ಇತಿಹಾಸದ ದೃಷ್ಟಿಯಲ್ಲಿ ಶಿವಾಜಿ ಮಹಾರಾಜರು..!!

ಇತಿಹಾಸದ ದೃಷ್ಟಿಯಲ್ಲಿ ಶಿವಾಜಿ ಮಹಾರಾಜರು..!!

0

ಇತಿಹಾಸದ ದೃಷ್ಟಿಯಲ್ಲಿ ಶಿವಾಜಿ ಮಹಾರಾಜರು

ಇಂದು ವಿದ್ಯಾಲಯಗಳಲ್ಲಿ ಕಲಿಸುತ್ತಿರುವ ಇತಿಹಾಸವು ರಾಷ್ಟ್ರದ ವಿಕಾಸದ ಕಥೆಯಾಗಿರದೆ ಕೇವಲ ರಾಜರುಗಳ ಕಾರ್ಯಕಲಾಪಗಳ ಕಥೆ ಆಗಿದೆ. ಒಂದು ದೇಶದ ನಿವಾಸಿಗಳ ಹೃದಯಗಳು ಒಂದು ಸಮಾನ ಭಾವನೆ ಮತ್ತು ಆಕಾಂಕ್ಷೆಯಿಂದ ಕಂಪಿತವಾದಾಗ ಮತ್ತು ರಾಷ್ಟ್ರದ ಸಾರ್ವಜನಿಕ ಅಪೇಕ್ಷೆಯ ಪೂರ್ತಿಗಾಗಿ ಒಟ್ಟುಗೂಡಿ ಪ್ರಯತ್ನಿಸಿದಾಗ ಹಾಗೂ ಸಂಘಟಿತರಾಗಿಎಲ್ಲ ರೀತಿಯ ಶತ್ರುತ್ವಪೂರ್ಣ ಬಾಹ್ಯ ಆಕ್ರಮಣಗಳಿಂದ ಈ ರಾಷ್ಟ್ರೀಯಮಹತ್ವಾಕಾಂಕ್ಷೆಯನ್ನು ಸಂರಕ್ಷಿಸಿದಾಗಲೇ ಐತಿಹಾಸಿಕ ದೃಷ್ಟಿಯಿಂದ ಒಂದು ರಾಷ್ಟ್ರದ ಉದಯವಾಗುತ್ತದೆ.

ಇತಿಹಾಸದ ನಿರ್ಮಾಣ

ಒಂದು ದೇಶದ ನಾಗರೀಕರು ಏಕತೆಯ ಭಾವನೆಯಿಂದಕೂಡಿದವರೂ, ಓತಪ್ರೋತರೂ ಮತ್ತು ಪುಷ್ಟಗೊಂಡವರೂ ಆದಾಗ ಈ ಭಾವನೆಯು ತಾನಾಗಿಯೇ ಐತಿಹಾಸಿಕಕಾರ್ಯಗಳು ಮತ್ತು ಕ್ರಿಯಾಕಲಾಪಗಳ ರೂಪದಲ್ಲಿ ಪ್ರಕಟವಾಗುತ್ತದೆ. ಅನಿಯೋಜಿತ,ಅಸಂಬದ್ಧವಾದುದರಿಂದ ಅನಿಯಂತ್ರಿತ ಸಂಘಟನೆಗಳು ಕೇವಲ ಆಕಸ್ಮಿಕವಾಗಿರುತ್ತವೆ. ಆವು ಜನತೆಯ ಮನಸ್ಸಿನ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು. ಅವುಗಳಿಗೆ ರಾಷ್ಟ್ರದ ಇತಿಹಾಸದಲ್ಲಿ ಯಾವ ಸ್ಥಾನವೂ ದೊರೆಯದು. ಏಕೆಂದರೆ ಆ ಘಟನೆಗಳು ಜನಮಾನಸದ ಮೇಲೆಏಕಸೂತ್ರತೆಯ ಅನುಭವವುಂಟುಮಾಡಲು ಸಂಪೂರ್ಣ ವಿಫಲವಾಗುತ್ತವೆ.

