ಭಾರತೀಯ ಸೇನೆಯ ಈ 7 ರಕ್ಷಣಾಪಡೆಗಳ ಬಗ್ಗೆ ನಿಮಗೆ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ!!!

0

ನಾವು ಭಾರತೀಯರು ಬೆಳಗಾದರೆ ದೇವರನ್ನ ಪೂಜಿಸುತ್ತೇವೆ, ಮಲಗಬೇಕಿದ್ದರೂ ದೇವರನ್ನ ನೆನೆದು ಮಲುಗುತ್ತೇವೆ. ಆದರೆ ಆ ದೇವರು ಎಲ್ಲಿದ್ದಾನೆ ಅನ್ನೋದು ಮಾತ್ರ ನಮ್ಮ ಕಣ್ಣಿಗೆ ಕಾಣಲ್ಲ.


ದೇವರೆಂದರೆ ಆತ ಕಣ್ಣಿಗೆ ಕಾಣದ ಶಕ್ತಿ ಅಂತಲೇ ನಾವು ಭಾವಿಸಿದ್ದೇವೆ ಆದರೆ ನಮ್ಮನ್ನ ಸದಾ 24/7 ಕಾಪಾಡುತ್ತಿರೋ ದೇವರ ಬಗ್ಗೆ ನಮಗೆಷ್ಟು ಗೊತ್ತು? ದೇಶದ 125 ಕೋಟಿ ಜನರು ಆರಾಮಾಗಿ ಬದುಕುತ್ತಿದ್ದಾರೆ, ಶಾಂತಿಯುತವಾಗಿ ತಮ್ಮತಮ್ಮ ಬಾಳ್ವೆ ನಡೆಸುತ್ತಿರೋದಕ್ಕೆ ತನ್ನ ಜೀವವನ್ನ ಪಣಕ್ಕಿಟ್ಟು ನಮ್ಮನ್ನ ಕಾಪಾಡುತ್ತಿರೋ ಆ ದೇವರು ಮತ್ಯಾರೂ ಅಲ್ಲ ಅದೇ ನನ್ನ ದೇಶದ ಸೈನಿಕ!!


ತಾಯಿ ಭಾರತಾಂಬೆಗಾಗಿ ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಹಗಲಿರುಳು ದುಡಿಯುತ್ತಿರುವ ಆ ಸೈನಿಕನ ಬಗ್ಗೆ, ಭಾರತೀಯ ಸೇನಾಪಡೆಗಳ ಬಗ್ಗೆ ನಮಗೆಷ್ಟು ಗೊತ್ತಿದೆ??
ಅಬ್ಬಬ್ಬಾ ಅಂದ್ರೆ BSF, CRPF, ಹಾಗು ವಿವಿಧ ರೆಜಿಮೆಂಟ್ಸ್ ಗಳು ಮಾತ್ರ. ಆದರೆ ಭಾರತೀಯ ಸೈನ್ಯದಲ್ಲಿ 7 ವಿಧದ ಕಮಾಂಡೋ ಪಡೆಗಳೂ ಇವೆ ಅನ್ನೋದು ನಿಮಗೆ ಗೊತ್ತಾ?


1. National Security Guard(ರಾಷ್ಟ್ರೀಯ ಭದ್ರತಾ ಸಿಬ್ಬಂದಿ)
1984 ರಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಅನ್ನು ಸ್ಥಾಪಿಸಲಾಯಿತು.
ಭೂಮಿ, ಸಮುದ್ರ ಮತ್ತು ಆಕಾಶ ದಲ್ಲಿ, ಬಾಂಬ್ ಬಗೆಹರಿಕೆ, ಸ್ಫೋಟ ನಂತರದ ತನಿಖೆ ಮತ್ತು ಪಾರುಗಾಣಿಕಾ(rescue) ಕಾರ್ಯಾಚರಣೆಯ ಕಾರ್ಯಗಳನ್ನ ಒಳಗೊಂಡಂತೆ ಭಯೋತ್ಪಾದನಾ ಕಾರ್ಯಾಚರಣೆಗಳ ಎಲ್ಲ ತನಿಖೆ ಹಾಗು ಸುರಕ್ಷತೆಗಾಗಿ NSG ಕಮಾಂಡೊಗಳು ಕೆಲಸ ಮಾಡುತ್ತಾರೆ.

