ಬಿಜೆಪಿ ಯಿಂದ ಹೊರಹೋಗಿ ಟಿಡಿಪಿ ಕಾಂಗ್ರೆಸ್ ಒಕ್ಕೂಟ ಸೇರುವದೇ ?

ಬಿಜೆಪಿ ಯಿಂದ ಹೊರಹೋಗಿ ಟಿಡಿಪಿ ಕಾಂಗ್ರೆಸ್ ಒಕ್ಕೂಟ ಸೇರುವದೇ ?

0

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡದೆ ಇದ್ದುದಕ್ಕೆ ಮೈತ್ರಿಕೂಟದಿಂದ ಹೊರನಡೆಯುವದು ಎಷ್ಟರ ಮಟ್ಟಿಗೆ ಸರಿ ?

ಪೂರ್ವೋತ್ತರ ರಾಜ್ಯಗಳ ಹೊರತು ವಿಶೇಷ ಸ್ಥಾನಮಾನ ಯಾವ ರಾಜ್ಯಗಳಿಗೆ ಕೊಡುವ ಅವಕಾಶವಿಲ್ಲದಾಗ ಆಂಧ್ರ ಪ್ರದೇಶಕ್ಕೆ ಕೊಡುವದಾದ್ರೂ ಹೇಗೆ ?

ಸಂವಿಧಾನದ (ಅನಿವಾರ್ಯತೆ )ಕಡ್ಡಾಯ ಪಾಲನೆಯಾಗಬೇಕೇ ?ಅಥವಾ ರಾಜಕೀಯ ಅನಿವಾರ್ಯತೆಯ ಪಾಲನೆಯಾಗಬೇಕೆ ?

ಆಂಧ್ರಪ್ರದೇಶ ,ಬಿಹಾರ ಉತ್ತರ ಪ್ರದೇಶ ಕರ್ನಾಟಕ ಕೇರಳ ತೆಲಂಗಾಣ ತಮಿಳುನಾಡಿನಷ್ಟು ಹಿದುಳಿದಿದೆಯೇ ?

ನಾಳೆ ಎಲ್ಲರೂ ವಿಶೇಷ ಸ್ಥಾನಮಾನ ಕೊಡಲಾಗುತ್ತದೆಯೇ ? ಕಾಂಗ್ರೆಸ್ ಮುಳುಗುತ್ತಿರುವ ದೋಣಿ ಇದನ್ನರಿತ ಮಮತಾ ,ಚಂದ್ರಶೇಖರ ರಾವ್ ತೃತಿಯರಂಗದ ಮಾತಾನಾಡುವಾಗ ತಾನು ಹಿಂದೆ ಉಳಿದರೆ ಹೇಗೆ ಎಂದು ಗೇಮ್ ಆಡುತ್ತಿದ್ದರೆನಿಸಲ್ಲವೇ ?

ಚಂದ್ರಬಾಬು ನಾಯ್ಡು 29 ಬಾರಿ ಭೇಟಿ ಕೊಟ್ಟಮಾತ್ರಕ್ಕೆ ಬೇಡಿದ್ದೆಲ್ಲನ್ನು ಕೇಂದ್ರ ಸರಕಾರ ಕೊಡಲು ಸಾಧ್ಯವೇ ?

14 ನೇಯ ಹಣಕಾಸು ಆಯೋಗ ಸ್ಪಷ್ಟವಾಗಿ ವಿಶೇಷ ಸ್ಥಾನಮಾನ ಕೊಡಲು ಸಾಧ್ಯವಿಲ್ಲವೆಂದಾಗ ಸರಕಾರ ಕೊಡಲು ಸಾಧ್ಯವೇ ?ಆಂಧ್ರ ಪ್ರದೇಶದ ಜನರ ತಲೆಯಲ್ಲಿ ಹುಳಬಿಟ್ಟು ಭಾವನಾತ್ಮಕ ಕಾರ್ಡ ಆಡುತ್ತಿಲ್ಲವೇ ?

ಇವರು ಚಿನ್ನದ ಕತ್ತಿ ಇರಬಹುದು ಹಾಗಂತ ಕತ್ತು ಕೊಯ್ದುಕೊಳ್ಳಲಾಗುತ್ತದೆಯೇ ?

ವಿಶೇಷ ಸ್ಥಾನಮಾನ ಕೊಡಲು ಬೆಂಬಲ ಇದೆ ಎನ್ನುವ ಕಾಂಗ್ರೆಸ್ ಉರಿಯುವ ಒಲೆಯಲ್ಲಿ ಹಂಚಿಟ್ಟು ರೊಟ್ಟಿ ಕಾಯಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ . ರಾಜಕೀಯ ಲಾಭ ನಷ್ಟಗಳ ಆಧಾರದಲ್ಲಿ ಕೇಂದ್ರ ಸರಕಾರ ಕೇಳಿದ್ದನ್ನೆಲ್ಲಾ ಕೊಡುತ್ತಾ ಹೋದರೆ ಇತರ ಪ್ರದೇಶಗಳಿಗೆ ಅನ್ಯಾಯಮಾಡಿದಂತಾಗುವದಿಲ್ಲವೇ ?

ಪ್ರಧಾನಮಂತ್ರಿ ರಾಜಕೀಯ ಅನಿವಾರ್ಯತೆಗಳಿಗಾಗಿ ಮೈತ್ರಿ ಪಕ್ಷಗಳ ಒತ್ತಡಕ್ಕೆ ಮಣಿಯುವದಿಲ್ಲವೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ .#ಮೈತ್ರಿ ಮಾಡಿಕೊಂಡು ಜುಟ್ಟು ಹಿಡಿದು ಅಲ್ಲಾಡಿಸಲು ಪ್ರಯತ್ನಿಸುತ್ತಾರೆ ,ಮೈತ್ರಿ ಸಹವಾಸ ಯಾವಾಗಲೂ ಸೆರಗಿನಲ್ಲಿ ಕೆಂಡ ಇಟ್ಟುಕೊಂಡಂತೆಯೇ #ಒಳ್ಳೆಯದೋ ಕೆಟ್ಟದೋ ಒಂದೇ ಪಕ್ಷಕ್ಕೆ ಮತ ಚಲಾಯಿಸಿ .

ಚಿಕ್ಕ ಪುಟ್ಟ ಪಕ್ಷಗಳು ರಾಜ್ಯಗಳಿಗೆ ಸೀಮಿತವಿದ್ದರೇನೇ ಒಳ್ಳೆಯದು ,ಇಲ್ಲದೆ ಹೋದರೆ ನಾಯ್ಡು ಹಾಗೆ ಎಲ್ಲರೂ ಹೀಗೇ ಹೇಳಬಹುದು ಮಾಡಕ್ಕೆ ಬಿಟ್ಟರೆ ಬಿಡಿ ಇಲ್ಲದೇ ಹೋದರೆ ಮೊದಲಿಗೆ ಕೊಯ್ಕೊಂಡು ಬಿಡ್ತೀನಿ ಅಂತಾರೆ .ಯಾರು ಏನೇ ಹೇಳಲಿ ಮೋದಿಜಿ ಅವರು ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ .