ಕಲ್ಲಡ್ಕ ಪರಿಸರದಲ್ಲಿ ನಡೆದ ಮನಕರಗುವ ಘಟನೆ..!!!ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆ ಆ ಮಕ್ಕಳನ್ನೇಕೆ ದತ್ತು ಪಡೆದ್ದದ್ದು.. ??? ಸಮಯ ಇದ್ರೆ 2 ನಿಮಿಷ.ಪೂರ್ತಿ ಓದಿಬಿಡಿ ಬಂಧುಗಳೇ…

ಕಲ್ಲಡ್ಕ ಪರಿಸರದಲ್ಲಿ ನಡೆದ ಮನಕರಗುವ ಘಟನೆ..!!!ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆ ಆ ಮಕ್ಕಳನ್ನೇಕೆ ದತ್ತು ಪಡೆದ್ದದ್ದು.. ??? ಸಮಯ ಇದ್ರೆ 2 ನಿಮಿಷ.ಪೂರ್ತಿ ಓದಿಬಿಡಿ ಬಂಧುಗಳೇ…

0

ಅದು ಬಾಳ್ತಿಲ… ಗ್ರಾಮ ಅಲ್ಲೊಂದು ಸಣ್ಣ ಕುಟುಂಬ… 5 ಜನ ಮಕ್ಕಳ ಜತೆ ತಂದೆ ತಾಯಿ ಸುಖವಾಗಿದ್ದ ಸಮಯ..

4 ಜನ ಹೆಣ್ಣು ಮಕ್ಕಳನ್ನು ಹಾಗೂ ಒಂದು ಗಂಡು ಮಗುವಿದ್ದ ಆ ಕುಟುಂಬದಲ್ಲಿ ತಂದೆಯ ಆದಾಯವೇ ಮೂಲಾಧಾರ.. ತಂದೆ ಜೋಗಿ ಸಮುದಾಯಕ್ಕೆ ಸೇರಿದವಾಗಿದ್ದರು.. ವಾದ್ಯಗಳನ್ನು ನುಡಿಸಿ ಮನೆಯ ಮಕ್ಕಳ ಖರ್ಚುವೆಚ್ಚಗಳನ್ನು ಭರಿಸುತ್ತಿದ್ದರು… ತಾಯಿ ಅಲ್ಲೇ ಪಕ್ಕದಲ್ಲಿರುವ ಬ್ರಾಹ್ಮಣರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು…

ಭಾರಿ ಕಷ್ಟದಲ್ಲಿದ್ದ ಕುಟುಂಬ ಅದು.. 4 ಹೆಣ್ಣುಮಕ್ಕಳನ್ನು ಸಾಕುವುದೆಂದರೆ ಸಾಹಸವೇ ಸರಿ…ಆದರೂ ಕೂಡ ಇದ್ದ ಹಣದಲ್ಲಿ ಸಂತೋಷದಿಂದ ಇರುತ್ತಿದ್ದರು.. ಸಾಮಾನ್ಯವಾದ ಗುಡಿಸಲಲ್ಲಿ ಅವರ ವಾಸ…. ಬಡ ಕುಟುಂಬ!

ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು,ಅವರನ್ನು ಚೆನ್ನಾಗಿ ಸಾಕಿ ಕೆಲಸಕ್ಕೆ ಸೇರಿಸಬೇಕು ಎಂಬುದು ಆ ಬಡ ತಂದೆಯ ಆಸೆ.. ಅವರ ಜೀವನವನ್ನೇ ಅಧಿಕೊಸ್ಕರ ಮುಡಿಪಾಗಿಟ್ಟವರು…. ಅವ್ರು..