ವಿಶೇಷ ಕೌಂಟರ್ ಭಯೋತ್ಪಾದನಾ ಶಕ್ತಿಯಾಗಿ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಈ ಕಮಾಂಡೋ ಪಡೆಯನ್ನ ಭಾರತೀಯ ಸೇನೆ ಬಳಸಿಕೊಳ್ಳುತ್ತೆ.
ಈ ಸೇನೆಯು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು(CAPF: Central Armed Police Force) ಅಥವಾ ಭಾರತದ ಅರೆಸೈನಿಕ ಪಡೆಗಳ ಅಡಿಯಲ್ಲಿ ಇರುವುದಿಲ್ಲ.

ಇದು ಭಾರತೀಯ ಸೈನ್ಯ ಮತ್ತು ಕೇಂದ್ರ ಸಶಸ್ತ್ರ ಪೋಲಿಸ್ ಪಡೆಗಳಿಂದ ನಿಯೋಜನೆ ಮಾಡುವ ಸಿಬ್ಬಂದಿಗಳ ಅನನ್ಯ ಸಂಯೋಜನೆಯಾಗಿದೆ. NSG ಸಿಬ್ಬಂದಿಯನ್ನು ಬ್ಲಾಕ್ ಕ್ಯಾಟ್ಸ್(Black Cats) ಎಂದೂ ಕರೆಯುತ್ತಾರೆ, ಕಾರಣ ಇವರು ಕಪ್ಪು ಉಡುಗೆ ಮತ್ತು ಕಪ್ಪು ಬೆಕ್ಕಿನ ಚಿಹ್ನೆ ಇರುವ ಸಮವಸ್ತ್ರ ಧರಿಸುತ್ತಾರೆ. ಪ್ರಭಾವಿ ರಾಜಕಾರಣಿಗಳಿಗೆ, ಭಯೋತ್ಪಾದಕರ ಟಾರ್ಗೇಟ್ ನಲ್ಲಿರುವ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು NSG ಮುಖ್ಯಪಾತ್ರ ವಹಿಸುತ್ತದೆ.


NSG ಭಾರತೀಯ ಪೊಲೀಸ್ ಸೇವೆಯಿಂದ ಡಿಜಿಪಿ ನೇತೃತ್ವದಲ್ಲಿದೆ. NSG ನಲ್ಲಿ ಎರಡು ವಿಭಾಗಗಳಿವೆ.

I. ವಿಶೇಷ ಕಾರ್ಯಾಚರಣೆ ಗುಂಪು; ಸದಸ್ಯರನ್ನು ಭಾರತೀಯ ಸೈನ್ಯದಿಂದ ಆಯ್ಕೆ ಮಾಡಲಾಗುತ್ತದೆ.
II. ವಿಶೇಷ ರೇಂಜರ್ ಗುಂಪು ;

ಸದಸ್ಯರನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಆಯ್ಕೆ ಮಾಡಲಾಗುತ್ತದೆ.

2. ವಿಶೇಷ ಗಡಿನಾಡು ಪಡೆ(Special Frontier Force)
ವಿಶೇಷ ಗಡಿನಾಡು ಪಡೆ ಗುಪ್ತಚರ ಸಂಸ್ಥೆ RAW ಅಡಿಯಲ್ಲಿ ಕಾರ್ಯನಿರ್ವಹಿಸುವ ಮತ್ತು ಕ್ಯಾಬಿನೆಟ್ ಸಚಿವಾಲಯಕ್ಕೆ ನೇರವಾಗಿ ವರದಿ ನೀಡುವ ಒಂದು ರಹಸ್ಯವಾದ ಅರೆಸೈನಿಕ ವಿಶೇಷ ಪಡೆಯಾಗಿದೆ.



ಇದು 1962 ಇಂಡೋ – ಚೀನಾ ಯುದ್ಧದ ನಂತರ ಗುಪ್ತ ಕಾರ್ಯಾಚರಣೆಗಾಗಿ ವಿಶೇಷ ಶಕ್ತಿಯಾಗಿ ಈ ಪಡೆಯನ್ನ ಭಾರತೀಯ ಸೇನೆಯಲ್ಲಿ ಜಾರಿಗೆ ತರಲಾಗಿದೆ. ಆದಾಗ್ಯೂ, ಇದು ಉದ್ದೇಶಿತ ಪಾತ್ರಕ್ಕಾಗಿ ಎಂದಿಗೂ ಬಳಸಲ್ಪಡಲಿಲ್ಲ ಹಾಗು ಮುಖ್ಯವಾಗಿ ವಿಶೇಷ ಕಾರ್ಯಾಚರಣೆಗಳು ಮತ್ತು ಕೌಂಟರ್ ನೀಡಲು – ಬಂಡಾಯ ಶಕ್ತಿಯಾಗಿ ಸೇವೆ ಸಲ್ಲಿಸಲು ಸಹಾಯಕವಾಗಿದೆ.


ಈ ಪಡೆಯ ಸಿಬ್ಬಂದಿಗಳನ್ನ ಟಿಬೆಟಿಯನ್ ಹೋರಾಟಗಾರನ್ನಾಗಿ ಭರ್ತಿಮಾಡಲಾಗುತ್ತದೆ. ಇದು ಒಂದು ಮೀಸಲಾದ ಪರ್ವತ ಮತ್ತು ಕಾಡಿನಲ್ಲಿ ಕಾರ್ಯನಿರ್ವಹಿಸುವ ಘಟಕವಾಗಿದೆ. ಇದರ ಕೇಂದ್ರ ಉತ್ತರಾಖಂಡದ ‘ಚಕ್ರತ’ದಲ್ಲಿ ನೆಲೆಗೊಂಡಿದೆ, ಈ ಪಡೆಯು RAW(Research and Analysis Wing) ಅಡಿಯಲ್ಲಿ ಬರುತದೆ ಹೊರತು ರಕ್ಷಣಾ ಸಚಿವಾಲಯದ ಅಡಿಯಲ್ಲಲ್ಲ. ಇದು ನಡೆಸುವ ಕಾರ್ಯಚರಣೆಯ ಬಗ್ಗೆ ಸಂಸತ್ತಿಗೆ ಉತ್ತರ ನೀಡಬೇಕಾದ ಅವಶ್ಯಕತೆಯಿಲ್ಲ.


ಕ್ಯಾಬಿನೆಟ್ ಸೆಕ್ರೆಟರಿಯಟ್ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ಇನ್ಸ್ಪೆಕ್ಟರ್ ಜನರಲ್ (ಐಜಿ) ನಿಂದ SFF ನೇತೃತ್ವ ವಹಿಸಲ್ಪಡುತ್ತದೆ.

3. Special Protection Group (ವಿಶೇಷ ರಕ್ಷಣಾ ಪಡೆ);
ಪ್ರಧಾನಮಂತ್ರಿ, ಮಾಜಿ ಪ್ರಧಾನಿ ಮಂತ್ರಿ ಮತ್ತು ಅವರ ತತ್ಕ್ಷಣದ ಕುಟುಂಬದ ಸದಸ್ಯರಿ(ಪತ್ನಿ, ಪತಿ, ಮಕ್ಕಳು ಮತ್ತು ಪೋಷಕರು)ಗೆ ಭದ್ರತೆಯನ್ನು ಒದಗಿಸುವುದಕ್ಕಾಗಿ 1988 ರಲ್ಲಿ ವಿಶೇಷ ರಕ್ಷಣಾ ಪಡೆ (SPG)ಯನ್ನ ಸಂಸತ್ತಿನಿಂದ ರಚಿಸಲ್ಪಟ್ಟಿತು.

ಈ ಪಡೆ FN Herstal (assault Rifle), Glock ಪಿಸ್ತೋಲ್ ಮತ್ತು FN Herstal (P90) ಅನ್ನು ಒಳಗೊಂಡಿರುವ ಕೆಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಾರೆ.
4. Garud (ಗರುಡ);
ಗರುಡ ಕಮಾಂಡೋ ಫೋರ್ಸ್ ಭಾರತೀಯ ವಾಯು ಪಡೆಯ (IAF) ವಿಶೇಷ ಘಟಕವಾಗಿದೆ. ಇದು 2004 ರ ಸೆಪ್ಟೆಂಬರ್ ನಲ್ಲಿ ರಚನೆಯಾಯಿತು ಹಾಗು ಸುಮಾರು 2,000 ಸಿಬ್ಬಂದಿಯನ್ನು ಹೊಂದಿದೆ.



ಏರ್ ಫೀಲ್ಡ್ ವಶಪಡಿಸಿಕೊಳ್ಳುವಿಕೆ, ವಿಶೇಷ ವಿಚಕ್ಷಣ, ವಾಯುಗಾಮಿ ಕಾರ್ಯಾಚರಣೆಗಳು, ವಾಯು ಆಕ್ರಮಣ, ವಿಶೇಷ ಕಾರ್ಯಾಚರಣೆಗಳ ಯುದ್ಧ ಶೋಧನೆ ಮತ್ತು ಪಾರುಗಾಣಿಕಾ ಮತ್ತು ಕೌಂಟರ್ ದಂಗೆಗಳಲ್ಲಿ ಪಾಲ್ಗೊಳ್ಳುವುದು ಈ ಪಡೆಯ ಕಾರ್ಯಾಚರಣೆಯ ವಿಶೇಷತೆಯಾಗಿದೆ.


5. Force One(ಫೋರ್ಸ್ ಒನ್);
ಭಾರತದ ಆರ್ಥಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನಂತರ ಮುಂಬೈ ಪೋಲಿಸ್ ರ ವಿಶೇಷ ಕಮಾಂಡೋ ಘಟಕವೊಂದನ್ನ ರಚಿಸಲಾಯಿತು. ಈ ವಿಶೇಷ ತಂಡವನ್ನು ಮುಂಬೈ, ಗುರುಗ್ರಾಮ(ಗುರಗಾಂವ್) ಉಪನಗರ SRPF ಮೈದಾನದಲ್ಲಿ ನವೆಂಬರ್ 24, 2009 ರಂದು ಪ್ರಾರಂಭಿಸಲಾಯಿತು.


ಕಠಿಣಾತಿ ಕಠಿಣ ಎಂಬ ಪರಿಸ್ಥಿತಿಯನ್ನ ನಿಭಾಯಿಸಲು ಫೋರ್ಸ್ ಒನ್ ಕಮಾಂಡೊಗಳು 15 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಈ ಪಡೆ ಇಸ್ರೇಲ್ ವಿಶೇಷ ಪಡೆಗಳ ನಿಕಟ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುತ್ತಾರೆ.


ಮುಂಬೈಯಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳ ಸಂದರ್ಭದ ಕಾರ್ಯಾಚರಣೆಯಲ್ಲಿ ಉಳಿಯುವುದು ಈ ಫೋರ್ಸ್ ಒನ್ ಪಡೆಯ ಮುಖ್ಯ ಉದ್ದೇಶವಾಗಿದೆ.


6. Para Commandos (ಪ್ಯಾರಾ ಕಮಾಂಡೋಸ್);
ಜುಲೈ 1, 1966 ರಂದು ರಚನೆಯಾದ ಪ್ಯಾರಾ ಕಮಾಂಡೋಸ್ ಭಾರತೀಯ ಸೇನೆಯ ಅತ್ಯುನ್ನತ ತರಬೇತಿ ಪಡೆದ ಪ್ಯಾರಾಚೂಟ್ ರೆಜಿಮೆಂಟ್ನ ನಾಣ್ಯದ ಮತ್ತೊಂದು ಮುಖದಂತಿದೆ.

ವಿಶೇಷ ಕಾರ್ಯಾಚರಣೆಗಳು, ಡೈರೆಕ್ಟ್ ಅಟ್ಯಾಕ್, ಒತ್ತೆಯಾಳುಗಳ ಬಿಡುಗಡೆ, ಭಯೋತ್ಪಾದನೆ, ಅಸಾಂಪ್ರದಾಯಿಕ ಯುದ್ಧ, ವಿಶೇಷ ವಿಚಕ್ಷಣ, ವಿದೇಶಿ ಆಂತರಿಕ ರಕ್ಷಣಾ, ಕೌಂಟರ್-ಪ್ರಸರಣ, ಕೌಂಟರ್-ಬಂಡಾಯ, ಹುಡುಕು ಮತ್ತು ನಾಶ(Search and Destroy) ಹಾಗು ಸಿಬ್ಬಂದಿ ಚೇತರಿಕೆಯಂತಹ ಮುಂತಾದ ಕಾರ್ಯಾಚರಣೆಗಳಲ್ಲಿ ಈ ಪಡೆ ಪಾಲ್ಗೊಳ್ಳುತ್ತಾರೆ.
ಭಾರತೀಯ ಸೈನ್ಯದಲ್ಲಿ ತಮ್ಮ ದೇಹದ ಮೇಲೆ ಹಚ್ಚೆ(tattoos) ಗಳನ್ನು ಹಾಕಿಸಿಕೊಳ್ಳಲು ಅವಕಾಶ ಇರುವ ಏಕೈಕ ಪಡೆ ಇದಾಗಿದೆ.


