ಇತ್ಯರ್ಥವಾಗದೆ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಲಕ್ಷಾಂತರ ಮೊಕದ್ದಮೆಗಳನ್ನು ಬೇಗ ಬಗೆಹರಿಸಲು ಮೋದಿ ಸರ್ಕಾರದ ಮಾಸ್ಟರ್ ಪ್ಲಾನ್.!!ಏನು ಗೊತ್ತಾ‌‌..!?

ಇತ್ಯರ್ಥವಾಗದೆ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಲಕ್ಷಾಂತರ ಮೊಕದ್ದಮೆಗಳನ್ನು ಬೇಗ ಬಗೆಹರಿಸಲು ಮೋದಿ ಸರ್ಕಾರದ ಮಾಸ್ಟರ್ ಪ್ಲಾನ್.!!ಏನು ಗೊತ್ತಾ‌‌..!?

0

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ. ಭಾರತವನ್ನು ವಿಶ್ವಗುರು ಮಾಡಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಗ ಮತೊಂದು ಸಮಸ್ಯೆಯನ್ನು ತಮ್ಮದೇ ಶೈಲಿಯಲ್ಲಿ ಪರಿಹರಿಸಲು ಮುಂದಾಗಿದ್ದಾರೆ‌.

ಅಷ್ಟಕು ಏನದು ಸಮಸ್ಯೆ ?? ಏನದು ಪರಿಹಾರ ..!!

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಖ್ಯ ಸಮಸ್ಯೆ ಎಂದರೆ ಅದು ವಿಳಂಬವಾಗಿ ಮೊಕದ್ದಮೆಗಳು ಪರಿಹರಿಸುವುದು‌. ಒಂದೆಡೆ ಅರ್ಜಿಗಳ ಹಿಮಪಾತವಾಗುತ್ತಿದೆ. ಇನ್ನೊಂದೆಡೆ ಅರ್ಜಿಗಳ ತ್ವರಿತವಾಗಿ ಇತ್ಯರ್ಥವಾಗುವುದು.

1987ರಿಂದ ಯಾವುದೇ ಪ್ರಗತಿ ಕಂಡಿಲ್ಲ. 50 ಲಕ್ಷ ಜನಕ್ಕೆ 10 ನ್ಯಾಯಾಧೀಶರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಸಂಖ್ಯೆಯನ್ನು 50ಕ್ಕೆ ಏರಿಸಬೇಕು ಎಂದು ನ್ಯಾಯಾಂಗ ಆಯೋಗ 87ರಲ್ಲೇ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ಬಗ್ಗೆ ನಿಷ್ಕ್ರಿಯವಾಗಿತ್ತು. ನ್ಯಾಯಾಧೀಶರ ಹೆಚ್ಚಳ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮೂಲಸೌಕರ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆಯಾಗಿದೆ.

ಅರ್ಜಿದಾರರ ಅಥವಾ ಜೈಲಲ್ಲಿ ಕೊಳೆಯುತ್ತಿರುವವರ ಪ್ರಶ್ನೆ ಅಲ್ಲ, ದೇಶದ ಅಭಿವೃದ್ಧಿಯೂ ಇದರಲ್ಲಿ ಅಡಗಿದೆ. ನ್ಯಾಯದಾನ ವಿಳಂಬಕ್ಕೆ ಸೂಕ್ತ ಪರಿಹಾರ ಹುಡುಕುವುದು ಅವಶ್ಯವಾಗಿದೆ.

ಜಡ್ಜ್ ಗಳ ಕೊರತೆ ಆದದ್ದು ಹೀಗೆ…!!

1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದಾಗ ಇದರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ಸೇರಿ 8 ನ್ಯಾಯಾಧೀಶರು ಇದ್ದರು. ಆಗ 1215 ಕೇಸುಗಳು ಇದ್ದವು. ಪ್ರತಿ ಜಡ್ಜ್’ಗಳಿಗೆ ಸರಾಸರಿ 100 ಪ್ರಕರಣಗಳಿದ್ದವು.

1960ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ ಗಳ ಬಲ 14ಕ್ಕೇರಿತು. ಪ್ರಕರಣಗಳ ಸಂಖ್ಯೆ 3247ಕ್ಕೇರಿತು.

1977ರಲ್ಲಿ 18 ನ್ಯಾಯಾಧೀಶರಿದ್ದರು. 14,501 ಪ್ರಕರಣಗಳು ಬಾಕಿ ಇದ್ದವು.

2009ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ಗಳ ಸಂಖ್ಯೆ 31ಕ್ಕೇರಿತು. ಆದರೆ ಪ್ರಕರಣಗಳ ಸಂಖ್ಯೆ 77,181ಕ್ಕೇರಿತು.