ಅವ್ರ ಮಕ್ಕಳಲ್ಲಿ ದೊಡ್ಡವಳೇ ಸೌಮ್ಯಾ… ತಂದೆಯ ಆಸೆಗೆ ತಕ್ಕಂತೆ ಚೆನ್ನಾಗಿಯೇ ಓದಿ DEd ಶಿಕ್ಷಣವನ್ನು ಮುಗಿಸಿದಳು.. ಅವ್ರ ಇಡೀ ಕುಟುಂಬ ಸೌಮ್ಯಾಳ ಮುಂದಿನ ಕೆಲ್ಸಕೋಸ್ಕರ ಕಾದು ಕೂತಿತ್ತು…

ಅದಾಗಲೇ ಸಿಹಿ ಸುದ್ದಿಯೊಂದು ಬಂತು.. ಸೌಮ್ಯಳಿಗೆ ಮಣಿಪಾಲದಲ್ಲಿ teacher ಕೆಲಸವೊಂದು ಸಿಕ್ಕಿತು…. ಸೌಮ್ಯಾಳ ಜೀವನದ ಗುರಿ ಕೂಡ teacher ಆಗ್ಬೇಕು ತಾನು ಎಂಬುದು ಆಗಿತ್ತು..

ಆ ಬಡ ಕುಟುಂಬಕ್ಕೆ ನಮ್ಮಳೊಬ್ಬಳು teacher ಆಗುತ್ತಿದ್ದಳಲ್ಲಾ ಎಂಬುದೇ ಭಾರಿ ಖುಷಿ.. ಬಡತನದಿಂದ ಹೊರಗೆ ಬರುವ ಆಶಾಕಿರಣವೊಂದನ್ನು ಅವ್ರು ಕಂಡರು… ಪಾಪದ ತಂದೆಗೆ ತಾಯಿಗೆ ಸಂತೋಷವೋ ಸಂತೋಷ…ಸಂತೋಷದ ಕಣ್ಣೀರು..ಹಬ್ಬ.. ಆದ್ರೆ ಈ ಸಂತೋಷಕ್ಕೆ ಯಾರ ಕಣ್ಣುಬಿತ್ತೋ ಏನೋ!!! ಕನಸೆಲ್ಲ ನುಚ್ಚುನೂರಾಯ್ತ್!!! ಆ ಕುಟುಂಬಕ್ಕೆ ದಾರಿ ತೋರಿಸುವ ದಾರಿದೀಪವೇ ನಂದಿಹೊಯ್ತ್….!

ಅದು 2013 ಫೆಬ್ರವರಿ ತಿಂಗಳು.. ಅನಂತಾಡಿಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಮೆಚ್ಚಿಯ ದಿನ… ಸೌಮ್ಯ ಕೂಡ ಮೆಚ್ಚಿಗೆ ತನ್ನ ಗೆಳತಿಯರೊಂದಿಗೆ ಹೋಗಿದ್ದಾಳೆ… ಕೆಲಸ ಪಡೆದ ಸಂತೋಷ ಆ ಮುಗುಳುನಗೆ ಅವಳ ಮುಖದಲ್ಲಿ ಹಾಗೆಯೇ ಇತ್ತು… ದೇವರನ್ನು ಪ್ರಾರ್ಥಿಸಿ ಸುಮಾರು 11ಗಂಟೆಗೆ ಅಲ್ಲಿಂದ ಹೊರಟ ಸೌಮ್ಯ ಮನೆಗೆ ತಲುಪಲೇ ಇಲ್ಲ!!!!!☹

ಚಿಂತೆಯಿಂದ ತಂದೆ ಹಾಗೂ ಸಹೋದರಿಯರು ಸೌಮ್ಯಳಿಗೆ ಕಾಲ್ ಮಾಡಿದ್ದಾರೆ… ಆದ್ರೆ ಸೌಮ್ಯ ಕಾಲ್ ರಿಸೀವ್ ಮಾಡಲೇ ಇಲ್ಲ… ಭಯಬೀತರಾದ ಅವ್ರು ಸೌಮ್ಯಾಳನ್ನು ಹುಡುಕಿದ್ದಾರೆ ಸಾಕಷ್ಟು ಹುಡುಕಿದ್ದಾರೆ…ಆದ್ರೆ ಸೌಮ್ಯ ಸಿಗಲೇ ಇಲ್ಲ.. ಕೊನೆಯದಾಗಿ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಬೇಕಾಯ್ತ್.!!

ಅದಗಾಲೇ ಸೌಮ್ಯಳ ಗೆಳತಿಯೊಬ್ಬಳಿಗೆ ರಸ್ತೆಯ ಬದಿಯಲ್ಲಿ ಅವಳ ಬಳೆ.. ಪುಡಿಯಾದ ಮೊಬೈಲ್ ಸಿಕ್ಕಿದೆ…. ಊರಿನ ಹಿರಿಯರೊಬ್ಬರಿಗೆ ಕೆರೆಯ ಪಕ್ಕ ಸೌಮ್ಯಳ ಚೂಡಿದಾರ್ ಶಾಲು ಸಿಕ್ಕಿದೆ… ಕೊನೆಗೆ ನೋಡುವಾಗ ಸೌಮ್ಯಳ ಹೆಣ ಆ ಕೆರೆಯಲ್ಲಿದೆ!!!

ವಿಷಯ ತಿಳಿದ ತಂದೆಗೆ ಹೇಳಿಕೊಳ್ಳಲಾಗದ ನೋವು ಕಣ್ಣಿರು…. ಇಡೀ ಕುಟುಂಬದ ಕನಸೇಂಬ ಚಿಗುರಿಗೆ ಬಿಸಿಬಿಸಿ ಕೆಂಡ ಬಿದ್ದಂತಾಗಿದೆ… ನಂಬಲು ಅಸದ್ಯಾವಾದ ಘಟನೆಯೊಂದು ನಡೆದು ಹೋಗಿದೆ.. ತನ್ನ 22 ವರ್ಷದ ಕಂದಮ್ಮನ ಹೆಣ ನೋಡುವಾಗ ಯಾವ ತಂದೆ ತಾಯಿಗೆ ಬೇಜಾರಾಗುದಿಲ್ಲ… ಹೇಳಿ.. ? ಅದು ಕೂಡ ಪ್ರೀತಿಯಿಂದ ತುತ್ತುಕೊಟ್ಟು ಕಷ್ಟಪಟ್ಟು ಸಾಕಿದ ಮಗುವದು.. ಪ್ರಾಣಕ್ಕೆ ಪ್ರಾಣವೇ ಅವಳಾಗಿದ್ದಳು..!!

ಕಣ್ಣೀರಿನಿಂದಲೇ ಅಂತ್ಯಸಂಸ್ಕಾರ ಮಾಡಿ ತಂದೆ ಮನೆಯ ಮೂಲೆಯಲ್ಲಿ ಜೀವನವೇ ಮುಗಿತು ಎಂಬಂತೆ ಕುಳಿತಿರುವಾಗ.. ಮಗಳ ಸಾವಿಗೆ ಕಾರಣ ಏನು ಅಂತ ಅವ್ರಿಗೆ ಯಾರೋ ತಿಳಿಸುತ್ತಾರೆ…! ಲೂಸಿ ಸೀಕ್ವೆರಾ ಎಂಬ ಪೋಲಿಯೋ ಹಾಕುವ ಪ್ರತಿನಿಧಿ ಸೌಮ್ಯ ಸತ್ತ ದಿನ ಆ ಜಾಗದಲ್ಲಿ ಸತೀಶ್ ಎಂಬ ಹುಡುಗ ಸಂಚರಿಸುದನ್ನು ನೋಡಿದ್ದಾರೆ.. ಪೊಲೀಸರು ವಿಚಾರಣೆ ಮುಂದುವರಿಸಿದಾಗ ಆ ಸತೀಶ್.. ಅವಳನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿ…. ಚೂಡಿದಾರ್ ಶಾಲಿನಲ್ಲಿ ಉಸಿರು ಗಟ್ಟಿಸಿ ಕೆರೆಯಲ್ಲಿ ಮುಳುಗಿಸಿ ಕೊಂದು ಬಿಟ್ಟಿದ್ದಾನೆ…ಎನ್ನುವ ವಿಷಯ ತಿಳಿಯುತ್ತದೆ.. ಅವನನ್ನು ಬಂಧಿಸಿ ಅವನಿಗೆ ಶಿಕ್ಷೆಯೂ ಆಗುತ್ತದೆ.

ಆ 7 ಜನರ ಕುಟುಂಬ ಈಗ 6 ಜನರದ್ದಾಗಿದೆ.. ಮನೆಯ ನಂದಾದೀಪ ಅಗಬೇಕಿದ್ದವಳ ಫೋಟೋದ ಎದುರಿಗೆ ದೀಪವಿದೆ… ತಂದೆ ದಿಕ್ಕೆ ತೋಚದಂತಾಗಿದ್ದಾರೆ… ಸಣ್ಣಮಕ್ಕಳಿಗೆ ಅಕ್ಕನನ್ನು ಕಳ್ಕೊಂಡ ಬೇಜಾರು.. ಆರ್ಥಿಕ ಸಮಸ್ಯೆ ಎಲ್ಲವೂ ಅವರನ್ನು ಕಾಡ ತೊಡಗಿತು..

ಈ ಸರಿಯಾದ ಕಾಲಕ್ಕೆ ಹಿಂದೂ ಹೃದಯ ಸಮ್ರಾಟ್ ಕಲ್ಲಡ್ಕ ಪ್ರಭಾಕರ್ ಭಟ್ ಜಿ ಅಲ್ಲಿಗೆ ಹೋಗಿ ಸಾಂತ್ವನ ಹೇಳಿ 25 ಸಾವಿರ ಹಾಗೂ ಮತ್ತೊಮ್ಮೆ 75 ಸಾವಿರ ಒಟ್ಟು 1 ಲಕ್ಷದಷ್ಟುಹಣವನ್ನು ಸಹಾಯವಾಗಿ ನೀಡುತ್ತಾರೆ… ಅಲ್ಲದೆ ಆ ಉಳಿದ 4 ಮಕ್ಕಳನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ದತ್ತು ತೆಗೆದುಕೊಂಡು ಅವರ ಪೂರ್ಣ ವಿದ್ಯಾಭ್ಯಾಸದ ಖರ್ಚುವೆಚ್ಚ ನೋಡಿಕೊಳ್ಳುವುದು ಎಂದು ಅವರು ಹೇಳಿದರು… ಆ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಡಾ.ಜಿ ತನ್ನ ಹೆಗಲ ಮೇಲೆ ಹಾಕಿಕೊಂಡರು….!!!

ಇಂದಿಗೂ ಈ 4 ಮಕ್ಕಳಲ್ಲಿ ಸಣ್ಣ ಹುಡುಗಿ ಆಶಾ ಕಲ್ಲಡ್ಕ ಶ್ರೀರಾಮದ ವಿದ್ಯಾರ್ಥಿನಿ.. ಅವಳಿಗೆ ಎಲ್ಕವೂ ಉಚಿತ…ಶುಲ್ಕ ಬಿಡಿ… ಕಾಲೇಜಿನ ಬಸ್ ಕೂಡ….!!ಮತ್ತೆ ಆ ಬಡ ಮುಖದಲ್ಲಿ ಮುಗುಳುನಗೆ ಮೂಡುವಂತೆ ಮಾಡಿದ ಡಾ.ಜಿ ಯೇ ಶ್ರೇಷ್ಠ ಅಲ್ವಾ?

ಕಲ್ಲಡ್ಕ ಡಾ.ಜಿ ಅಂದ್ರೆ ಹೀಗೇನೆ…!! ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಜೀವ ಅದು….!! ಹಿಂದುಗಳ,ಹಿಂದೂ ಧರ್ಮದ ರಕ್ಷಣೆ ಅವರ ಧ್ಯೇಯ….!

ಕಷ್ಟವೆಂಬ ಉರಿಬಿಸಿಲಿಗೆ ಬಾಡಿ ಹೋದ ಜೀವಗಳಿಗೆ.. ಮರು ಜೀವ ಕೊಡುವ ತಂಪಾದ ಮಳೆಹನಿ ಅವ್ರು….!!!!
ಶ್ರೀರಾಮನ ಆರಾಧಕರು ಅಂದ್ರೆ ಹೀಗೇನೆ…!

ಸರಿ ಅನಿಸಿದ್ರೆ ಶೇರ್ ಮಾಡಿ . ಧನ್ಯವಾದಗಳು..

-ಸಚಿನ್ ಜೈನ್ ಹಳೆಯೂರು…