ಸ್ಪೋಟಕ ಮಾಹಿತಿ: ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ತಪ್ಪಿದ್ದು ನೆಹರುಯಿಂದ -ಶಶಿ ತರೂರ್..!!

ಸ್ಪೋಟಕ ಮಾಹಿತಿ: ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ತಪ್ಪಿದ್ದು ನೆಹರುಯಿಂದ -ಶಶಿ ತರೂರ್..!!

0

1945 ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ಥಾಪನೆಯಾಯಿತು. ಅಮೆರಿಕವು ಅದರ ಮೊದಲ ಸದಸ್ಯ. 1955 ರಲ್ಲಿ ಶೀತಲ ಸಮರ ಉತ್ತುಂಗಕ್ಕೇರಿದಾಗ, ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯುವ ಅವಕಾಶ ಅಮೆರಿಕ ನೆಹರೂಗೆ ನೀಡಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಈ ನಾಲ್ಕು ಸದಸ್ಯರೊಂದಿಗೆ ಪ್ರಾರಂಭವಾಯಿತು: ಯುಎಸ್ಎ, ರಷ್ಯಾ, ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್. ಈ ದೇಶಗಳು ವಿಶ್ವ ಸಮರ II ಗೆದ್ದ ಮೈತ್ರಿಕೂಟಗಳಾಗಿದ್ದವು.

ಅಮೆರಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯರಾಗಲು ಭಾರತ ಕೇಳಿತ್ತು. ಆದರೆ ಪಂಡಿತ್ ಜವಾಹರಲಾಲ್ ನೆಹರು ಅದನ್ನು ಅವರು ನಿರಾಕರಿಸಿದರು. ”ಚೀನಾ ಇಲ್ಲದೆ ನಾವು ವಿಶ್ವಸಂಸ್ಥೆ ಭದ್ರತಾ ಮಂಡಳಿ ಗೆ ಕಾಯಂ ಸದಸ್ಯತ್ವ ಆಗುವುದಿಲ್ಲ” ಎಂದು ಹೇಳಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಲ್ಲಿ ಭಾರತವು ಚೀನಾಕ್ಕೆ ಕಾಯಂ ಸದಸ್ಯತ್ವಕ್ಕಾಗಿ ಸಂಪೂರ್ಣ ಬೆಂಬಲ ನೀಡಿತ್ತು. ಹೀಗಾಗಿ ನೆಹರೂ ಅವರ ನಿರಾಕರಣೆ ಯಿಂದ ಭಾರತವು ಒಳ್ಳೆಯ ಅವಕಾಶವನ್ನು ಕಳೆದುಕೊಂಡಿತು. ನೋಡಿ ಇಂದು ಚೀನಾ ಮುಕ್ತ ಹೃದಯದಿಂದ ಪಾಕಿಸ್ತಾನಕ್ಕೆ ಬೆಂಬಲಿಸುತ್ತದೆ!!

ಮಂಡಳಿಯಲ್ಲಿ ಭಾರತವು ಒಂದು ಬಲವಾದ ಅಸ್ತಿತ್ವವನ್ನು ಹೊಂದಿತ್ತು, ಏಕೆಂದರೆ ಮಹಾಯುದ್ಧದ ಸಮಯದಲ್ಲಿ ಭಾರತ ಎರಡು ದಶಲಕ್ಷಕ್ಕೂ ಹೆಚ್ಚು ಜನರನ್ನು ಒದಗಿಸಿತ್ತು. ಚೀನಾಕ್ಕಿಂತ ಖಂಡಿತವಾಗಿಯೂ ಹೆಚ್ಚು!

ವಿಶ್ವಸಂಸ್ಥೆ ಪ್ರಾರಂಭವಾದಾಗ ಭಾರತ ಒಂದು ಸ್ವತಂತ್ರ ರಾಷ್ಟ್ರವಾಗಿರಲಿಲ್ಲ, ಆದುದರಿಂದ ಅವರು ಸ್ವತಂತ್ರರಾದಾಗ ‘ಸದಸ್ಯತ್ವದ ಅವಕಾಶ ಬಂದಿತು. ಮಾವೊ ಅವರ ಕಮ್ಯುನಿಸ್ಟ್ ಚೀನಾದ ಸದಸ್ಯರಾಗಿ ಅಮೆರಿಕಾಗೆ ಇಷ್ಟವಿರಲಿಲ್ಲ ಮತ್ತು ಮುಖ್ಯವಾಗಿ ಮಾವೊರಿಂದ ವಿರುದ್ಧ ಸೋತ ನಂತರ ಥೈವಾನ್ ಗೆ ನೀಡುವ ಬಗ್ಗೆ ಯೋಚಿಸಿತ್ತು.

ರಷ್ಯಾವು ಮತ್ತೊಂದು ಕಮ್ಯೂನಿಸ್ಟ್ ದೇಶ ಸದಸ್ಯರಾಗುವುದು ನಿರಾಕರಿಸುತ್ತದೆ ಮತ್ತು ಬದಲಾಗಿ ಭಾರತಕ್ಕೆ ಬೆಂಬಲವನ್ನು ನೀಡಿತು. 1953 ರಿಂದ 1961 ರವರೆಗೆ ಅಮೇರಿಕಾದ 34 ನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಐಸೆನ್ಹೋವರ್ ಅವರು ಚೀನಾ ವಿರುದ್ಧ ನಿಲುವು ತಾಳಿ ಭಾರತವು ಸರಿಹೊಂದಬಹುದೆಂದು ಜಾಗರೂಕತೆಯಿಂದ ಯೋಚಿಸಿತ್ತು. ಆದರೆ ನೆಹರು ಅವರು ಸಂಸತ್ತಿನಲ್ಲಿ ಈ ಹೇಳಿಕೆಯನ್ನು ಹೇಳಲಿಲ್ಲ. ಬದಲಾಗಿ ಅವರು ನಮಗೆ ಕಾಯಂ ಸದಸ್ಯತ್ವಕ್ಕೆ ಯಾವುದೇ ಪ್ರಸ್ತಾವನೆ ಅಮೇರಿಕಾದಿಂದ ಬಂದಿಲ್ಲ ಎಂದು ಹೇಳಿದರು‌.

2004 ರಲ್ಲಿ ಬಿಡುಗಡೆಯಾದ ‘Nehru-the invention of India’ ಎಂಬ ಪುಸ್ತಕದಲ್ಲಿ ಶಶಿ ತರೂರ್ ಈ ಬಗ್ಗೆ ವಿವರಿಸಿದ್ದಾರೆ. ಜನವರಿ 10, 2004 ರಂದು ‘ದಿ ಹಿಂದೂ’ ನಡೆಸಿದ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದ್ದರು:” 1953 ರ ಸುಮಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ತೆಗೆದುಕೊಳ್ಳಲು ಭಾರತಕ್ಕೆ ಅಮೆರಿಕದಿಂದ ಪ್ರಸ್ತಾವನೆ ಬಂದುತ್ತು ಆದರೆ ಜವಾಹರಲಾಲ್ ನೆಹರು ಅದನ್ನು ನಿರಾಕರಿಸಿದ್ದರು ಮತ್ತು ಚೀನಾಗೆ ಅದನ್ನು ನೀಡಬೇಕೆಂದು ಸೂಚಿಸಿದ್ದರು.” 2004 ರಲ್ಲಿ ತರೂರ್ ವಿಶ್ವಸಂಸ್ಥೆಯ ಅಂಡರ್-ಸೆಕ್ರೆಟರಿ ಜನರಲ್ ಆಗಿದ್ದರು.

ಪ್ರಸ್ತಾಪವನ್ನು ತಿರಸ್ಕರಿಸಿದ ನೆಹರು ಅವರು ಇದೇ ಸಮಯದಲ್ಲಿ ತೈವಾನ್ ಗಿಂತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವ ಚೀನಾಗೆ ನೀಡಬೇಕು ಎಂದು ಸಲಹೆ ನೀಡಿದ್ದರು.

ಹೀಗೆ ಚೀನಾ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರವೇಶಿಸಿತು! ನಾವು ಅನುಭವಿಸುತ್ತಿರುವ ಪರಿಣಾಮಗಳು! ಮಾರ್ಚ್ 11, 2015 ರಲ್ಲಿ “Not at the Cost of China,” ಎಂಬ ಶೀರ್ಷಿಕೆಯೊಂದರಲ್ಲಿ ಆಂಟನ್ ಹಾರ್ಡರ್ ಅವರು ಹೀಗೆ ಹೇಳುತ್ತಾರೆ “ಆಗಸ್ಟ್ 1950 ರ ಆರಂಭದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶ ಭಾರತಕ್ಕೆ ಅಮೇರಿಕಾ ಮಾಡಿಕೊಟ್ಟಿತು” ಎಂದು ಹೊಸ ಪುರಾವೆ ನೀಡಿದರು. . “ಅಮೆರಿಕದ ಪ್ರಸ್ತಾಪವನ್ನು ನೆಹರೂ ತಿರಸ್ಕರಿಸಿದ್ದು, ಚೀನಾದಲ್ಲಿನ ಅಂತರರಾಷ್ಟ್ರೀಯ ಉದ್ವಿಗ್ನತೆಯನ್ನು ತಗ್ಗಿಸಲು ನೆಹರು ಪ್ರಯತ್ನಪಟ್ಟರು. ಭದ್ರತಾ ಮಂಡಳಿಯಲ್ಲಿ ಚೀನಾ ಗೆ ಖಾಯಂ ಸದಸ್ಯತ್ವ ಹಕ್ಕನ್ನು ನೀಡುವ ಮೂಲಕ ಅಂತರರಾಷ್ಟ್ರೀಯ ಸಮುದಾಯಕ್ಕೆ ಚೀನಾ ದೇಶ ಒಂದುಗುಡಿಸುವುದು ನಿಜಕ್ಕೂ ನೆಹರು ವಿದೇಶಾಂಗ ನೀತಿಯ ಮುಖ್ಯ ಅಂಶ !!!