ಭಾರತದ ರಾಜ-ಮಹಾರಾಜರುಗಳ ಅಧಿಕಾಂಶ ಚರಿತ್ರೆಗಳುವಿದೇಶೀಯರಿಂದ ಬರೆಯಲ್ಪಟ್ಟಿದ್ದು ಸ್ವೇಚ್ಛಾ ಲೇಖನದ ರೂಪದಲ್ಲಿ ನಮ್ಮೆದುರು ಇದೆ ಎಂಬ ತಥ್ಯವು ಈ ವಿಶ್ಲೇಷಣೆಯಿಂದ ಪ್ರಕಟವಾಗುತ್ತದೆ. ಈ ರಾಜರ ಗೌರವಪೂರ್ಣ ಕ್ರಿಯಾಕಲಾಪಗಳನ್ನುನೆನಪಿನಲ್ಲಿಟ್ಟುಕೊಳ್ಳಬೇಕೆಂಬ ಭಾವನೆಯೇ ಜನರ ಮನಸ್ಸಿನಲ್ಲಿ ಉಂಟಾಗದಿರುವುದು ಈ ಕಾರಣದಿಂದಲೇ. ಈ ರಾಜರ ಗೌರವಪೂರ್ಣ ಕಾರ್ಯಗಳನ್ನು ಸ್ಮರಿಸಿಕೊಳ್ಳುವ ಅಗತ್ಯವನ್ನೇ ಜನರು ಮನಗಾಣುವುದಿಲ್ಲ. ಅದರಿಂದ ಅವರ ಸ್ಮೃತಿಗಳನ್ನು ಕಾಪಾಡಿಕೊಳ್ಳಬೇಕೆಂಬ ಉನ್ನತ ಆಕಾಂಕ್ಷೆ ಸಹ ಅವರಲ್ಲಿ ಉಂಟಾಗುವುದಿಲ್ಲ. ದೇದ ವಿಶಿಷ್ಟ ಕಾಲಖಂಡದ ಇತಿಹಾಸದ ಸಂರಕ್ಷಣೆಯ ಪ್ರಯತ್ನವನ್ನು ಭಾರತದ ಯಾವುದೇ ಭಾಗದ ಜನರು ಸ್ವತಃ ಮಾಡಿರುವುದಾದರೆ ಅದು ಮಹಾರಾಷ್ಟ್ರದಲ್ಲಿ ಮಾತ್ರ. ಮಹಾರಾಷ್ಟ್ರದ ‘ಬಾಖರ್’ (ಐತಿಹಾಸಿಕ ದಾಖಲೆಗಳು) ಇದಕ್ಕೆ ಸಾಕ್ಷಿ.

ಆ ಕಾಲಾವಧಿಯ ಇತಿಹಾಸವನ್ನು ಕ್ರಮಬದ್ಧ ರೂಪದಲ್ಲಿ ಪ್ರಕಟಿಸುವ ಈ ಅಂತಃ ಪ್ರೇರಣೆಯೇ ಆ ಕಾಲಾವಧಿಯಲ್ಲಿ ಜನತೆಯು ಅನುಭವಿಸಿದ ಏಕತೆಯ ಸಂಕೇತವಾಗಿದೆ.

ರಜಪೂತರ ಇತಿಹಾಸವೂ ಸಿಕ್ಕಿದೆ. ಆದರೆ ಅದುರಜಪೂತರ ಇತಿಹಾಸವಾಗಿರದೆ ಕೆಲವು ಗುಂಪುಗಳು ಹಾಗೂ ಕೆಲವು ರಾಜರ ಕಥೆ ಮಾತ್ರ ಆಗಿದೆ. ಮಹಾರಾಷ್ಟ್ರದ ಇತಿಹಾಸವು ಕೇವಲ ಕೆಲವು ವರ್ಗಗಳು ಮತ್ತು ರಾಜರುಗಳ ವೈಭವದ ವಂಶಗತ ಇತಿಹಾಸವಾಗಿರದೆ ಇಡೀ ಜನಾಂಗದ ಚರಿತ್ರೆಯಾಗಿದೆ.

ಸಿಖ್ ಗುರುಗಳ ಕಥೆಯೇ ಇಂದು ಸಿಖ್ ಇತಿಹಾಸದ ರೂಪತಾಳಿದೆ. ಆದರೆ ಇದು ಮರಾಠರ ಇತಿಹಾಸದಂತೆ ಅಮೂಲ್ಯ ಹಾಗೂ ಪ್ರಭಾವಕಾರಿಯಾದುದಲ್ಲ. ಸಿಖ್ ಮತ ಮತ್ತು ರಜಪೂತರ ಇತಿಹಾಸದಲ್ಲೂ ಮಹಾನತೆ, ಪರಾಕ್ರಮ,ಬಲಿದಾನ ಮತ್ತು ಶೌರ್ಯದ ಅನೇಕ ಉದಾಹರಣೆಗಳು ಇವೆ. ಆದರೆ, ಸಿಖ್ ಜಾತಿಯ, ಪಂಥದ ಇತಿಹಾಸವು ಒಂದು ವಿಕಸಿತ ಮತ್ತು ಸಂಘಟಿತ ರಾಷ್ಟ್ರದ ಇತಿಹಾಸದ ಯಾವುದೇ ದೃಶ್ಯವನ್ನು, ಉದಾಹರಣೆಯನ್ನು ಮುಂದಿಡುವುದಿಲ್ಲ. ಶಿವಾಜಿ ಮತ್ತು ಮರಾಠರು ತಮ್ಮ ಶೌರ್ಯ ಮತ್ತು ಪರಾಕ್ರಮದಿಂದ ತಮ್ಮ ಗೌರವವನ್ನು ಶಾಶ್ವತಗೊಳಿಸಿದ್ದೇ ಅಲ್ಲದೆ ಅದಕ್ಕೂ ಮಿಗಿಲಾಗಿ ಪರಾಕ್ರಮಕ್ಕಿಂತ ಎಷ್ಟೋ ಪಾಲು ಮಹತ್ವಪೂರ್ಣವಾದ ರಾಷ್ಟ್ರ ಮತ್ತು ರಾಜ್ಯದ ಬುನಾದಿ ಹಾಕಿದರು.

ಆಗಿನ ಕಾಲದಲ್ಲಿ ನಮಗೆ ಐತಿಹಾಸಿಕ ದೃಷ್ಟಿಯನ್ನು ನೀಡಿದ ಪ್ರಾಂತ್ಯವೆಂದರೆ ಮಹಾರಾಷ್ಟ್ರವೊಂದೇ.

ಇಂಗ್ಲೆಂಡಿನಲ್ಲಿ ಬ್ರಿಟೀಷರು ಮಾತ್ರವೇ ವಾಸಮಾಡುತ್ತಿದ್ದ ಒಂದು ಕಾಲದಲ್ಲಿ, ಅವರು ‘ಡೆನ್’ ಮತ್ತು ‘ಸೆಕ್ಸಸ್’ ಜನರೊಡನೆ ಯುದ್ಧಮಾಡಬೇಕಾಗುತ್ತಿತ್ತು. ಇವರ ಪರಸ್ಪರ ಸಂರ್ಷದ ಲಾಭ ಪಡೆದು ರೋಮನರು ಕೆಲವು ಕಾಲದವರೆಗೆ ಈ ಜನರ ಮೇಲೆ ತಮ್ಮ ಆಳ್ವಿಕೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ಅನಂತರ ‘ನಾರ್ಮನ್’ ಜನರು ಈ ದ್ವೀಪದ ಮೇಲೆ ಅಧಿಕಾರ ಹೊಂದಿದರು. ಇಂತಹ ತಥ್ಯಗಳವರ್ಣನೆಯಷ್ಟರಿಂದಲೇ ಒಂದು ರಾಷ್ಟ್ರದ ಇತಿಹಾಸ ಪ್ರಕಟವಾಗುವುದಿಲ್ಲ. ಆದರೆ ಯಾವ ಕ್ಷಣ ಇಂಗ್ಲೆಂಡು ರಾಷ್ಟ್ರ ವಾದದತ್ತ ಮುನ್ನಡೆಯಿತೋ, ಆಗ ಅಲ್ಲಿಯ ಜನತೆಯು ಬೇರೆ ಬೇರೆ ಶಕ್ತಿಗಳ ಘಾತ-ಪ್ರತಿಘಾತಗಳ ಬಗ್ಗೆ ಎಚ್ಚರಗೊಂಡಿತು. ಕೇವಲ ತನ್ನ ಭಾಗ್ಯದ ನಿರ್ಮಾಣಹಾಗೂ ಗುರಿಯ ಅನ್ವೇಷಣೆಯಲ್ಲಿ ಮಾತ್ರವೇ ತೊಡಗದೆ, ಆ ಗುರಿ ಸಾಧನೆಗಾಗಿ ಸಾಧ್ಯವಿದ್ದ ಎಲ್ಲ ಕ್ರಮಗಳನ್ನೂ ಕೈಕೊಂಡಿತು. ಆಗ ಮಾತ್ರವೇ ಇಂಗ್ಲೆಂಡಿನ ಇತಿಹಾಸವು ತನ್ನ ಯಥಾರ್ಥ ಹಾಗೂ ವಾಸ್ತವಿಕ ರೂಪವನ್ನು ಪಡೆಯಿತು.

ಮೊಗಲರು ಮತ್ತು ಪಠಾಣರ ಇತಿಹಾಸ ಭಾರತೀಯವಲ್ಲ

ಮೊಗಲರು ಮತ್ತು ಪಠಾಣರ ಸಂರ್ಷದ ಟನೆಗಳರಕ್ತರಂಜಿತ ಇತಿಹಾಸದಲ್ಲೂ ಕೆಲವು ಸಂಗತಿಗಳು ಮಹತ್ವಪೂರ್ಣವೆಂಬುದು ನಿಜ. ಆದರೆ ಅವರಯುದ್ಧದ ಈ ಟನೆಗಳು ಭಾರತೀಯ ಇತಿಹಾಸದ ವಾಸ್ತವಿಕ ಸ್ವರೂಪವನ್ನು ಪ್ರಕಟಪಡಿಸುವುದಿಲ್ಲ. ಈಘಟನೆಗಳ ಅಧ್ಯಯನದಿಂದ ನಾವು ನಮ್ಮ ಪ್ರಜ್ಞಾವಸ್ಥೆಯನ್ನು ತಣಿಸಿಕೊಳ್ಳಬಹುದೇ ಹೊರತು ಐತಿಹಾಸಿಕ ದೃಷ್ಟಿಯನ್ನು ಪಡೆಯಲಾರೆವು.

ಒಂದು ವಿಶಿಷ್ಟ ಕಾಲಾವಧಿಗೆ ಸಂಬಂಧಿಸಿದ ಮಹಾರಾಷ್ಟ್ರ ಮತ್ತು ಸಿಕ್ಖರ ಇತಿಹಾಸ ಮಾತ್ರವೇ ವಿಶುದ್ಧ ಐತಿಹಾಸಿಕ ಮಹತ್ವವನ್ನು ವ್ಯಕ್ತಪಡಿಸುತ್ತದೆ. ರಾಷ್ಟ್ರವಾದದ ವಿಕಾಸಕ್ಕೆ ನೆರವಾಗುವ, ರಾಷ್ಟ್ರದ ಉದಯ ಮತ್ತು ವಿಕಾಸದಲ್ಲಿ ವಿಶಿಷ್ಟ ಪಾತ್ರವಹಿಸಿದ ಮತ್ತು ಅದರ ಪತನಕ್ಕೂ ಕಾರಣವಾದ, ಭಾರತೀಯ ಇತಿಹಾಸಕ್ಕೆ ಸಂಬಂಧಿಸಿದ ಶಕ್ತಿಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ, ಮಹಾರಾಷ್ಟ್ರ ಮತ್ತು ಸಿಕ್ಖರ ಇತಿಹಾಸವನ್ನು ಅವಲೋಕಿಸಬೇಕು.

ದುರ್ದೈವದಿಂದ ಇಂದು ದೇಶದ ವಿದ್ಯಾಲಯಗಳಲ್ಲಿಕಲಿಸುತ್ತಿರುವ ಇತಿಹಾಸದಲ್ಲಿ ಮೊಗಲರು ಮತ್ತು ಪಠಾಣರ ಕಾಲಾನುಗತ ವರ್ಣನೆಗೇ ಗೌರವದ ಸ್ಥಾನ ನೀಡಲಾಗುತ್ತಿದೆ. ಆದರೆ ಮೊಗಲರ ಮತ್ತು ಪಠಾಣರ ಈ ಕಥೆಗಳೇ ಜನರ ಆಕಾಂಕ್ಷೆಗಉ ಮತ್ತು ಪ್ರಯತ್ನಗಳ ಕಥೆಗಳಲ್ಲ. ಮೊಗಲರ ಮತ್ತು ಪಠಾಣರ ಕಥೆಗಳ ವರ್ಣನೆಯಲ್ಲಿ ಭಾರತದ ಹೆಸರು ಕೆಲವು ಘಟನೆಗಳಿಂದಾಗಿ ಆಕಸ್ಮಿಕವಾಗಿ ಉಲ್ಲೇಖಿಸಲ್ಪಟ್ಟಿದೆ. ಈ ಘಟನೆಗಳು ಭಾರತ, ಇತಿಹಾಸದ ಯಾವುದೇ ಚಿತ್ರವನ್ನು ನೀಡುವುದಿಲ್ಲ. ಅವುಗಳಲ್ಲಿ ಭಾರತಕ್ಕೆ ಯಾವ ಸ್ಥಾನವೂ ಇಲ್ಲ.

ಈ ವಿದೇಶಿ ಶಾಸಕರು ಮಾಡಿರುವ ತುಲನೆಯಲ್ಲಿ ಸಿಕ್ಖರು ಮತ್ತು ಮಹಾರಾಷ್ಟ್ರದ ಯಾವ ಒಂದು ಅಲ್ಪ ಇತಿಹಾಸವನ್ನು ನಾವು ಓದುತ್ತಿದ್ದೇವೋ ಅದನ್ನು ಯೋಗ್ಯವಾದುದೆಂದು ಬಹಳ ಕಷ್ಟದಿಂದಲೇ ಹೇಳಬೇಕಾಗುತ್ತದೆ. ದುರ್ಭಾಗ್ಯದಿಂದಇಲ್ಲಿ ಯಾವ ಮಾತನ್ನಾದರೂ ಭಾರತೀಯ ಜನತೆಯ ವಾಸ್ತವಿಕ ಇತಿಹಾಸದ ರೂಪದಲ್ಲಿಒಪ್ಪಿಕೊಳ್ಳಲಾಗುತ್ತದೆಂಬುದು ಭಾರತೀಯ ಇತಿಹಾಸದ ವಿಡಂಬನೆಯೇ ಹೌದು !

ಶಿವಾಜಿಯ ಮಹಾನತೆ, ರಾಷ್ಟ್ರಗೌರವದ ಪ್ರತಿಷ್ಠೆ

ಯಾವುದೇ ರಾಷ್ಟ್ರದ ಉತ್ಥಾನದ ಮೂಲದಲ್ಲಿ ಒಬ್ಬರುಅಥವಾ ಒಬ್ಬರಿಗಿಂತ ಹೆಚ್ಚು ಮಹಾಪುರುಷರ ಪಾತ್ರವನ್ನು ನಾವು ಕಾಣುತ್ತೇವೆ. ಯಾವುದೇ ಮಹಾನ್ ಕಲ್ಪನೆ ಮತ್ತು ವಿಚಾರವು ಜನತೆಯ ಗಮನವನ್ನು ತನ್ನತ್ತ ಆಕರ್ಷಿಸಿರದಿದ್ದರೆ ಈ ಮಹಾಪುರುಷರು ತಮ್ಮ ಮಹತ್ವವನ್ನು ಪ್ರಕಟಿಸುವ ಮಹತ್ವದ ಕಾರ್ಯವನ್ನೇ ಮಾಡುತ್ತಿರಲಿಲ್ಲ ಎನ್ನುವುದು ಈ ಪ್ರಸಂಗದಲ್ಲಿ ಸ್ಮರಣೀಯವಾದುದು. ಒಂದು ವಿಶಿಷ್ಟ ಕಾಲದಲ್ಲಿ ಭಿನ್ನ ಭಿನ್ನ ಶಕ್ತಿಗಳು ಸೇರಿ ಎಲ್ಲ ಕಡೆ ಒಂದು ವಾತಾವರಣವನ್ನು ನಿರ್ಮಿಸುತ್ತದೆ. ಚಿಕ್ಕವನು ದೊಡ್ಡವನು ಉಚ್ಚ-ನೀಚ, ತುಚ್ಚ ಅಥವಾ ಮಹಾನ್ ಹೀಗೆ ಪ್ರತಿಯೊಬ್ಬ ವ್ಯಕ್ತಿಯ ಸಹಕಾರವೂ ಇದರಲ್ಲಿ ಸೇರಿರುತ್ತದೆ. ರಾಷ್ಟ್ರದ ಈ ಸಿದ್ಧತೆಯನ್ನು ವ್ಯವಹಾರ ರೂಪದಲ್ಲಿ ಪ್ರಕಟಪಡಿಸಲು,ಅದನ್ನು ವ್ಯವಹಾರದ ಓರೆಗಲ್ಲಿನ ಮೇಲೆ ಯೋಗ್ಯವೆಂದು ಸಿದ್ಧಪಡಿಸುವ ಕಾರ್ಯವು ಶಕ್ತಿಶಾಲಿ ನೇತೃತ್ವದಿಂದ ಆಗುತ್ತದೆ.

