ಬಿಜೆಪಿ ಕಾರ್ಯಕರ್ತರು ದೈರ್ಯವಂತರಾ? ಅಥವಾ ಪುಕ್ಕುಲರಾ? ಬಿಜೆಪಿ ಕಾರ್ಯಕರ್ತರ ಗುಂಡಿಗೆ ಎಷ್ಟು ಗಟ್ಟಿ ಇದೆ.? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ನೋಡಿ ಸಮರ್ಥ ಉತ್ತರ.!!

ಬಿಜೆಪಿ ಕಾರ್ಯಕರ್ತರು ದೈರ್ಯವಂತರಾ? ಅಥವಾ ಪುಕ್ಕುಲರಾ? ಬಿಜೆಪಿ ಕಾರ್ಯಕರ್ತರ ಗುಂಡಿಗೆ ಎಷ್ಟು ಗಟ್ಟಿ ಇದೆ.? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ನೋಡಿ ಸಮರ್ಥ ಉತ್ತರ.!!

0

ಬಿಜೆಪಿ ಕಾರ್ಯಕರ್ತರು ದೈರ್ಯವಂತರಾ? ಅಥವಾ ಇತರ ರಾಜಕೀಯ ಪಾರ್ಟಿಗಳ ಕಾರ್ಯಕರ್ತರಂತೆ ಪುಕ್ಕುಲರಾ? ಬಿಜೆಪಿ ಕಾರ್ಯಕರ್ತರ ಗುಂಡಿಗೆ ಎಷ್ಟು ಗಟ್ಟಿ ಇದೆ? ತಮ್ಮ ನೆಚ್ಚಿನ ನಾಯಕನ ಭಾಷಣ ಅವರೆಷ್ಟು ಉತ್ಸಹಾದಿಂದ,ಶ್ರದ್ದೆಯಿಂದ ಕೆಳುತ್ತಾರೆ? ಹತ್ತು ಲಕ್ಷಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಸೇರಿರುವ ರ‍್ಯಾಲಿಯ ನಡುವೆ ಬಾಂಬ್ ಸ್ಪೋಟವಾದ್ರೆ ಏನಾಗುತ್ತೆ? ಕಾರ್ಯಕರ್ತರು ಬೆಚ್ಚಿಬಿದ್ದು ಹೆದರಿ ಓಡುತ್ತರಾ? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ನೋಡಿ ಸಮರ್ಥ ಉತ್ತರ!

ಅದು 2013ರ ಸಮಯ. ನರೇಂದ್ರ ಮೋದಿಜಿಯನ್ನು ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಸಮಯ. ರಾಜಕೀಯ ಪಕ್ಷಗಳ ಪ್ರಚಾರ ಬಿರುಸಿನಿಂದ ನಡೆಯುತ್ತಿತ್ತು. ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕ್ಕಕ್ಕೆ ಏರಿತ್ತು. ಮೋದಿಜಿ ಬಿಡುವಿಲ್ಲದೆ ದೇಶದೆಲ್ಲೆಡೆ ದಿನಕ್ಕೆ 4 ಅಥವಾ 5 ರ‍್ಯಾಲಿ ನಡೆಸಿ ಪ್ರಚಾರ ನಡೆಸುತ್ತಿದ್ದರು. ಇಡೀ ಚುನಾವಣೆಯ ಕೇಂದ್ರಬಿಂದುವೆ ಮೋದಿ ಆಗಿದ್ದರು.

ಹೀಗಿರಲು 2013 ಅಕ್ಟೋಬರ್ 27 ತಾರೀಕು. ಬಿಹಾರ ಎಂಬಲ್ಲಿ ಮೋದಿಜಿಯ ರ‍್ಯಾಲಿ ಒಂದನ್ನು ಆಯೋಜಲಿಸಲಾಗಿತ್ತು. ಅದೇ ಸ್ವಾತಂತ್ರ್ಯ ಭಾರತದ ಅತೀ ದೊಡ್ಡ ಜನಸಭೆ “ಹುಂಕಾರ್ -ರ‍್ಯಾಲಿ” ಅದು ಬಿಹಾರದಲ್ಲಿ ಮೋದಿಯ ಮೊದಲ ರ‍್ಯಾಲಿ ಆಗಿತ್ತು. ಬಿಹಾರ ಬಿಜೆಪಿ ಹಾಗೂ ದೇಶದ ದಿಕ್ಕುದೆಸೆಯನ್ನು ಬದಲಿಸುವ ರ‍್ಯಾಲಿ ಅದಾಗಿತ್ತು.ಅಂತಾರಾಷ್ಟ್ರೀಯ,ರಾಷ್ಟ್ರೀಯಹಾಗೂ ಸ್ಥಳೀಯ ಮಾಧ್ಯಮದ ಚಿತ್ತ ಈ ಜನಸಭೆಯತ್ತ ಇತ್ತು.

ಬಿಹಾರದ ವಿವಿಧ ಭಾಗಗಳಿಂದ ರೈಲು,ಬಸ್ಸು,ಕಾರು,ಬೈಕ್,ಎತ್ತಿನಗಾಡಿ,ಕಾಲ್ನಡಿಗೆ ಮೂಲಕ “ಹುಂಕಾರ್ ರ‍್ಯಾಲಿಗೆ” ಜನರ ಸಾಗರವೇ ಹರಿದು ಬಂತು. ತನ್ನ ಇತಿಹಾಸದಲ್ಲೇ ಪೊರ್ತಿ ತುಂಬದ ಪಟ್ನಾದ ಗಾಂಧಿ ಮೈದಾನ ಅಂದು ತುಂಬಿತುಳುಕುತ್ತಿತ್ತು. ಪೂರ್ತಿ ಕೇಸರಿಮಯವಾಗಿತ್ತು. ಎಲ್ಲಿ ಕಂಡರೂ ಬಿಜೆಪಿ ಕಾರ್ಯಕರ್ತರು ತುಂಬಿರುವ ವಿಶಾಲ ಜನಸಾಗರವೇ ಕಾಣುತಿತ್ತು. ಸುಮಾರು 10ರಿಂದ 12ಲಕ್ಷ ಸೇರಿರುವ ಒಂದು ದೊಡ್ಡ ಜನಸಭೆ ಅದಾಗಿತ್ತು. ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೌಂಡ್ ಎಫೆಕ್ಟ್ ಇರುವ LED ಪರದೆಗಳಿಂದ ಕಂಗೊಳಿಸುವ ರ‍್ಯಾಲಿ ಅದಾಗಿತ್ತು. ಆ ದಿನ ಇಡೀ ದೇಶವೇ ಬಿಹಾರದಲ್ಲಿ ನಡೆಯುವ ಮೋದಿಯ “ಹುಂಕಾರ್ ರ‍್ಯಾಲಿ” ಕಡೆ ನೋಡುತ್ತಿತ್ತು. ಕಾರ್ಯಕರ್ತರಿಗೂ ಖುಷಿಯೋ ಖುಷಿ.

ಆದ್ರೆ ಈ ಖುಷಿಯ ನಡುವೆ ಅಲ್ಲಿ ನಡೆಯಬಾರದ ಒಂದು ಘಟನೆ ನಡೆದು ಹೊಯ್ತು. ಸುಮಾರು 11ಗಂಟೆಗೆ ಮೋದಿ ಜನಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಬಿಜೆಪಿ ಕಾರ್ಯಕರ್ತರ ಈ ಬೃಹತ್ ಜನಸಭೆಗೆ ಅದ್ಯಾಕೋ ಭಯೋತ್ಪಾದಕರ ಕಣ್ಣು ಅದಾಗಲೇ ಬಿದ್ದಿತ್ತು.

ಕಾರ್ಯಕರ್ತರು ಗಾಂಧಿ ಮೈದಾನಕ್ಕೆ ಬರುತ್ತಿರುವಾಗಲೇ ಬೆಳಿಗ್ಗೆ ಸುಮಾರು 9.30ಕ್ಕೆ ಪಟ್ನಾ ಜಂಕ್ಷನ್ ರೈಲ್ವೆ ಸ್ಟೇಶನ್ ಟಾಯಿಲೆಟ್ನಲ್ಲಿ ಮೊದಲ ಬಾಂಬ್ ಸ್ಪೋಟ ಆಗಿ ಒಬ್ಬ ಜೀವಕಳೆದುಕೊಂಡರು. ಬಾಂಬ್ ಇದೆ ಎಂದು ಗೊತ್ತಿದ್ದರೂ ಕಾರ್ಯಕರ್ತರ ದಂಡೇ ಮೈದಾನಕ್ಕೆ ಹರಿದುಬಂತು.

ಎರಡುಗಂಟೆಯ ನಂತರ 11.40ಕ್ಕೆ ನರೇಂದ್ರ ಮೋದಿ ವಿಶಾಲ ಜನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಗಾಂಧಿ ಮೈದಾನದ ಪಕ್ಕದ ಉದ್ಯೋಗಭವನದ ಹತ್ತಿರ ಸ್ಪೋಟ ಆಯ್ತು. ಆದರೂ ಕಾರ್ಯಕರ್ತರು ಹೆದರಲಿಲ್ಲ. ಮೋದಿಯ ಭಾಷಣ ಕೇಳುತ್ತಿದ್ದರು. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದರು.

ಮೂರನೆಯದಾಗಿ 12.05ಗಂಟೆಗೆ ರೇಜೆನ್ಟ್ ಸಿನಿಮಾ ಹಾಲ್ನ ಪಕ್ಕ, ನಾಲ್ಕನೆಯದಾಗಿ 12.15ಕ್ಕೆ ಅದೇ ಮೈದಾನದ ಒಳಗೆ ಟ್ವಿನ್ ಟವರ್ ಪಕ್ಕ ದೊಡ್ಡ ಸ್ಪೋಟವಾಯ್ತು. ಬೃಹತ್ ಶಬ್ದವೊಂದು ಕೇಳುಸಿತು. ಕಾಲುವಾಸಿ ಮೈದಾನ ಹೊಗೆಯಿಂದ ತುಂಬಿಹೋಗಿತ್ತು.

ಕಾರ್ಯಕರ್ತರ ಮದ್ಯೆ ಸ್ಪೋಟವಾಗುತ್ತಿದೆ ಎಂದು ಗೊತ್ತಿದ್ದರೂ ಮೋದಿ ಭಾಷಣ ನಿಲ್ಲಿಸಲಿಲ್ಲ. ಅಲ್ಲದೆ ಬಾಂಬ್ ಇದೆ ಎಂದು ಮೈಕ್ ಮೂಲಕ ಹೇಳಲೂ ಇಲ್ಲ. ಯಾವತ್ತಿಗಿಂತಲೂ ಆಕ್ರಮನಕಾರಿಯಾಗಿ ಭಾಷಣ ಆರಂಬಿಸಿದ್ರು. ಅಷ್ಟು ಸ್ಪೋಟವಾಗುತ್ತಿದ್ದರೂ ಕೂಡ ಕಾರ್ಯಕರ್ತರ ಗಮನ ತನ್ನ ನೆಚ್ಚಿನ ನಾಯಕ ಮೋದಿಯ ಮಾತಿನ ಕಡೆಗೆ ಇತ್ತು.

10ನಿಮಿಷ ಕಳೆದು ಮೈದಾನದ ಒಳಗೆ ಸ್ಟೇಟ್ ಬ್ಯಾಂಕ್ ಪಕ್ಕ ಒಮ್ಮೆಲೇ 3 ಬಾಂಬ್ ಸ್ಪೋಟವಾಯ್ತು. ಪರಿಣಾಮವಾಗಿ ಬಿಜೆಪಿಯ 2 ಕಾರ್ಯಕರ್ತರು ಮೋದಿಯ ಭಾಷಣ ಕೇಳುತ್ತಲೇ ಹುತಾತ್ಮರಾದರು. ಕೊನೆಯದಾಗಿ ಮಕ್ಕಳ ಪರ್ಕ್ ಬಳಿ ಸ್ಪೋಟ ಆಯ್ತು ಅದರಲ್ಲಿ ಮತ್ತೆ ಮೂರು ಜನ ಬಿಜೆಪಿ ಕಾರ್ಯಕರ್ತರು ಅಸುಸುನೀಗಿದರು.

ಬಾಂಬ್ ನಿಷ್ಕ್ರಿಯದಳದವರು ಮೈದಾನದ ಒಳಗಿದ್ದ ಸುಮಾರು 17 ಸಜೀವ ಬಾಂಬನ್ನು ನಿಷ್ಕ್ರಿಯಗೊಳಿಸಿದರು. ಇಷ್ಟೆಲ್ಲಾ ಆಗುತ್ತಿದ್ದರೂ ಮೋದಿ ಭಾಷಣ ನಿಲ್ಲಿಸಲಿಲ್ಲ. ಕಾರ್ಯಕರ್ತರು ಕೂತ ಜಾಗದಿಂದ ಎದ್ದೇಳಲಿಲ್ಲ. ನಿಂತ ಜಾಗದಿಂದ ಅಲ್ಲಾಡಲ್ಲಿ. ಮೋದಿಯ ಭಾಷಣ ಶ್ರದ್ಧೆಯಿಂದ ಕೇಳುತ್ತಿದ್ದರು.

ಒಂದುವೇಳೆ ಮೋದಿ ಹೆದರಿ ಭಾಷಣ ನಿಲ್ಲಿಸುತ್ತಿದ್ದರೆ? ಮೈದಾನದ ಒಳಗೆ ಬಾಂಬ್ ಇದೆ ಜೋಪಾನ ಎಂದು ಮೈಕ್ ಮೂಲಕ ಘೋಷಣೆ ಮಾಡುತ್ತಿದ್ದರೆ? 10ಲಕ್ಷಕ್ಕೂ ಮಿಕ್ಕಿ ಇರುವ ಕಾರ್ಯಕರ್ತರು ಕಕ್ಕಾಬಿಕ್ಕಿಯಾಗಿ ಅಡ್ಡಾದಿಡ್ಡಿ ಓಡುತ್ತಿದ್ದರು ಅಲ್ಲವೇ? ಬಾಂಬ್ ಗಿಂತ ಹೆಚ್ಚು ಕಾಲ್ತುಳಿತಕ್ಕೆ ಕಾರ್ಯಕರ್ತರು ಸಾಯಬೇಕಿತ್ತು ಅಲ್ವಾ? ಆದ್ರೆ ಮೋದಿ ಸ್ವತಃ ಯಾವುದೇ ಘೋಷಣೆ ಮಾಡುವುದು ಬೇಡ ಎಂದು ವೇದಿಕೆಯಲ್ಲಿರುವ ಸ್ಥಳೀಯ ನಾಯಕರಿಗೆ ಸೂಚಿಸಿದರಂತೆ. ಮೋದಿಯ ಧೈರ್ಯ ಹಾಗೂ ಸಮಯ ಪ್ರಜ್ಞೆಯಿಂದ ಎಷ್ಟೋ ಕಾರ್ಯಕರ್ತರ ಪ್ರಾಣ ಉಳಿತು. ಬೇರೆ ನಾಯಕರಾಗುತ್ತಿದ್ದರೆ ವೇದಿಕೆಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಿದ್ರೋ ಏನೋ?

ರ‍್ಯಾಲಿ ಮುಗಿದ ಬಳಿಕ ಮೋದಿ ನಿಧಾನವಾಗಿ ಚಲಿಸುವಂತೆ ಕೇಳಿಕೊಂಡರು, ಕಾರ್ಯಕರ್ತರು ಮೋದಿ ಹೇಳಿದಂತೆ ಧೈರ್ಯವಾಗಿ ನಡೆದುಕೊಂಡರು. ಗಾಂಧಿ ಮೈದಾನದಿಂದ ಹೊರಬಂದ ಕಾರ್ಯಕರ್ತರು 2ಜನ ಭಯೋತ್ಪಾದಕರನ್ನು ಹಿಡಿದು ಪೊಲೀಸ್ ಗೆ ಒಪ್ಪಿಸಿದರು. ಘಟನೆಯಲ್ಲಿ ಸುಮಾರು 80ಜನ ಗಾಯಗೊಂಡರು. 5ಜನ ಬಿಜೆಪಿ ಕಾರ್ಯಕರ್ತರು ಸಾವನಪ್ಪಿದರು.

ರ‍್ಯಾಲಿಗೆ ಉಗ್ರರಿಂದ ಕಂಟಕ ಇದೆ ಎಂದು 2ದಿನ ಮೊದಲೇ ಕೇಂದ್ರದ IB ಮತ್ತು NIA ಮುನ್ಸೂಚನೆ ನೀಡಿದ್ದರೂ ಬಿಹಾರ ಪೊಲೀಸರ ಉದಾಸೀನ ