗ್ರಹ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ  ಅತ್ಯುಗ್ರ ವಿಧೇಯಕವನ್ನು ಪಾಸು ಮಾಡಿದೆ.

16 ವರ್ಷ ಪ್ರಾಯದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಈಗಿರುವ ಕನಿಷ್ಠ 10 ವರ್ಷ ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ಏರಿಸಲಾಗಿದ್ದು ಇದನ್ನು ಜೀವಾವಧಿಗೆ ವಿಸ್ತರಿಸಲಾಗುವುದು.

ಅತ್ಯಾಚಾರ ಪ್ರಕರಣಗಳ ತ್ವರಿತ ನ್ಯಾಯ ತೀರ್ಮಾನಕ್ಕಾಗಿ ಸಚಿವ ಸಂಪುಟ ಹಲವು ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಈ ವಿಧೇಯಕವನ್ನು ಈಗಿನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗುವುದು.

ಈ ದಿಟ್ಟ ನಿರ್ಧಾರಕ್ಕೆ ನಿಮ್ಮ ಬೆಂಬಲವಿದ್ದಲ್ಲಿ ಶೇರ್ ಮಾಡಿ