ಡಾ.ಪ್ರಭಾಕರ್ ಭಟ್ ಜಿಯ ಶ್ರೀರಾಮ ವಿದ್ಯಾಸಂಸ್ಥೆಯ ಹಾವು ಕಚ್ಚಿದ್ದ ಜೀವನ್ಮರಣದ ನಡುವೆ ಹೊರಾಡ್ತಿದ್ದ ಆ ವಿದ್ಯಾರ್ಥಿಗೆ Father ಮುಲ್ಲರ್ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ಡಾಕ್ಟರ್ ಗಳು. ಹಿಂದೇಟು ಹಾಕಿದ್ಯಾಕೆ???

ಡಾ.ಪ್ರಭಾಕರ್ ಭಟ್ ಜಿಯ ಶ್ರೀರಾಮ ವಿದ್ಯಾಸಂಸ್ಥೆಯ ಹಾವು ಕಚ್ಚಿದ್ದ ಜೀವನ್ಮರಣದ ನಡುವೆ ಹೊರಾಡ್ತಿದ್ದ ಆ ವಿದ್ಯಾರ್ಥಿಗೆ Father ಮುಲ್ಲರ್ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ಡಾಕ್ಟರ್ ಗಳು. ಹಿಂದೇಟು ಹಾಕಿದ್ಯಾಕೆ???

0

ಹೌದು ಬಂಧುಗಳೇ ಅದು ಕಳೆದ ವರ್ಷ ಇದೆ ಸಮಯ..ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಲ್ಲೊಂದಾದ father ಮುಲ್ಲರ್ ಕಂಕನಾಡಿಯಲ್ಲಿ ಶ್ರೀರಾಮದ ವಿದ್ಯಾರ್ಥಿ ಒಬ್ಬನನ್ನನ್ನು.. ಅಡ್ಮಿಟ್ ಮಾಡಿಕೊಳ್ಳಲು… ಹಿಂದೇಟು ಹಾಕಿದ ಘಟನೆ ನಡೆದಿದೆ. ಯಾಕಿರಬಹುದು ಅನಿಸ್ತಿದಿಯಾ? ಹಾಗಾದ್ರೆ ಪೂರ್ತಿ ಓದಿ…

 

ಕೊರಗಪ್ಪ ಅವ್ರಿಗೆ 5 ಜನ ಮಕ್ಕಳು.. ಅದರಲ್ಲಿ ದೊಡ್ಡವನು ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ…ಉಳಿದವರು ಅವನಿಗಿಂತ ಸಣ್ಣವರು..

ಅದೊಂದು ದಿನ ಆ 9ನೇ ತರಗತಿ ಹುಡುಗ..ಎಂದಿನಂತೆ ಸಮವಸ್ತ್ರ ಧರಿಸಿ ಶಾಲೆಗೆ ಹೊರಟಿದ್ದಾನೆ..ತೋಟದ ಮೂಲಕ ಹಾದು ಹೋಗವ ದಾರಿಯಲ್ಲಿ ಹೋಗವಾಗ ಕಾಲಿಗೆ ವಿಷದ ಹಾವೊಂದು ಕಚ್ಚಿದೆ..ಹಾವು ಕಚ್ಚಿದ್ದಾಗ ಹೆದರಿ ಹುಡುಗ ಅಲ್ಲೇ ತಲೆತಿರುಗಿ ಬಿದ್ದಿದ್ದಾನೆ..

ಹಾವುಕಚ್ಚಿದ ವಿಷಯವನ್ನು ಯಾರೋ ಕೊರಗಪ್ಪ ಅವ್ರಿಗೆ ತಲುಪಿಸಿದ್ದಾರೆ.. ತಕ್ಷಣ ಕೆಲಸಬಿಟ್ಟು ಮಗನನ್ನು ನೋಡಲು ಓಡೀ ಬಂದಿದ್ದಾರೆ.. ಅಷ್ಟೋತ್ತಿಗೆ ಅಲ್ಲಿಯೇ ಪಕ್ಕದ ಮನೆಯವರು ಆ ಹುಡುಗನನ್ನು ಎತ್ತಿಕೊಂಡು ಹೋಗಿ ಮನೆಯ ಸಿಟ್ ಔಟ್ ಲ್ಲಿ ಮಲಗಿಸಿದ್ದಾರೆ.

ಮಗನನ್ನು ನೋಡಿದ ಕೊರಗಪ್ಪ ಅವ್ರಿಗೆ ಕಣ್ಣೀರು ಬಂದಿದೆ… ಚೆನ್ನಾಗಿ ಆಟ ಅಡಿಕೊಂಡಿದ್ದ ಮಗನಿಗೆ ಹೀಗಾಯ್ತಲ್ಲ.. ಎನ್ನುವ ದುಃಖ..ಒಂದು ಕಡೆಯಾದರೆ.. ಮದ್ದುಮಾಡಲು ಬೇಕಾದ ಹಣದ ಯೋಚನೆ ಮಾಡಿದಾಗ ತಲೆಯ ಮೇಲೆ ಕಲ್ಲೇ ಬಿದ್ದಂತಾಗಿದೆ…ಪಾಪದ ಬಡ ಮನಸ್ಸುಗಳಿಗೆ ಯಾವಾಗಲೂ ಕಷ್ಟನೆ ಅಲ್ವಾ???

ಮಗನನ್ನು ಪಕ್ಕದ ನಾಟಿ ವ್ಯದ್ಯರ ಬಳಿ ಕರ್ಕೊಂಡು ಹೋಗಿ ತೋರಿಸಿ ಮದ್ದು ತಂದಿದ್ದಾರೆ..ಒಂದು ಕಡೆ ಕೆಲ್ಸ ಮಾಡದೆ ಹಣ ಇಲ್ಲ…ಅದ್ರ ಜತೆಗೆ 5 ಮಕ್ಕಳನ್ನು ಸಾಕುವುದು ಎಷ್ಟುಕಷ್ಟ!!!ನೇನಿಸ್ಕೊಂಡರೆ ಕಣ್ಣೀರು ಬರುತ್ತದೆ.. ಅದ್ರ ಜತೆಗೆ ದೊಡ್ಡ ಮಗನಿಗೆ ಹಾವು ಕಚ್ಚಿಬಿಟ್ಟಿದೆ..

ಅದೇ ನಾಟಿ ಮದ್ದು ಮಾಡಿದರು..ಆದ್ರೆ ಮಗನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ..ಮಗನ ಪರಿಸ್ಥಿತಿ ನೋಡಿ ಜೀವನವೇ ಮುಗಿತು ಅನ್ನೋ ಹಾಗಿದ್ರು ಕೊರಗಪ್ಪ ಅವ್ರು… ಹಣ ಇಲ್ಲದಿದ್ರು ಖುಷಿಯಿಂದ ಇದ್ದ ಕುಟುಂಬಕ್ಕೆ ಇಂದು ಗ್ರಹಣ ಬಂದಂತಾಗಿದೆ.. ಇನ್ನೇನು ಮಗ ಬದುಕುವುದು ಕಷ್ಟ ಅಂತ ಕೊರಗಪ್ಪ ತೀರ್ಮಾನ ಮಾಡಿ ಆಗಿದೆ..ಆಸ್ಪತ್ರೆ ಗೆ ಕರ್ಕೊಂಡು ಹೋಗೋಕೆ ಹಣ ಇಲ್ಲ ಪಾಪ.. ಮನೆಯೊಳಗೆ ಹರಿದ ಚಾಪೇಯಮೇಲೆ ಮಲಗಿದ್ದ ಆ ಪುಟ್ಟ ಹುಡುಗ…!

ಹೀಗಿರುವಾಗ ಇನ್ನೊಂದು ಕಡೆಯಿಂದ ಶಾಲೆಗೆ 20ದಿನಗಳಿಂದ ಹುಡುಗ ಬಾರದನ್ನು ನೋಡಿ ಶ್ರೀರಾಮ ಶಾಲೆಯ ಅಧ್ಯಾಪಕರಿಗೆ ಚಿಂತೆಯಾಗಿದೆ.. ವಿಚಾರಿಸಲು ಹೊರಟಿದ್ದಾರೆ ಫೋನ್ ಮಾಡಿ ವಿಚಾರಿಸಲು ಕೊರಗಪ್ಪ ಅವರಲ್ಲಿ ಫೋನ್ ಇರಲಿಲ್ಲ ಆದ ಕಾರಣ ಸ್ವತಃ ಅಧ್ಯಾಪಕರೆ ಮನೆ ಬೇಟಿಗೆ ಬಂದಿದ್ದಾರೆ… ಬರುವಾಗ ನೆಲದ ಮೇಲೆ ಮಲಗಿರುವ ಹಾವು ಕಚ್ಚಿದ ಹುಡುಗನನ್ನು ನೋಡಿದ್ದಾರೆ ಪಕ್ಕ ಪರಿಚಯ ಸಿಗಲಿಲ್ಲ ಅಧ್ಯಾಪಕರಿಗೆ ಅಷ್ಟು ಸೊರಗಿ ಹೋಗಿದ್ದ ಆತ.. ವಿದ್ಯಾರ್ಥಿಯನ್ನು ನೋಡಿ ಅಧ್ಯಾಪಕರಿಗೂ ದುಃಖ ಎಲ್ಲಿಲ್ಲದ ಬೇಜಾರು ಕಣ್ಣೀರು…ಕಾಲು ಕೊಳೆತು ಹೋಗಿದೆ…ಅವನದ್ದು..

