ಬಿಗ್ ಬ್ರೇಕಿಂಗ್: ಕರ್ನಾಟಕ ಚುನಾವಣೆಗೆ ಮುಹೂರ್ತ ಫಿಕ್ಸ..!!

ಬಿಗ್ ಬ್ರೇಕಿಂಗ್: ಕರ್ನಾಟಕ ಚುನಾವಣೆಗೆ ಮುಹೂರ್ತ ಫಿಕ್ಸ..!!

0

ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯದ ಮತದಾರರ ಸಂಖ್ಯೆ ಒಟ್ಟು 4.96 ಕೋಟಿಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಂಪೂರ್ಣಗೊಂಡಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಚುನಾವಣೆ ನಡೆಯಲಿದ್ದು, ಜತೆಗೆ ವಿವಿಪ್ಯಾಟ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಒಟ್ಟು ಮತಗಟ್ಟೆಗಳ ಸಂಖ್ಯೆ 56,696ಯಾಗಿದೆ.

ಚುನಾವಣೆಗೆ ದಿನಾಂಕ ನಿಗದಿಗೊಂಡಿರುವ ಕಾರಣ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಂಡಿದೆ. ಓಂಪ್ರಕಾಶ್‌ ರಾವತ್‌ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕ ಘೋಷಣೆ ಮಾಡಿದ್ದಾರೆ.

ಮೇ 12ಕ್ಕೆ ಮತದಾನ ನಡೆಯಲಿದ್ದು, ಮೇ 18ಕ್ಕೆ ಫಲಿತಾಂಶ ಹೊರಬಿಳಲಿದೆ.

ಸಂಪೂರ್ಣ ವಿವರ

ನಾಮಪತ್ರ ಸಲ್ಲಿಕೆ ಆರಂಭ -17 ಏಪ್ರಿಲ್

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ-24 ಏಪ್ರಿಲ್‌

ನಾಮಪತ್ರ ಪರಿಶೀಲನೆ-25 ಏಪ್ರಿಲ್‌,

ನಾಮಪತ್ರ ಹಿಂತೆಗೆಯಲು ಕೊನೆ ದಿನ ಏಪ್ರಿಲ್‌ 27

ಮತದಾನ ದಿನಾಂಕ- ಮೇ 12

ಫಲಿತಾಂಶ ಪ್ರಕಟ- ಮೇ 15

ಚುನಾವಣಾ ಪ್ರಚಾರದ ಹಣ 28 ಲಕ್ಷಕ್ಕೆ ಸೀಮಿತ ದಾಖಲೆಗಳಿಲ್ಲದ ಹಣ ಸಿಕ್ಕರೆ ಸೀಜ್‌

ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎಲ್ಲ ಪಕ್ಷಗಳು ಈಗಾಗಲೇ ಮತದಾರರ ಒಲೈಕೆಯಲ್ಲಿ ಮಗ್ನವಾಗಿದೆ ಎಂಬುದು ಗಮನಾರ್ಹ ವಿಷಯ. ಮೇ 28ರರೊಳಗೆ ಎಲ್ಲ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.