​26/11ರಂದು ನೂರಾರು ಜನರ ಪ್ರಾಣ ಉಳಿಸಿದ ಆ  ಮುಗ್ದ ಶ್ವಾನದ ಬಗ್ಗೆ ನಿಮಿಗೆಷ್ಟು ಗೊತ್ತು?

​26/11ರಂದು ನೂರಾರು ಜನರ ಪ್ರಾಣ ಉಳಿಸಿದ ಆ  ಮುಗ್ದ ಶ್ವಾನದ ಬಗ್ಗೆ ನಿಮಿಗೆಷ್ಟು ಗೊತ್ತು?

0

ಅದು ಇಂದಿನಿಂದ ಸುಮಾರು 9 ವರ್ಷ ಹಿಂದಿನ ನವೆಂಬರ್ ತಿಂಗಳ 26ನೇ ದಿನ ಅಂದು ನಮ್ಮ ದೇಶಯಾಕೆ ಇಡೀ ಪ್ರಪಂಚವೇ ಬೆಚ್ಚಿಬಿದ್ದ ದಿನ. ದೇಶಕ್ಕೆ ದೇಶವೇ ಶೋಕಾಚಾರಣೆಗೆ ಜಾರಿದ ದಿನ. ಅದು ಮುಂಬೈನಲ್ಲಿ ಉಗ್ರರು ಸಾವಿನ ಚೆಲ್ಲಾಟ ಆಡಿದ ದಿನ. ಸುಮಾರು 200ಕ್ಕೂ ಹೆಚ್ಚು ಭಾರತೀಯ ನಾಗರಿಕರು ಉಗ್ರರ ಗುಂಡಿಗೆ ಬಲಿಯಾದ ದಿನವದು. ಹಲವಾರು ಸೈನಿಕರು ದೇಶಕೋಸ್ಕರ ಪ್ರಾಣಾರ್ಪಣೆ ಮಾಡಿದ ದಿನವದು. ಪ್ರಸಿದ್ಧ ತಾಜ್ ಹೋಟೆಲ್ ಅಲ್ಲೋಲಕಲ್ಲೋಲ ಆದ ದಿನವದು. ಇಷ್ಟೆಲ್ಲಾ ವಿಷಯ ಎಲ್ಲರಿಗೂ  ಗೊತ್ತಿರುವಂತದ್ದೇ ಬಿಡಿ.

ಆದ್ರೆ ಅದೇ ದಿನ ನೂರಾರು ಜನರ ಪ್ರಾಣ ಉಳಿಸಿದ ಹೆಮ್ಮೆಯ ಶ್ವಾನದ ಬಗ್ಗೆ ನಿಮಿಗೆ ಗೊತ್ತಿದೆಯೇ? ಅದು ಚಿನ್ನದ ಬಣ್ಣದ ಗೋಳ್ಡೆನ್ ಲಾಬಾರ್ಡರ್ ಶ್ವಾನ. ಅದರ ಹೆಸರೇ ಸಿಝರ್. ಸಂತೋಷ್ ಎನ್ನುವವರು ಹೇಳುವಂತೆ  2004ರಲ್ಲಿ ಮೂರು ತಿಂಗಳ  ಸಣ್ಣ ನಾಯಿಮರಿಯನ್ನು ಖರಿಧಿ ಮಾಡಿ ಸುಮಾರು ಒಂಬತ್ತು ತಿಂಗಳ ತರಬೇತಿಯ ನಂತರ 2005ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಲಾಯ್ತು.