ಕೊರಗಪ್ಪ ಅವ್ರು ತೆಂಗಿನ ಮರ ಹತ್ತಿ ಅದ್ಯಾಪಕರಿಗೆ ಎಳನೀರು ತೆಗೆದು ಕೊಟ್ಟಿದ್ದಾರೆ.. ಅಂತ ಪರಿಸ್ತಿಯಲ್ಲೂ ಮನೆಗೆ ಬಂದವರಿಗೆ ಎಂತಾ ಉಪಚಾರ ನೋಡಿ!! ಕೊರಗಪ್ಪ ಹಣದಲ್ಲಿ ಮಾತ್ರ ಬಡವ. ಹೃದಯವಂತಿಕೆಯಲ್ಲಿ ಶ್ರೀಮಂತ…!

ಅಧ್ಯಾಪಕರಿಗೆ ಎಲ್ಲಾ ಸಮಸ್ಯೆಯನ್ನು ಕೊರಗಪ್ಪ ಸವಿವರಾವಾಗಿ ವಿವರಿಸಿದ್ದಾನೆ…ಅಧ್ಯಾಪಕರು ತಕ್ಷಣ ಕಾಲೇಜ್ ಗೆ ಬಂದು ಡಾ ಪ್ರಭಾಕರ್ ಭಟ್ ಜಿ ಗೆ ವಿಷಯ ತಿಳಿಸಿದ್ದಾರೆ.. ಡಾ.. ಜಿ ಎಲ್ಲಾ ರೀತಿಯ ಸಹಾಯ ಮಾಡಲು ಅಧ್ಯಾಪಕರಿಗೆ ಸೂಚಿಸಿದಿದ್ದಾರೆ..!

ಆ ದಿನವೇ ರಾತ್ರಿ ಅಧ್ಯಾಪಕರು ಆ ಹುಡುಗನನ್ನು ಕಂಕನಾಡಿ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ..ಆದ್ರೆ ಆಸ್ಪತ್ರೆಯಲ್ಲಿ ಹುಡುಗನ ಪರಿಸ್ಥಿತಿ ಹಾಗೂ ತಡವಾಗಿ ಕರ್ಕೊಂಡು ಬಂದದ್ದಕ್ಕಾಗಿ ಅವನನ್ನು ಅಡ್ಮಿಟ್ ಮಾಡಿಕೊಳ್ಳಲು ಅಲ್ಲಿಯವರು ಹಿಂದೇಟು ಹಾಕುತ್ತಾರೆ..ಮತ್ತು ಪೂರ್ತಿಯಾಗಿ ತಿರಸ್ಕರಿಸುತ್ತಾರೆ..ಏನು ಮಾಡುವುದು ಅಂತ ಕೊರಗಪ್ಪರಿಗೂ ಚಿಂತೆ ಕರ್ಕೊಂಡು ಹೋದ ಅಧ್ಯಾಪಕರಿಗೂ ಚಿಂತೆ…!

