‘ರಾಮ ಸೇತು’ ಬಗ್ಗೆ ನಿಮಗೆ ಗೊತ್ತಿರದ ಕೆಲವು ಅಂಶಗಳು…!!ಪ್ರತಿಯೊಬ್ಬ ಹಿಂದೂ ಓದಲೇಬೇಕಾದದು.!

‘ರಾಮ ಸೇತು’ ಬಗ್ಗೆ ನಿಮಗೆ ಗೊತ್ತಿರದ ಕೆಲವು ಅಂಶಗಳು…!!ಪ್ರತಿಯೊಬ್ಬ ಹಿಂದೂ ಓದಲೇಬೇಕಾದದು.!

0

ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.

ಇಲ್ಲಿದೆ ನೋಡಿ ರಾಮ ಸೇತು ಬಗ್ಗೆ ನಿಮಗೆ ತಿಳಿಯದೇ ಇರುವ ಕೆಲವು ಅಂಶಗಳು…!!

ರಾಮಾಯಣದ ಪ್ರಕಾರ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರುವ ಸಲುವಾಗಿ ರಾಮ ಸೇತು ನಿರ್ಮಾಣ ಮಾಡಿರುವುದು ನಳ್‌ ಮತ್ತು ನೀಲ್‌.

ವಾಸ್ತುಶಿಲ್ಪಿ ನಳದ ಅಧಿಪತ್ಯದಲ್ಲಿ ಹತ್ತು ದಶ ಲಕ್ಷ ವಾನರರು ಇದನ್ನು ಐದು ದಿನಗಳಲ್ಲಿ ನಿರ್ಮಾಣ ಮಾಡಿದ್ದಾರೆ.

ರಾಮ ಸೇತು ಸುಮಾರು 1.7 ಮಿಲಿಯನ್‌ ವರ್ಷಗಳಷ್ಟು ಹಳೆಯ ಸೇತುವೆಯಾಗಿದೆ. ಇದನ್ನು ಸುಣ್ಣದ ಕಲ್ಲುಗಳ ರಾಶಿಯಿಂದ ನಿರ್ಮಾಣ ಮಾಡಲಾಗಿದೆ.

ಇದು 30 ಕಿ.ಮೀ ಉದ್ದ ಹಾಗೂ 3 ಕಿಮೀ ಅಗಲ ಇದೆ.

ಇದು ಭಾರತದ ಪಂಬನ್‌ ದ್ವೀಪ, ಧನುಷ್ಕೋಟಿಯಲ್ಲಿ ಆರಂಭವಾಗಿ ಶ್ರೀಲಂಕಾದ ಮನ್ನರ್‌ ದ್ವೀಪದಲ್ಲಿ ಕೊನೆಗೊಳ್ಳುತ್ತದೆ.

ಈ ಸೇತುವೆ ನಿರ್ಮಾಣ ಮಾಡಲು ತೇಲುವ ಕಲ್ಲುಗಳನ್ನು ಬಳಸಲಾಯಿತು ಎಂದು ಹೇಳಲಾಗಿದೆ. ಇದು ನಿಜವೆಂದು ತ್ಸುನಾಮಿ ಸಮಯದಲ್ಲಿ ತಿಳಿದು ಬಂದಿದೆ.

ರಾಮಾಯಣದಲ್ಲಿ ಹೇಳಲಾದ ಆ ಸೇತುವೆಯ ಜಾಗ ಇಂದು ಅದು ದೊರಕಿರುವ ಜಾಗಕ್ಕೆ ಸರಿಯಾಗಿ ಹೋಲಿಕೆಯಾಗುತ್ತದೆ.