ಏಪ್ರಿಲ್ ಒಂದರ ಇತಿಹಾಸ ನಿಮಗೆ ಗೊತ್ತೇ…??

ಏಪ್ರಿಲ್ ಒಂದರ ಇತಿಹಾಸ ನಿಮಗೆ ಗೊತ್ತೇ…??

0

ವಿಶ್ವಾದ್ಯಂತ ಆಚರಿಸಲಾಗುವ ಏಪ್ರಿಲ್ ಫೂಲ್ ದಿನಕ್ಕೂ ಇಂತಹದ್ದೇ ವಿಭಿನ್ನ ಇತಿಹಾಸವಿದೆ. ಇತಿಹಾಸ ತಜ್ಞರ ಪ್ರಕಾರ, 16ನೇ ಶತಮಾನದಲ್ಲಿ ಫ್ರಾನ್ಸ್​ನಲ್ಲಿ ಮೊದಲು ಏಪ್ರಿಲ್ ಫೂಲ್ ದಿನದ ಆಚರಣೆ ಆರಂಭವಾಯಿತು. ಫ್ರಾನ್ಸ್​ನಲ್ಲಿ ಏಪ್ರಿಲ್ ಒಂದರಂದೇ ಪವಿತ್ರ ದೇವತೆ ವೇನಿಸ್ ಪೂಜೆ ಮಾಡಲಾಗುತ್ತಿತ್ತು. ವೆನಿಸ್ ಖುಷಿ ಹಂಚುವ ದೇವತೆ. ಹೀಗಾಗಿ ಆಕೆಯ ಪೂಜೆಯ ದಿನವನ್ನೇ ಸಂತೋಷ ಹಂಚುವ ದಿನವಾಗಿ ಆಚರಿಸಲು ಆರಂಭಿಸಲಾಯಿತು ಎನ್ನಲಾಗಿದೆ.

ಹೆಚ್ಚಿನ ಲೇಖಕರು ಮತ್ತು ಇತಿಹಾಸ ತಜ್ಞರ ಅಭಿಪ್ರಾಯದಂತೆ ಏಪ್ರಿಲ್ ಈಗಿನ ರೀತಿ ಕ್ಯಾಲೆಂಡರ್​ನ ನಾಲ್ಕನೇ ತಿಂಗಳಾಗಿರಲಿಲ್ಲ. ಅದು ವರ್ಷದ ಮೊದಲ ತಿಂಗಳಾಗಿರುತ್ತಿತ್ತು. ಇಂದಿಗೂ ಅನೇಕ ರಾಷ್ಟ್ರಗಳಲ್ಲಿ ಏಪ್ರಿಲ್ ಅನ್ನೇ ವಿತ್ತೀಯ ಕ್ಯಾಲೆಂಡರ್​ನ ಮೊದಲ ತಿಂಗಳೆಂದು ಪರಿಗಣಿಸಲಾಗುತ್ತದೆ. ಹಿಂದೆ ಫ್ರಾನ್ಸ್​ನಲ್ಲಿ ವರ್ಷದ ಮೊದಲ ದಿನವನ್ನೇ ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಇದೇ ಕಾರಣದಿಂದಲೇ ಇಂದಿಗೂ ಮೋಜು ಮಜಾದ ವಿಚಾರ ಬಂದಾಗ ಏಪ್ರಿಲ್ ಮುಂಚೂಣಿಯಲ್ಲಿದೆ.