ಬ್ರೇಕಿಂಗ್ ನ್ಯೂಸ್: ರಾಜಕೀಯ ಸಾಕು.!! ಭಾರತದ ಈ ಹೆಮ್ಮೆಯ ಕ್ರೀಡಾ ಪಟುಗಳು ಮಾಡಿರುವ ಸಾಧನೆ ಬಗ್ಗೆ ಓದಲು ಸಮಯ ಇದೆಯೇ..!??

ಬ್ರೇಕಿಂಗ್ ನ್ಯೂಸ್: ರಾಜಕೀಯ ಸಾಕು.!! ಭಾರತದ ಈ ಹೆಮ್ಮೆಯ ಕ್ರೀಡಾ ಪಟುಗಳು ಮಾಡಿರುವ ಸಾಧನೆ ಬಗ್ಗೆ ಓದಲು ಸಮಯ ಇದೆಯೇ..!??

0

ಹೌದು!! ದಿನಬೆಳಗಾದರೆ ನಾವು ರಾಜಕೀಯ ಸುದ್ದಿಗಳತ್ತ ಬಹಳ ಗಮನ ಹರಿಸುತ್ತೆವೆ, ಆದರೆ ಆ ಭರದಲ್ಲಿ ನಮ್ಮ ದೇಶದ ಹೆಮ್ಮೆಯ ಕ್ರೀಡಾ ಪಟುಗಳು ಮಾಡಿರುವ ಸಾಧನೆ ಬಗ್ಗೆ ತಿಳಿದುಕೊಳ್ಳವ ಗೊಜಿಗೆ ಹೋಗುವುದಿಲ್ಲ.

ಅಷ್ಟಕು ಇಗ ಯಾರು? ಯಾವ ಸಾಧನೆ ಮಾಡಿದ್ದಾರೆ ಗೊತ್ತಾ..!!

ಕನ್ನಡಿಗ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್‌‌..!!

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಪುರುಷರ 56 ಕೆಜಿ ವಿಭಾಗದಲ್ಲಿ ಒಟ್ಟು 249 ಕೆಜಿ ಭಾರ ಎತ್ತಿದ ಅವರು, ಸ್ಕ್ಯಾಚ್ ವಿಭಾಗದಲ್ಲಿ 111 ಕೆಜಿ, ಕ್ಲೀನ್ ಎಂಡ್ ಜರ್ಕ್ ವಿಭಾಗದಲ್ಲಿ 138 ಕೆಜಿ ಎತ್ತುವುದರ ಮೂಲಕ ಪದಕ ಗೆದ್ದಿದ್ದಾರೆ. ಗುರುರಾಜ್ ಮೊದಲ ಪದಕವನ್ನು ಜಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಭಾರತೀಯ ವಾಯುಪಡೆ ಉದ್ಯೋಗಿಯಾಗಿರುವ ಗುರುರಾಜ್, ಟ್ರಕ್ ಚಾಲಕರ ಪುತ್ರರಾಗಿದ್ದಾರೆ. ಇದೀಗ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಂಢೀಗಡ್ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ್ ಪ್ರತಿದಿನ 4 ಘಂಟೆ ಅಭ್ಯಾಸಕ್ಕೆ ತೆರಳುತ್ತಿದ್ದರು. ಚಿನ್ನ ಗೆದ್ದ ಖುಷಿಯಲ್ಲಿರುವ ಗುರುರಾಜ್ ತನ್ನ ಸಾಧನೆಗೆ ತಂದೆ-ತಾಯಿ, ಕ್ರೀಡೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕರು ಹಾಗೂ ಕೋಚ್ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳುತ್ತಿದ್ದಾರೆ.

ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್ ಶಿಪ್‍ನಲ್ಲಿ ಕಂಚು ಪದಕ ಹಾಗೂ 2016 ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಗುರುರಾಜ್ ಚಿನ್ನದ ಪದಕ ಗೆದ್ದಿದ್ದರು. 2016ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಘೋಷಣೆ ಮಾಡಿದ್ದರು.

ಮೀರಾಬಾಯಿ ಚಾನು ಮೊದಲ ಚಿನ್ನದ ಪದಕ..!!

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತದ ಮಣಿಪುರ ಮೂಲದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮೊದಲ ಚಿನ್ನದ ಪದಕವನ್ನು ಗೆದ್ದಿದ್ದು ಮಹಿಳೆಯರ 48 ಕೆಜಿ ವಿಭಾಗದಲ್ಲಿ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ ದಾಖಲೆ ಮಾಡಿದ್ದಾರೆ.

ಈ ಸಾಧನೆ ಬಳಿಕ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹೀಗೆ ಹೇಳಿದ್ದಾರೆ.

“ದಾಖಲೆಗಳನ್ನು ಮುರಿಯುವ ನಿರೀಕ್ಷೆಯನ್ನು ನಾನು ಮಾಡಿರಲಿಲ್ಲ. ಇಲ್ಲಿಗೆ ಬಂದ ಮೇಲೆ ನಾನು ದಾಖಲೆಗಳನ್ನು ಮುರಿಯಲೇ ಬೇಕಾಗಿತ್ತು. ನನಗೆ ಆಗುತ್ತಿರುವ ಸಂತಸವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಮತ್ತು ನಾನು ಈ ಪದಕ ಪಡೆಯಲು ತುಂಬಾ ಕಷ್ಟಪಟ್ಟಿದ್ದೆ. ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ಪದಕವಾಗಿದೆ. ಚಿನ್ನ ಗೆದ್ದಿರುವುದು ಬಹಳ ಸಂತಸ ತಂದಿದೆ ಎಂದರು.”

“ನನ್ನ ಮುಂದಿನ ಗುರಿ ಏಷ್ಯಾನ್ ಗೇಮ್ಸ್. ಅಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ನಾನು ತುಂಬಾನೇ ಕಷ್ಟಪಡಬೇಕಾಗಿದೆ. ಮುಂದಿನ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡಬೇಕು. ಆದರೆ ಇಲ್ಲಿ ಅಂತಹ ಪ್ರತಿಸ್ಪರ್ಧೆ ಇರಲಿಲ್ಲ ಎಂದು ತಿಳಿಸಿದರು.”

ಸ್ನ್ಯಾಚ್ ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 110 ಕೆಜಿ ಎತ್ತುವ ಮೂಲಕ ಮೀರಾಬಾಯಿ ಚಿನ್ನವನ್ನು ಗೆದ್ದರು. ಈ ವಿಭಾಗದಲ್ಲಿ ಶ್ರೀಲಂಕಾ ದಿನುಶಾ 155 ಕೆಜಿ ಎತ್ತುವ ಮೂಲಕ ಕಂಚು ಗೆದ್ದರೆ, ಮಾರಿಷಸ್ ನ ಮಾರಿ ಹನಿಟ್ರಾ 170 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು. ಒಂದು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಕೃಪೆ: ಪಬ್ಲಿಕ್ ಟಿವಿ