7. MARCOS (ಮಾರ್ಕೋಸ್);
ಹಿಂದೆ ಮರೀನ್ ಕಮಾಂಡೋ ಫೋರ್ಸ್ (MCF) ಎಂದು ಹೆಸರಿಸಲ್ಪಟ್ಟ MARCOS, ಭಾರತೀಯ ನೌಕಾದಳದ ವಿಶೇಷ ಕಾರ್ಯಾಚರಣೆಯ ಘಟಕವಾಗಿದೆ.

1987 ರಿಂದ ಸಕ್ರಿಯವಾಗಿದ್ದ ಮಾರ್ಕೋಸ್, ಉಭಯಚರ(ಭೂ ಮತ್ತು ಸಮುದ್ರ) ಯುದ್ಧ, ಕೌಂಟರ್ ಭಯೋತ್ಪಾದನೆ, Direct Action(ನೇರ ಕ್ರಮ), ವಿಶೇಷ ವಿಚಕ್ಷಣ, ಅಸಾಂಪ್ರದಾಯಿಕ ಯುದ್ಧ, ಒತ್ತೆಯಾಳು ಪಾರುಗಾಣಿಕಾ, ಸಿಬ್ಬಂದಿ ಚೇತರಿಕೆ, ಅಸಮ್ಮಿತ ಯುದ್ಧ, ಕೌಂಟರ್ಪ್ರೊಲಿಫರೇಷನ್ ಮುಂತಾದ ವಿಶೇಷ ಕಾರ್ಯಾಚರಣೆಗಳನ್ನು ನಡೆಸುವ ಜವಾಬ್ದಾರಿ ಈ ಪಡೆ ಹೊಂದಿದೆ.

ಶಸ್ತಾಸ್ತ್ರಗಳನ್ನ ಹೊತ್ತು ಸಮುದ್ರದಲ್ಲಿ ಕಾರ್ಯಾಚರಣೆಯನ್ನೂ ನಡೆಸುತ್ತೆ ಈ ವಿಶೇಷ ಪಡೆ.

26/11 ನಂತಹ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆ ನೀಡುವಲ್ಲಿ ಇದೇ ಪಡೆ ಮೊದಲಿಗರಾತ್ತು. ನೋಡಿದಿರಲ್ಲ ಸ್ನೇಹಿತರೆ ಭಾರತೀಯ ಸೇನೆಯಲ್ಲಿ ದೇಶರಕ್ಷಣೆಗಾಗಿ ಎಂಥೆಂಥಾ ಧೀರ ಪಡೆಗಳು ನಮ್ಮ ರಕ್ಷಣೆಗಾಗಿ, ಭಾರತಮಾತೆಯ ಸೇವೆಗಾಗಿ ಸದಾ ಸಿದ್ಧರಾಗಿ ನಿಂತಿದ್ದಾರಂತ!!!

ಒಂದು ವೇಳೆ ಇವರಿಲ್ಲದಿದ್ದಿದ್ದರೆ ಇವತ್ತು ನಾವು ಇಷ್ಟು ಕಮ್ಫರ್ಟ್ ಜೋನ್ ನಲ್ಲಿ ಇಷ್ಟು ಆರಾಮಾಗಿ ಬದುಕಲು ಸಾಧ್ಯವೇ ಇರುತ್ತಿರಲಿಲ್ಲವೇನೋ, ಅದಕ್ಕೆ ಅಂಕಣದ ಮೊದಲ ವಾಕ್ಯಗಳಲ್ಲೇ ಇವರನ್ನ ನಮ್ಮ ದೇವರು ಅಂತ ನಾನು ಕರೆದದ್ದು.


ಇಂತಹ ವೀರ ಯೋಧರಿಗೆ ನಮ್ಮೆಲ್ಲರ ವತಿಯಿಂದ ಹ್ಯಾಟ್ಸಾಫ್ ಹೇಳೋಣ!!!
ಜೈ ಹಿಂದ್!!!