ಇತಿಹಾಸದಲ್ಲೂ ಶಿವಾಜಿ ಮಹಾರಾಜರು ಒಂದುಮಹತ್ವಪೂರ್ಣ ಪಾತ್ರ ನಿರ್ವಹಿಸುವಂತೆ ಕಂಡುಬರುತ್ತಾರೆ. ಇಡೀ ಮಹಾರಾಷ್ಟ್ರದ ಜನತೆ ಮತ್ತು ಸಮಾಜವು ಅವರಿಗೆ ಸಹಕಾರ ನೀಡದಿದ್ದರೆ ಅವರ ಇಷ್ಟು ಮಹತ್ತನ್ನುಗಳಿಸುತ್ತಿರಲಿಲ್ಲ. ಅನೇಕ ವರ್ಷಗಳಿಂದ ಅನೇಕಾನೇಕ ಸಂತರು-ಮಹಾತ್ಮರು ಸಮಾಜದಲ್ಲಿ ಉಚ್ಚ-ನೀಚ, ಬ್ರಾಹ್ಮಣ ಮತ್ತು ಶೂದ್ರ ಎಂದು ಹರಡಿದ್ದ ಕೃತ್ರಿಮ ಕಟ್ಟುಪಾಡುಗಳನ್ನುದೂರಮಾಡುತ್ತ ಸಮಾಜದ ವಿವಿಧ ಮಾರ್ಗಗಳಲ್ಲಿ ಪರಸ್ಪರ ಸೌಹಾರ್ದದ ಸದ್ಭಾವನೆ ಮತ್ತು ಸಾಮರಸ್ಯವನ್ನು ಸ್ಥಾಪಿಸುವ ಕಾರ್ಯವನ್ನು ಏಕತೆಯ ಅಧಿಷ್ಠಾನದ ಮೇಲೆ ಸಶಕ್ತ ಸಮಾಜದ ನಿರ್ಮಾಣದ ಬುನಾದಿಯ ರೂಪದಲ್ಲಿ ಮಾಡುತ್ತಿದ್ದರು. ಈ ಸಂತ-ಮಹಾತ್ಮರು ಸಮಾಜದ ಉಚ್ಚ-ನೀಚ, ಚಿಕ್ಕವರು-ದೊಡ್ಡವರು, ತುಚ್ಚ ಅಥವಾ ಮಹಾನ್ ಎಲ್ಲರಿಗೂ ಭಕ್ತಿಯ ಮಾರ್ಗವನ್ನು ತೆರೆದಿಟ್ಟರು. ಈ ಸಂತ-ಮಹಾತ್ಮರು ಜನಮಾನಸದಲ್ಲಿ ಒಂದು ಸರ್ವಮಾನ್ಯ ಶಕ್ತಿಯ ರೂಪದಲ್ಲಿ ಪರಮಾತ್ಮನ ಆರಾಧನೆಯ ಬಗ್ಗೆ ಹೆಮ್ಮೆಯನ್ನೂ ಸ್ವಾಭಿಮಾನದ ಭಾವನೆಯನ್ನೂ ಜಾಗೃತಗೊಳಿಸಿದರು.

ಮಹಾರಾಷ್ಟ್ರದಲ್ಲಿ ಧಾರ್ಮಿಕ ಆಂದೋಲನಗಳು ಧರ್ಮ-ಚರ್ಚೆಗಳ ಮೂಲಕ ಜನತೆಯನ್ನು ಏಕತೆಯ ಸೂತ್ರದಲ್ಲಿ ಪೋಣಿಸುವ ಕಾರ್ಯಮಾಡಿದುವು. ಈ ಏಕತೆಯ ಬೇರುಗಳು ಈ ಧಾರ್ಮಿಕ ಜಾಗೃತಿಯಲ್ಲೇ ಅಡಗಿದ್ದುವು. ಶಿವಾಜಿ ಮಹಾರಾಜರ ಮಹಾತೆಯು ರಾಷ್ಟ್ರೀಯಮಹತ್ವಾಕಾಂಕ್ಷೆಯ ರೂಪದಲ್ಲಿ ಮತ್ತು ರಾಷ್ಟ್ರೀಯ ಗೌರವದ ಪ್ರತಿಷ್ಠೆಯು ಶಿವಾಜಿ ಮಹಾರಾಜರ ಮಹಾನತೆಯ ರೂಪದಲ್ಲಿ ಪ್ರಕಟವಾಗಲು ಧಾರ್ಮಿಕ ಪುನರ್ಜಾಗೃತಿಯ ಈ ಪರಿಪಕ್ವತೆಯೇ ಕಾರಣ.