ಅಷ್ಟೋತ್ತಿಗಾಗ್ಲೇ ಅಲ್ಲಿರುವ ಅಧ್ಯಾಪಕರನ್ನು ಕಂಡು ಒಬ್ಬ ವೈದ್ಯ ಓಡಿ ಬಂದಿದ್ದಾನೆ… ಬಂದು ಅಧ್ಯಾಪಕರಿಗೆ ಜೈ ಶ್ರೀರಾಮ್ ಹೇಳಿದ್ದಾನೆ…ಅವ್ನು ಈ ಅಧ್ಯಾಪಕರ ವಿದ್ಯಾರ್ಥಿ.. ಶ್ರೀರಾಮದ ಹಳೇ ವಿದ್ಯಾರ್ಥಿ.. ಡಾ.ಗಣೇಶ್ ಶೆಟ್ಟಿ ಬೋಂಡಲ..! ಅಧ್ಯಾಪಕರು ಅವರ ಸಮಸ್ಯೆ ಯನ್ನು ಗಣೇಶ್ ಗೆ ಹೇಳಿದ್ದಾರೆ..ತಕ್ಷಣವೇ ಗಣೇಶ್ ಸ್ಪಂದನೆ ಕೊಟ್ಟ..ಅವನ ಒತ್ತಾಯದ ಮೇರೆಗೆ ಹಾವು ಕಚ್ಚಿದ ವಿದ್ಯಾರ್ಥಿಯನ್ನು ಅಲ್ಲಿ ಅಡ್ಮಿಟ್ ಮಾಡಿಕೊಂಡರು..ಅವನಿಗೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು..

ದಿನದಿಂದ ದಿನಕ್ಕೆ ಹುಡುಗ ಚೇತರಿದಿಕೊಂಡ.. ಸ್ವತಃ ಡಾ ಪ್ರಭಾಕರ್ ಭಟ್ ಜಿ ಅಲ್ಲಿಗೆ ಬೀಟಿಕೊಟ್ಟು ಹುಡುಗನ ಆರೋಗ್ಯ ವಿಚಾರಿಸಿದರು..

ಹುಡುಗ ಮಾತಡತೊಡಗಿದ.. ನಡಿಯಾಲಾರಂಭಿಸಿದ…

ಕೊರಗಪ್ಪನ ಮೊಗದಲ್ಲಿ ಮಗನನ್ನು ಕಂಡು ಮಸಂದಹಾಸ…ಖುಷಿಯೋ ಖುಷಿ.

ಆಸ್ಪತ್ರೆಯ 60,000ಸಾವಿರ ಬಿಲ್ಲನ್ನು ಸ್ವತಃ ಶ್ರೀರಾಮ ವಿದ್ಯಾಕೇಂದ್ರದ ಬೊಕ್ಕಸದಿಂದ ನೀಡಲಾಗುವುದು ಎಂದು ಡಾ ಪ್ರಭಾಕರ್ ಭಟ್ ಜಿ ಹೇಳಿದರು..

ಒಟ್ಟಿನಲ್ಲಿ ಮೇಲಿನ ಘಟನೆಯ ಸಂದೇಶ… ಒಬ್ಬ ಅಧ್ಯಾಪಕನಾದವನು ಹೇಗಿರಬೇಕು?

ಒಬ್ಬ ಅತಿಥಿ ಬಂದಾಗ ಕಷ್ಟಕಾಲದಲ್ಲಿದ್ದರೂ ಹೇಗೆ ಉಪಚರಿಸಬೇಕು?

ಒಬ್ಬ ಹಳೆವಿದ್ಯಾರ್ಥಿಯ ಕರ್ತವ್ಯ ಏನು?

ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಂಸ್ಥೆ ಹೇಗೆ ಸ್ಪಂದಿಸಬೇಕು?

ಎಲ್ಲದಕ್ಕೂ ಸರಿಯಾದ ಅರ್ಥಪೂರ್ಣವಾದ ಉತ್ತರ ಇಲ್ಲಿದೇ ಅಲ್ವಾ??ಬಂಧುಗಳೇ..

ಇದೇ ಹಿಂದೂ ಸಮಾಜದ ಶಕ್ತಿಕೇಂದ್ರ…ಕಲ್ಲಡ್ಕ. ಇಲ್ಲಿ ಅಂಧಕಾರವೆಂಬ ಬಡತನವನ್ನು ತೊಡೆದುಹಾಕಿ ಸಮೃದ್ಧಿ ಸಂತೋಷ ಎಂಬ ಬೆಳಕು ಕೊಡೋ ಸೂರ್ಯನೇ ಡಾ.ಪ್ರಭಾಕರ್ ಭಟ್ ಜಿ…!!

ಸರಿ ಅನಿಸಿದ್ರೆ ಶೇರ್ ಮಾಡಿಬಿಡಿ

-ಸಚಿನ್ ಜೈನ್ ಹಳೆಯೂರು.