ಪ್ರಭು ಶ್ರೀರಾಮಚಂದ್ರನನ್ನೇ ಮೀರಿಸುವ ವ್ಯಕ್ತಿತ್ವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಈ ಮಕ್ಕಳದ್ದು!!

ಪ್ರಭು ಶ್ರೀರಾಮಚಂದ್ರನನ್ನೇ ಮೀರಿಸುವ ವ್ಯಕ್ತಿತ್ವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಈ ಮಕ್ಕಳದ್ದು!! ರಸ್ತೆಮದ್ಯೆ ಬಿದ್ದುಸಿಕ್ಕ ಮೊಬೈಲನ್ನು ಈ ಮಕ್ಕಳು ಏನು ಮಾಡಿದ್ರು ಗೊತ್ತಾ?

0

ರಸ್ತೆಮದ್ಯೆ ಬಿದ್ದುಸಿಕ್ಕ ಮೊಬೈಲನ್ನು ಈ ಮಕ್ಕಳು ಏನು ಮಾಡಿದ್ರು ಗೊತ್ತಾ?

ಅದು ಡಿಸೆಂಬರ್ ತಿಂಗಳು, ಶಿಶುಮಂದಿರದ ಪುಟಾಣಿಗಳಿಂದ ಹಿಡಿದು ಪದವಿವರೆಗಿನ ಎಲ್ಲಾ 3500 ವಿದ್ಯಾರ್ಥಿಗಳು, ಶಿಕ್ಷಕರು ರಾತ್ರಿಹಗಲೆನ್ನದೆ ಉತ್ಸಾಹದಿಂದ ಕ್ರೀಡೋತ್ಸವದ ತಯಾರಿ ನಡೆಸುತ್ತಿದ್ದ ಸಮಯ.
ಈ ಮದ್ಯೆ ಅಚ್ಚರಿಯ ಘಟನೆಯೊಂದಕ್ಕೆ ಕಲ್ಲಡ್ಕದ ಹನುಮಾನ್ ನಗರ ಸಾಕ್ಷಿಯಾಯಿತು.

ಎಂದಿನಂತೆ ಡಿಸೆಂಬರ್ 14 ಗುರುವಾರದಂದು ಎಲ್ಲಾ ಮಕ್ಕಳಂತೆ ಏಳನೇ ತರಗತಿಯ ಬೋಂಡಾಳದ ಶಮನ್ ಮತ್ತು ಗೋಳ್ತಮಜಲಿನ ಲತೇಶ್ ಶಾಲೆಗೆ ಹೊರಟಿದ್ದಾರೆ. ಸಾಮಾನ್ಯವಾಗಿ ಸಣ್ಣ ಮಕ್ಕಳು ಗೋಲಿ ಆಡುವುದು ಸಹಜ. ಇವರಿಬ್ಬರು ಕಲ್ಲಡ್ಕ ಪೇಟೆಯಲ್ಲಿ ಆ ಮುಂಜಾನೆ ಗೋಲಿ ಆಡುತ್ತಿದ್ದ ಸಮಯದಲ್ಲಿ ರಸ್ತೆಬದಿಯಲ್ಲಿ ಬಿದ್ದಿದ್ದ ಮೊಬೈಲೊಂದು ಅವರ ಕಣ್ಣಿಗೆಬಿದ್ದಿದೆ. ಈಗಿನ ಕಾಲದಲ್ಲಿ ತಾಯಿಯ ಎದೆಹಾಲು ಕುಡಿಯುವ ಸಣ್ಣ ಮಗುವಿನಿಂದಹಿಡಿದು ಹಲ್ಲಿಲ್ಲದ ಮುದುಕರ ವರೆಗೆ ಮೊಬೈಲ್ ಬೇಕಿರುವಾಗ ಬಿದ್ದುಸಿಕ್ಕಿದ ಮೊಬೈಲ್ ಯಾರಿಗೆ ಬೇಡ ಹೇಳಿ? ತಕ್ಷಣವೇ ಆ ಮೊಬೈಲ್ ಕೈಗೆತ್ತಿಕೊಂಡ ಅವರು ಮಾಡಿದ್ದೇನು ಗೊತ್ತಾ?

ಅವರಿಬ್ಬರೂ ಅಲ್ಲೇ ಪಕ್ಕದಲ್ಲಿರುವ ಮನೆಯ ಹೆಂಗಸೊಬ್ಬರಲ್ಲಿ ಈ ಮೊಬೈಲ್ ನಿಮ್ಮದೇ? ಎಂದು ಕೇಳಿದ್ದಾರೆ. ಅವರು ನನ್ನದಲ್ಲ ಎಂದಿದ್ದಾರೆ!! ಅಲ್ಲಿಂದ ಮೊಬೈಲ್ ಬ್ಯಾಗಲ್ಲಿ ಹಾಕಿ ಶಾಲೆಗೆ ಬಂದು “ಕಲ್ಲಡ್ಕದಲ್ಲಿ ಬಿದ್ದು ಸಿಕ್ಕಿದ ಮೊಬೈಲ್ ಮಾತಾಜಿ ಎಂದು” ಆ ಮೊಬೈಲನ್ನು ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರಲ್ಲಿ ಕೊಟ್ಟಿದ್ದಾರೆ. ಮೊಬೈಲ್ ಚಾರ್ಜ್ ಕಾಲಿಯಾಗಿದ್ದ ಕಾರಣ ಶಿಕ್ಷಕಿ ಮೊಬೈಲನ್ನು ಚಾರ್ಜ್ ಮಾಡಿ, ಸ್ವಿಚ್ ಒನ್ ಮಾಡಿ ವಾಲ್ ಪೇಪರ್ ನೋಡುವಾಗ ಅದರಲ್ಲಿ ಶ್ರೀರಾಮದ ಇನ್ನೊಂದು ಮಾತಾಜಿಯ ಫೋಟೋ ಕಂಡಿತು. ಆ ಮಾತಾಜಿಯನ್ನು ಕರೆದು ನಿಮ್ಮ ಮೊಬೈಲೇ ಇದು? ಎಂದು ಕೇಳಿದಾಗ “ನನ್ನದಲ್ಲ” ಎಂದರು!! ಮತ್ತೆ ಕೂಲಂಕುಷವಾಗಿ ನೋಡಿದ ನಂತರ ಅದು ಆ ಮಾತಾಜಿಯ ಗಂಡನ (ಕಲ್ಲಡ್ಕ ಸೊಸೈಟಿ ಉದ್ಯೋಗಿ) ಮೊಬೈಲ್ ಎಂದು ತಿಳಿದುಬಂತು.

ಕರೆಮಾಡಿ ವಿಷಯ ತಿಳಿಸಿದ ತಕ್ಷಣವೇ ಆ ಬ್ಯಾಂಕ್ ಮ್ಯಾನೇಜರ್ ವಿದ್ಯಾಕೇಂದ್ರಕ್ಕೆ ಬಂದು ಮೊಕವಿಸ್ಮಿತರಾಗಿ ನಿಂತುಬಿಟ್ಟರು. “ಸಮಾಜದಲ್ಲಿ ಹೆಚ್ಚಾಗಿ ಮೊಬೈಲ್ ಕಳ್ಳತನ ಮಾಡುವ ಮಕ್ಕಳೇ ತುಂಬಿರುವ ಇಂತಹ ಕಾಲದಲ್ಲಿ, ಬಿದ್ದುಸಿಕ್ಕಿದ ಮೊಬೈಲ್ ಹಿಂತಿರುಗಿಸುವ ಮಕ್ಕಳು ಇದರಲ್ಲಾ!” ಎಂದು ಹೇಳಿ ಆ ಇಬ್ಬರೂ ಮಕ್ಕಳನ್ನು ಹಾಡಿಕೊಂಡಾಡಿದರು. ಅಲ್ಲದೆ ಸತ್ಯ,ಪ್ರಾಮಾಣಿಕತೆ ಮೆರೆದ ಆ ಮಕ್ಕಳಿಗೆ ಬಹುಮಾನವೆಂಬತೆ ಕಿಸೆಯಿಂದ ತಲಾ ಐದುನೂರು ರೂಪಾಯಿಯಂತೆ ಸಾವಿರರುಪಾಯಿ ತೆಗೆದು ಮಕ್ಕಳ ಕೈಗೆಕೊಟ್ಟರು. ಆದರೆ ಆ ಇಬ್ಬರೂ ಮಕ್ಕಳೂ ಹಣ ತೆಗೆದುಕೊಳ್ಳಲು ನಯವಾಗಿ ತಿರಸ್ಕರಿಸಿದರು. “ನಾವು ದಾರಿ ಮದ್ಯೆ ಬಿದ್ದಿದ್ದ ನಮ್ಮದಲ್ಲದ ಮೊಬೈಲ್ ಒಂದನ್ನು ಹೆಕ್ಕಿ ನಿಮಿಗೆ ಕೊಟ್ಟದ್ದು ಅಷ್ಟೇ ಶ್ರೀಮಾನ್ ಆದಿಕ್ಕೆ ಬಹುಮಾನ ಯಾಕೆ?” ಎಂದು ಕೇಳಿದರು. ಆದರೆ ಅಷ್ಟೋತ್ತಿಗೆ ಒತ್ತಾಯಪೂರ್ವಕವಾಗಿ ಬ್ಯಾಂಕ್ ಮ್ಯಾನೇಜರ್ ಅವರಿಬ್ಬರ ಕಿಸೆಗೆ ಹಣ ಹಾಕಿಬಿಟ್ಟಿದ್ದರು.ಆ ಹಣವನ್ನು ಆ ಪುಟ್ಟ ಮಕ್ಕಳೇನು ಮಾಡಿದ್ರು ಗೊತ್ತಾ?

ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರುತ್ತಿದ್ದ ಕೊಲ್ಲೂರು ಮುಖಾಂಬಿಕೆಯ ಪ್ರಸಾದದ ರೂಪದ ಅನ್ನವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡ ನಂತ್ರ, ಕಷ್ಟದಲ್ಲಿರುವ ಶಾಲೆಯ ಮದ್ಯಾಹ್ನದ ಅನ್ನಕ್ಕೆ ನಮ್ಮ ಸಹಾಯ, ನಮ್ಮ ಬಹುಮಾನದ ಹಣ “ಭಿಕ್ಷಾಂದೇಹಿಗೆ” ಎಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಆ ಸಾವಿರ ರೂಪಾಯಿಯನ್ನು ಕೊಟ್ಟರು. ಮಕ್ಕಳದ್ದು ಎಂತಹ ತ್ಯಾಗನೋಡಿ! ಇಂದಿನ ಮಕ್ಕಳು ಹತ್ತು ರೂಪಾಯಿ ಕೊಟ್ಟ ಕೂಡಲೇ ಅಂಗಡಿಗೆ ಓಡಿ ತಿಂಡಿ ತಿನ್ನುವ ಈ ಕಾಲದಲ್ಲಿ 500 ರೂಪಾಯಿ ಸಿಕ್ಕಿದಕೂಡಲೇ ಅದನ್ನು ಕಷ್ಟದಲ್ಲಿರುವ ಶಾಲೆಗೆ ನೀಡಬೇಕೆನ್ನುವ ಆ ಸಣ್ಣ ಹೃದಯಗಳು ಎಷ್ಟು ಶ್ರೇಷ್ಠ ಅಲ್ವಾ? ಹರಿಶ್ಚಂದ್ರನನ್ನೂ ಮೀರಿಸಿದ ಸತ್ಯ, ಕರ್ಣನನ್ನೂ ಮೀರಿಸಿದ ತ್ಯಾಗ, ಏಕಲವ್ಯನನ್ನೂ ಮೀರಿಸುವ ಗುರುಭಕ್ತಿ, ಶಾಲೆಯಬಗ್ಗೆ ನಿಷ್ಠೆಯನ್ನು ಇಲ್ಲಿ ಕಾಣಬಹುದು. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನನ್ನೇ ಮೀರಿಸುವ ವ್ಯಕ್ತಿತ್ವ ಈ ಮಕ್ಕಳದ್ದು ಅಲ್ಲವೇ?

ತೊಂಬತ್ತು ಶೇಕಡಾ ಅಂಕಪಡೆದು ಬುದ್ದಿವಂತ ಅನಿಸಿಕೊಳ್ಳುವುದಕ್ಕಿಂತ ಸತ್ಯಹೇಳಿ ಪ್ರಾಮಾಣಿಕ ಎನಿಸಿಕೊಳ್ಳುವುದು ಮೇಲು ಅಲ್ಲವೇ? ಇದೇ ಶಿಕ್ಷಣವನ್ನು ಕಳೆದ ಮೂವತ್ತಾರು ವರ್ಷದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕೋಡುತ್ತಾ ಬಂದಿದೆ. ಆದರೆ ಇಂದು ಇದೇ ಮುಗ್ದ ಮಕ್ಕಳ ಅನ್ನವನ್ನು ಸರ್ಕಾರ ಕಿತ್ತುಕೊಂಡಿದೆ. ಪ್ರಾಮಾಣಿಕತೆ, ತ್ಯಾಗ, ಸತ್ಯ ಮೆರೆಯುವ ಇಂತಹ ಮಕ್ಕಳಿರುವ ಕರ್ನಾಟಕದ ಈ ಪುಣ್ಯ ಪವಿತ್ರ ಮಣ್ಣಲ್ಲಿ ಕಿತ್ತುತಿನ್ನುವ ರಮಾನಾಥ ರೈ, ಸಿದ್ದರಾಮಯ್ಯನಂತವರು ಅದ್ಹೇಗೆ ಜನ್ಮವೆತ್ತರು ದೇವ್ರೇ? ಸಿದ್ದಣ್ಣ, ನಿಮ್ಮಂತಹ ಮನುಷ್ಯರು ಮನೆಮನೆಯಲ್ಲಿ ಜನಿಸುತ್ತಾರೆ ಆದರೆ ಮನುಷ್ಯತ್ವ ಎಂಬುದು ಈ ಮಕ್ಕಳಂತೆ ಕೆಲವಲರ ಮನದಲ್ಲಿ ಮಾತ್ರ ಜನಿಸುತ್ತದೆ. ಇನ್ನಾದ್ರೂ ಕಿತ್ತುಕೊಳ್ಳುವ ಮೃಗಗಳ ಪ್ರವೃತ್ತಿಬಿಟ್ಟು ಮನುಷ್ಯರಾಗಿ ಮಾನ್ಯ ಉಸ್ತುವಾರಿ ಸಚಿವರೇ ಹಾಗೂ ಮುಖ್ಯಮಂತ್ರಿಗಳೇ.

ಏನೇ ಕಠಿಣತೆ ಬರಲಿ. ಕನಸುಗಳನ್ನು ಬೆನಟ್ಟಿ ಗುರಿಸಾಧಿಸುವುದು ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಪ್ರವೃತ್ತಿ. ನಾವು ಹೆಚ್ಚು ಸಂಪಾದಿಸಿದರೇನು ಪ್ರಯೋಜನ ಆ ಸಂಪತ್ತಿಗೆ ನಾವು ಕಾವಲುಗಾರರಾಗಿರಬೇಕಲ್ಲಾ? ಅದಕ್ಕಿಂತ ಸತ್ಯ, ತ್ಯಾಗ, ತಾಳ್ಮೆ ಹಾಗೂ ರಾಷ್ಟ್ರೀಯತೆಯನ್ನು ನಾವು ಮೈಗೂಡಿಸಿಕೊಂಡರೆ ಅದು ನಮಗೆ ಕಾವಲಾಗಿರುತ್ತದೆ ಎಂದು ತಿಳಿದವರು ಅಲ್ಲಿನ ಮಕ್ಕಳು.


ಬೆಟ್ಟ ಹತ್ತುವ ಮೊದಲು ಎತ್ತರವಾಗಿರುತ್ತದೆ, ಹತ್ತಿದ ಮೇಲೆ ನಮ್ಮ ಕಾಲಿನ ಕೆಲಗಿರುತ್ತದೆ, ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಶಿಕ್ಷಣವನ್ನು ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿಳಿಗೆ ನೀಡುತ್ತಿದೆ. ಸಂಸ್ಥೆಯ ಸ್ಥಾಪಕರಾದ ಗೌರವಾನ್ವಿತ
ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಇವರು ಬಿತ್ತಿದ ರಾಷ್ಟ್ರೀಯತೆಯ ಹಾಗೂ ಹಿಂದುತ್ವದ ಬೀಜ ಇಂದು ಮೊಳಕೆಯೊಡೆದು ಹಚ್ಚಹಸಿರಾಗಿ ಸೊಂಪಾಗಿ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಸಿಹಿಸಿಹಿಯಾದ ಹಣ್ಣು ನೀಡುತ್ತಿದೆ. ರಕ್ತದ ಕಣಕಣದಲ್ಲಿ ಪ್ರಾಮಾಣಿಕತೆ, ರಾಷ್ಟ್ರೀಯತೆ ತುಂಬಿಕೊಂಡಿರುವ ಇಂತಹ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶ್ರಮಿಸಿದ ಶಿಕ್ಷಕವೃಂದ, ಪೋಷಕರಿಗೆ, ವಿದ್ಯಾಕೇಂದ್ರದ ಆಡಳಿತ ಮಂಡಳಿಗೆ ನನ್ನ ಮನದಾಳದ ಅಭಿನಂದನೆಗಳು.

ಇಂತಹ ಧರ್ಮರಕ್ಷಣೆ ಮಾಡುವ ಸಂಸ್ಕಾರ ಕಲಿಸಿಕೊಡುವ ಕರ್ನಾಟಕದ ಅತ್ಯಂತದೊಡ್ಡ ಕನ್ನಡಮಾದ್ಯಮ ಶಿಕ್ಷಣಸಂಸ್ಥೆಯನ್ನು ನಾವು ಪರಸ್ಪರ ಒಗ್ಗಟ್ಟಾಗಿ ಕೈಗೆಕೈಜೋಡಿಸಿ ಇನ್ನಷ್ಟು ಎತ್ತರಕ್ಕೆ ಬೆಳೆಸುವ ಎನ್ನುತ್ತಾ…..

✍ಸಚಿನ್ ಜೈನ್ ಹಳೆಯೂರ್