​ಅಬಕಾರಿ ಇಲಾಖೆಯಲ್ಲಿ  ಹಲವು ಹುದ್ದೆಗಳ ಭರ್ತಿ.!!

​ಅಬಕಾರಿ ಇಲಾಖೆಯಲ್ಲಿ ಹಲವು ಹುದ್ದೆಗಳ ಭರ್ತಿ.!!

0

ರಾಜ್ಯದ ಅಬಕಾರಿ ಇಲಾಖೆಯಲ್ಲಿ ಅಗತ್ಯವಿರುವ ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ(ಪುರುಷ ಮತ್ತು ಮಹಿಳೆ) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಅರ್ಜಿ ಆಹ್ವಾನಿಸಿದೆ.

ಒಟ್ಟು 1180 ಹುದ್ದೆಗಳು ಖಾಲಿಯಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಕೆಗೂ ಮುನ್ನ ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ.
ಅರ್ಜಿ ಸಲ್ಲಿಕೆಗೆ ಕೊನೇದಿನ: ಮಾರ್ಚ್‌ 30
* ಹುದ್ದೆಗಳ ವರ್ಗೀಕರಣ:

ಅಬಕಾರಿ ಉಪನಿರೀಕ್ಷಕರು– 177

ಅಬಕಾರಿ ರಕ್ಷಕರು(ಪುರುಷ)– 952

ಅಬಕಾರಿ ರಕ್ಷಕರು(ಮಹಿಳೆ)– 51
* ವೇತನ:

ಅಬಕಾರಿ ಉಪನಿರೀಕ್ಷಕರು: ₹16,000–29,600

ಅಬಕಾರಿ ರಕ್ಷಕರು: ₹11,600–21,000
ಅರ್ಜಿ ಸಲ್ಲಿಸುವುದು ಹೇಗೆ.?

ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅರ್ಜಿ ಭರ್ತಿ ನಂತರ ಚಲನ್‌ ಡೌನ್‌ಲೋಡ್‌ ಮಾಡಿ ಯಾವುದೇ ಇ–ಪಾವತಿ ಅಂಚೆ ಕಚೇರಿಯಲ್ಲಿ ಪರೀಕ್ಷಾ ಶುಲ್ಕ ಪಾವತಿಸಬೇಕು.
ಪರೀಕ್ಷಾ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು ₹300, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ₹150 ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿಯಿದೆ.

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಅಬಕಾರಿ ರಕ್ಷಕರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪೂರೈಸಿರಬೇಕು.

*ವಯೋಮಿತಿ:

ಕನಿಷ್ಠ 18 ಹಾಗೂ ಗರಿಷ್ಠ 26 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯಿದೆ. ಅಬಕಾರಿ ಉಪನಿರೀಕ್ಷಕರ ಹುದ್ದೆಗಳಿಗೆ ಕನಿಷ್ಠ 21 ವರ್ಷ.
ದೇಹದಾರ್ಢ್ಯತೆ:

ಎತ್ತರ: ಕನಿಷ್ಠ 163 ಸೆಂ.ಮೀ.(ಮಹಿಳೆ: ಕನಿಷ್ಠ 157 ಸೆಂ.ಮೀ. ಹಾಗೂ 49.9 ಕೆ.ಜಿ. ತೂಕ)

– ಎದೆಯ ಸುತ್ತಳತೆ ಕನಿಷ್ಠ 81 ಸೆಂ.ಮೀ.

–ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡೆಸೆತಗಳ ಮೂಲಕ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.
* ನೇಮಕಾತಿ ಪ್ರಕ್ರಿಯೆ:

ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ, ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಅನ್ವಯ ಅರ್ಹರ ಆಯ್ಕೆ ಮಾಡಲಾಗುತ್ತದೆ.

* ಪರೀಕ್ಷೆ:

ಅಬಕಾರಿ ಉಪನಿರೀಕ್ಷಕರು: ಏಪ್ರಿಲ್‌ 30

ಅಬಕಾರಿ ರಕ್ಷಕರು: ಮೇ 7

ಸಾಮಾನ್ಯ ಅಧ್ಯಯನ, ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್‌ ವಿಷಯಗಳ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
online : source