ಇಂದು, ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ತರಹದ ಸ್ಥಾನಮಾನವನ್ನು ಭಾರತ ಹೊಂದಿಲ್ಲವಾದರೆ, ನೆಹರೂ ಇದಕ್ಕೆ ಕಾರಣ. ಭಾರತ ಮತ್ತು ಚೀನಾ ನಡುವಿನ 1962 ಯುದ್ಧದಲ್ಲಿ ಭಾರತವು ಸೋಲನ್ನು ಎದುರಿಸಬೇಕಾಯಿತು? ಚೀನಾದಿಂದ ಸೋಲಿಸಲ್ಪಟ್ಟರೂ, ಅವಮಾನಕ್ಕೊಳಗಾಗಿದ್ದರೂ ಸಹ ಭಾರತ ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಬಹಳಷ್ಟು ಜನರು ತಿಳಿದಿರಲಿಲ್ಲ.

1963 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಆ ಸಮಯದಲ್ಲಿ, ಪಂಡಿತ್ ಜವಾಹರಲಾಲ್ ನೆಹರೂ ಅವರ ಸಹೋದರಿ ವಿಜಯ ಲಕ್ಷ್ಮಿ ಪಂಡಿತ್ ಅವರು ಭಾರತವನ್ನು ಪ್ರತಿನಿಧಿಸಲು ವಿಶ್ವಸಂಸ್ಥೆ ಪ್ರತಿನಿಧಿಯಾಗಿ ನೇತೃತ್ವ ವಹಿಸಿದ್ದರು (1946 ಮತ್ತು 1968 ರ ನಡುವೆ ಅವರು ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿಗೆ ನೇತೃತ್ವ ವಹಿಸಿದರು). 1953 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಿಸಲಾಯಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ವಿಜಯ ಲಕ್ಷ್ಮಿ ಪಂಡಿತ್ ಚೀನಾಕ್ಕೆ ಬೆಂಬಲ ನೀಡಿದರು.

ವಿಜಯ ಲಕ್ಷ್ಮಿ ಪಂಡಿತ್ ಅವರು ಮಾಧ್ಯಮಕ್ಕೆ ಹೀಗೆ ಹೇಳಿದ್ದರು, “ಚೀನಾಕ್ಕೆ ನಮ್ಮ ತತ್ವಕ್ಕೆ ಸಂಬಂಧಿಸಿದಂತೆ ಬೆಂಬಲವು ಇದೆ … ವಿಶ್ವಸಂಸ್ಥೆಯಂತಹ ಸಂಘಟನೆಯು ಚೀನಾ ದಂತಹ ದೊಡ್ಡ ಮತ್ತು ಪ್ರಬಲ ರಾಷ್ಟ್ರವನ್ನು ಏಕೆ ಒಳಗೊಂಡಿಲ್ಲ ಎಂದು ನನಗೆ ಅರ್ಥವಾಲ್ಲ!” 1971 ರಲ್ಲಿ ಚೀನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವನ್ನು ಸ್ವೀಕರಿಸಿತು.

ನೋಡಿದಿರಲ್ಲ ಸ್ನೇಹಿತರೇ ನೆಹರು ಹಾಗೂ ಅವರ ಸೋದರಿ ಎಷ್ಟು ಕಷ್ಟಪಟ್ಟು ಚೀನಾಗೆ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ಬರುಲು ಸಹಾಯವಾಗಿತ್ತು ಎಂದು. ನಿಮಗೆ ನಮ್ಮ ಭಾರತದ ಮೇಲೆ ಅಷ್ಟೊಂದು ಕಟುವಾದ ಮನಸ್ಸು ನೆಹರು ಜಿ ?