ಶಿವಾಜಿ ನೀಡಿದ ರಾಷ್ಟ್ರೀಯ ದೃಷ್ಟಿ ಕೋನ

ಶಿವಾಜಿ ಮಹಾರಾಜರು ಕೇವಲ ದರೋಡೆಖೋರರಾಗಿದ್ದರೆಬಹುಶಃ ಅಲ್ಪ ಪ್ರತಿಭೆಯ ಮೂಲಕ ಅವರು ತಮ್ಮ ಅಸಾಧಾರಣ ಬುದ್ಧಿಚತುರಯ ಉಪಯೋಗವನ್ನು ಸ್ವಾರ್ಥ ಪೂರ್ತಿಗಾಗಿ ಮತ್ತು ಅಧಿಕಾರಪ್ರಾಪ್ತಿಗಾಗಿ ಮಾತ್ರವೇ ಮಾಡುತ್ತಿದ್ದರು. ಅಂತಹ ಪರಿಸ್ಧಿತಿಯಲ್ಲಿ ಅವರು ದರೋಡೆ-ಲೂಟಿಗಳಿಂದ ಮಹಾರಾಷ್ಟ್ರ ಸಮಾಜವನ್ನು ಒಂದುಸೂತ್ರದಲ್ಲಿ ಬಂಧಿಸಲು ಎಂದೂ ಯಶಸ್ವಿಯಾಗುತ್ತಿದ್ದಿಲ್ಲ. ಶಿವಾಜಿ ಮಹಾರಾಜರು ಮಹಾರಾಷ್ಟ್ರದಿಂದ ದೂರ, ಆಗ್ರಾದಲ್ಲಿ ಔರಂಗಜೇಬನಿಂದ ಬಂಧಿಸಲ್ಪಟ್ಟರು ಮತ್ತುಸೆರೆಯಲ್ಲಿಡಲ್ಪಟ್ಟರು. ತಮ್ಮ ರಾಜ್ಯದಿಂದ ಅವರು ಇಷ್ಟೊಂದು ಕಾಲದವರೆಗೆ ಸತತ ಅನುಪಸ್ಥಿತರಾಗಿದ್ದರು,ಆದರೂ ಅವರ ಸಾಧನೆಗಳನ್ನು ಯಾವುದೇ ರೀತಿಯಲ್ಲಿಉಪೇಕ್ಷಿಸಲಾಗಲಿಲ್ಲ.

ತಿರಸ್ಕರಿಸಲಾಗಲಿಲ್ಲ, ಸಮಾಪ್ತಗೊಳಿಸಲಾಗಲಿಲ್ಲ ಎಂಬ ಅಸಾಮಾನ್ಯಸಂಗತಿಯನ್ನು ನಾವು ಈ ಸಂದರ್ಭದಲ್ಲಿ ಗಮನಿಸಬೇಕಾದುದು ಅಗತ್ಯ. ಈ ಸ್ಥಿತಿಯು ಅವರ ಎಲ್ಲಪ್ರಯತ್ನಗಳೂ ರಾಷ್ಟ್ರೀಯತೆಯ ಆಧಾರವನ್ನೇ ಅವಲಂಬಿಸಿದ್ದುವೆಂಬುದು ಹೆಗ್ಗುರುತಾಗಿದೆ. ಸತ್ಯ ಸಂಗತಿಯೆಂದರೆ ಶಿವಾಜಿ ಮಹಾರಾಜರ ಪ್ರಯತ್ನವು ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ, ರಾಷ್ಟ್ರವು ತನ್ನ ಮಹೋದ್ದೇಶ ಸಾಧನೆಗಾಗಿ ನಡೆಸಿದ ರಾಷ್ಟ್ರೀಯ ಪ್ರಯತ್ನದ ಪ್ರತಿಬಿಂಬಮತ್ತು ಪ್ರಕಟೀಕರಣವಾಗಿತ್ತು. ಈ ಗುರಿ ಸಾಧನೆಯ, ಉದ್ದೇಶಪೂರ್ತಿಯ ಕರೆಯೇ ಒಡೆದುಹೋಗಿದ್ದ ಮರಾಠರ ಅಪಕ್ವ ಪ್ರಯತ್ನಗಳಿಗೆ ರಾಷ್ಟ್ರೀಯ ಹಿತಗಳ ಸೇವೆಗಾಗಿ ಒಂದು ವಿಶಾಲ ಆಂದೋಲನದ ಸ್ವರೂಪ ನೀಡಿತು. ಅಧಿಕಾರಕ್ಕಾಗಿ ಹೋರಾಟಗಳಾಗಲಿ, ಮತ್ತು ವಿಜಯದಲ್ಲಿಗೆದ್ದ ಸಂಪತ್ತಿನ ಭಾಗಕ್ಕಾಗಿ ಆಗಲಿ ಅವರಲ್ಲಿ ಎಂದೂ ಪರಸ್ಪರ ದ್ವೇಷ ಮತ್ತು ತಿರಸ್ಕಾರವುಂಟಾಗಲಿಲ್ಲ, ಕೊಲೆಗಳು ನಡೆಯಲಿಲ್ಲ.

ಕಾಲಾಂತರದಲ್ಲಿ ರಾಷ್ಟ್ರೋತ್ಥಾನದ ಈ ಪ್ರಯತ್ನಗಳೂ ವ್ಯಕ್ತಿಗತ ಸ್ವಾರ್ಥದ ರೂಪ ಪಡೆದಾಗ ರಾಷ್ಟ್ರದಲ್ಲಿ ಎದ್ದ ಎಲ್ಲಶ್ತ್ತಗನ್ನೂ ಅವು ಏಕಸೂತ್ರದಲ್ಲಿ ಹಿಡಿಯಲಾರದಾದವು. ಆಲದ ಮರದಂತೆ ಪರಸ್ಪರ ಅಪನಂಬಿಕೆ ಮತ್ತು ಕಪಟ-ಮೋಸಗಳ ಬೇರುಗಳು ಮಹಾರಾಷ್ಟ್ರದ ಶಕ್ತಿಯ ತಳಪಾಯದಲ್ಲಿ ಆಳವಾಗಿ ತೂರತೊಡಗಿದವು. ‘ಸತ್’ ಬಗ್ಗೆ ಆಕರ್ಷಣೆ ಮತ್ತು ಆಗ್ರಹವೇ ರಾಷ್ಟ್ರೀಯ ಏಕತೆಯಆಧಾರವಾಗಿದ್ದು ಕಾಲಾಂತರದಲ್ಲಿ ಸ್ವಾರ್ಥಪರತೆಯಿಂದ ಅದು ಚೂರುಚೂರು ಮಾಡಲ್ಪಟ್ಟಿತು.

ಯಾವುದೇ ಸತ್ಕಾರ್ಯದಲ್ಲಿ ಏಕನಿಷ್ಠೆಯೊಂದೇ ವ್ಯಕ್ತಿಯ ಮಹತ್ವ ಮತ್ತು ರಾಷ್ಡ್ರದ ಶಕ್ತಿಯಲ್ಲಿ ಏಕರೂಪತೆಯನ್ನುಂಟುಮಾಡಬಲ್ಲುದು. ಆದರೆ ವ್ಯಕ್ತಿಯು ತನ್ನ ಸಾಮಥ್ರ್ಯವನ್ನು ತುಚ್ಛ ಸ್ವಾರ್ಥಗಳಿಗಾಗಿ ಉಪಯೋಗಿಸತೊಡಗಿದರೆ ಇಡೀ ರಾಷ್ಟ್ರದ ಸಾಮೂಹಿಕ ಶಕ್ತಿಯ ಪ್ರಬಲ ಬಿಂಬವು ಅವನಿಗೆ ಸಿಗಲಾರದು.

ಯಾವುದೇ ಸಮಾಜ ಅಥವಾ ರಾಷ್ಟ್ರವು ತನ್ನಲ್ಲಿರುವ ತುಚ್ಛ ಸ್ವಾರ್ಥಗಳ ಬದಲು ಏಕತೆಯ ವ್ಯಾಪಕ ಸ್ವರೂಪಕ್ಕೆ ಮಹತ್ವ ನೀಡುವುದಾದರೆ ಆ ದೇಶದಲ್ಲಿ ಅಡಗಿರುವ ಎಲ್ಲ ಶಕ್ತಿಗಳ ಪ್ರವಾಹವು ಅಸಾಮಾನ್ಯ ಯಶಸ್ಸಿನ ಮಾರ್ಗವನ್ನುಪ್ರಶಸ್ತಗೊಳಿಸಲು ಸಮರ್ಥವಾಗುತ್ತದೆ ಎಂಬುದೇ ನಮಗೆ ಶಿವಾಜಿ ಮಹಾರಾಜರು ಮತ್ತು ಮಹಾರಾಷ್ಟ್ರದ ಇತಿಹಾಸದಿಂದ ದೊರೆಯುವ ಪಾಠ. ಆದರೆ ಸತ್ಯದ ಬಗೆಗಿನ ಆಗ್ರಹ, ನಿಷ್ಠೆ ಮತ್ತು ಆಕರ್ಷಣೆಯಿಂದಲೇ ಇದು ಸಾಧ್ಯ. ಈ ಮೂಲಭೂತ ಹಾಗೂ ಅವಶ್ಯಕ ವಿಚಾರದ ಅಭಾವವಿದ್ದಾಗಅತ್ಯಂತ ಶಕ್ತಿಶಾಲಿಗಳೂ ಸ್ವಂತದ ರಕ್ಷಣೆ ಮಾಡಿಕೊಳ್ಳಲು ಅಸಮರ್ಥರಾಗುತ್ತಾರೆ.