26/11 ರಂದು ಉಗ್ರರು ದಾಳಿ ಮಾಡಿದ ಸಂದರ್ಭದಲ್ಲಿ ಸಿಝರ್ ಬೇರೆಬೇರೆ ಸ್ಥಳದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಸುಮಾರು 12ಕ್ಕೂ ಹೆಚ್ಚು ಸಜೀವ ಗ್ರೆನೇಡ್ ಹಾಗೂ ಉಗ್ರಗಾಮಿಗಳು ಉಪಯೋಗಿಸಲು ತಂದಿದ್ದ ಹಲವಾರು ಸಾಮಗ್ರಿಗಳನ್ನು ಪತ್ತೆ ಹಚ್ಚಿದ. ಮಹಾರಾಷ್ಟ್ರ ಪೊಲೀಸ್ ಇಲಾಖೆ ಹೇಳುವಂತೆ ಸಿಝರ್ ಸುಮಾರು 500ಕ್ಕೂ ಹೆಚ್ಚು ಜನರ ಪ್ರಾಣಉಳಿಸಿ ತನ್ನ ಬುದ್ಧಿವಂತಿಕೆ ಹಾಗೂ ವಿರತ್ವವನ್ನು ಮೆರೆದ.


ಸಂತೋಷ್ ಬೋಗ್ಲೇ ಅವರು ಹೇಳುವಂತೆ ಸಿಝರ್ 26/11 ರಂದು ಮಾತ್ರ ಜನರ ಜೀವ ಉಳಿಸಿದ್ದಲ್ಲ. 11 ಜುಲೈ 2006ರಂದು ಮುಂಬೈ ರೈಲ್ವೆಯಲ್ಲಿ ಸತತ ಏಳು ಸೀರಿಯಲ್ ಬಾಂಬ್ ಸ್ಪೋಟವಾಗಿ ಹಲವಾರು ಜನರು ಸಾವನಪ್ಪಿದರು. ಆ ಸಂದರ್ಭದಲ್ಲಿ ರೈಲಿನಲ್ಲಿರುವ ಹತ್ತಕ್ಕೂ ಹೆಚ್ಚು ಸಜೀವ ಬಾಂಬ್ ಪತ್ತೆಹಚ್ಚಿ ಸಿಝರ್ ಹಲವಾರು ಮುಗ್ಧ ಜನರ ಪ್ರಾಣ ಉಳಿಸಿತ್ತು. ಮುಂಬೈನಗರದಲ್ಲಿ 2011ರಲ್ಲಿ ಬೇರೆ ಬೇರೆ ಜಾಗದಲ್ಲಿ ಮೂರು ಬಾಂಬ್ ಸ್ಫೋಟವಾಗಿತ್ತು , ಹೀಗಿರುವಾಗ ಪ್ರಸಿದ್ದ ದಾದರ್ ಹೂವಿನ ಮಾರುಕಟ್ಟೆಯಲ್ಲಿರುವ ಸಜೀವ ಬಾಂಬ್ ಒಂದನ್ನು ಪತ್ತೆಹಚ್ಚಿ ಹಲವಾರು ಜನರ ಪ್ರಾಣ ಉಳಿಸಿದ್ದು ಇದೆ ಸಿಝರ್.


ಸಿಝರ್ ತನ್ನ ಕಾರ್ಯವಧಿ ಪೂರ್ಣಗೊಳಿಸಿ 2013ರಲ್ಲಿ ಕೆಲಸದಿಂದ  ನಿವೃತ್ತಿ ಪಡೆಯಿತು. ಕಳೆದ ವರ್ಷ ಈ ಶ್ವಾನ ನಮ್ಮನ್ನೆಲ್ಲಾ ಬಿಟ್ಟು ತಾಯಿ ಭಾರಥಿಗೆ ತನ್ನ ಪ್ರಾಣಾರ್ಪಣೆ ಮಾಡಿ ಹುತಾತ್ಮ ಅನಿಸಿಕೊಂಡಿತು.
ದೇಶಭಕ್ತಿಯ ವಸುಧಾರೆಯಾದ ಈ ಮುಗ್ದ ಶ್ವಾನಕ್ಕೆ ನನ್ನದೊಂದು ಪ್ರೀತಿಯ ಅಪ್ಪುಗೆ. ಈ ಪವಿತ್ರ ಭೂಮಿಯಲ್ಲಿ ದೇಶರಕ್ಷಣೆಯ ದೇಶಪ್ರೇಮಿಯಾಗಿ ಮತ್ತೆ ಜನ್ಮವೆತ್ತಿ ಬಾ ಅನ್ನುತ್ತಾ….!

✍  ಸಚಿನ್ ಜೈನ್ ಹಳೆಯೂರ್