ಇನ್ನೂ ಈ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (NCRB) ವರದಿಯಲ್ಲಿ ನ್ಯಾಯದಾನ ವಿಳಂಬ ವರ್ಷದಿಂದ ವರ್ಷಕ್ಕೆ ಕಳಪೆಯಾಗುತ್ತಿದೆ ಎಂದು ಉಲ್ಲೇಖಿಸಿದೆ.

ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 2.7-3 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಈ ಪ್ರಕರಣಗಳ ಬಹುಪಾಲು ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.

ಅಷ್ಟಕು ಈ ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರದ ಮಾಸ್ಟರ್ ಪ್ಲಾನ್..!ಏನು ಗೊತ್ತಾ‌‌..!?

ಇತ್ಯರ್ಥವಾಗದೆ ನ್ಯಾಯಾಲಯದಲ್ಲಿ ಉಳಿದ ಲಕ್ಷಾಂತರ ಮೊಕದ್ದಮೆಗಳನ್ನು ಬೇಗ ಬಗೆಹರಿಸಲು ಮೋದಿ ಸರ್ಕಾರ ಶೀಘ್ರದಲ್ಲೇ ‘ಜಸ್ಟೀಸ್ ಕ್ಲಾಕ್ಸ್’ -(ನ್ಯಾಯ ಗಡಿಯಾರ) LED ಪ್ರದರ್ಶನ ಫಲಕಗಳು ಎಲ್ಲಾ 24 ಹೈಕೋರ್ಟ್ ಗಳಲ್ಲಿ ಸ್ಥಾಪಿಸಲು ಮುಂದಾಗಿದೆ. ದಿನನಿತ್ಯದ ಇತ್ಯರ್ಥವಾ ಪ್ರಕರಣಗಳು, ಉಳಿದಿರುವ ಪ್ರಕರಣಗಳ ಸಂಖ್ಯೆ ಮತ್ತು ಈ ಪ್ರತಿಯೊಂದು ನ್ಯಾಯಾಲಯಗಳ ವೈಯಕ್ತಿಕ ಶ್ರೇಣಿ ಪ್ರದರ್ಶಿಸಲಾಗುತ್ತದೆ.

‘ನ್ಯಾಯ ಗಡಿಯಾರ’ದ ಕಲ್ಪನೆಯನ್ನು ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವ್ಯಕ್ತಪಡಿಸಿದ್ದರು, ನ್ಯಾಯಾಂಗ ವಿಷಯಗಳಲ್ಲಿ ಸಾರ್ವಜನಿಕ ಅರಿವು ಮೂಡಿಸಲು, ನಂತರದಲ್ಲಿ ದೇಶದಾದ್ಯಂತ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಇದನ್ನು ಜಾರಿಗೊಳಿಸಲಾಯಿತು ಎಂದು ಹೇಳಿದ್ದರು‌‌.

‘ನ್ಯಾಯ ಗಡಿಯಾರ’ ದ ಮುಖ್ಯ ಉದ್ದೇಶವೆಂದರೆ ನ್ಯಾಯಾಲಯಗಳಲ್ಲಿ ಆರೋಗ್ಯಕರ ಸ್ಪರ್ಧೆಯ ಉತ್ಸಾಹವನ್ನು ಸೃಷ್ಟಿಸುವುದು ಮತ್ತು ಅವರ ಕಾರ್ಯಕ್ಷಮತೆಗೆ ಅನುಗುಣವಾಗಿ ವೈಯಕ್ತಿಕ ಶ್ರೇಣಿ ಕೊಡುವುದು ಎಂದು ಕಾನೂನು ಸಚಿವ ಪಿ. ಪಿ. ಚೌಧರಿ ತಿಳಿಸಿದ್ದಾರೆ.

ಕಳೆದ ವರ್ಷ ಕಾನೂನು ಇಲಾಖೆಯ ದೆಹಲಿ ಕಚೇರಿಯಲ್ಲಿ ಈ ‘ನ್ಯಾಯ ಗಡಿಯಾರ’ ಮಾದರಿಯನ್ನು ಸ್ಥಾಪಿಸಲಾಯಿತು. ಇದು ಕಾನೂನು ಸಚಿವಾಲಯದ ಅಡಿಯಲ್ಲಿ ಬರುತ್ತದೆ.

ಈ ಕ್ರಮವು ನ್ಯಾಯಾಲಯಗಳ ಮಧ್ಯ ಸ್ಪರ್ಧೆಯ ಚೈತನ್ಯವನ್ನು ಹುಟ್ಟುಹಾಕುತ್ತದೆ ಮತ್ತು ನ್ಯಾಯಾಲಯಗಳಲ್ಲಿನ ಬಾಕಿ ಉಳಿದಿರುವ ಪ್ರಕರಣಗಳು ತಕ್ಕಮಟ್ಟಿಗೆ ಬೇಗ ಇತ್ಯರ್ಥವಾಗುತ್ತವೆ ಎಂದು ಹೇಳಬಹುದು.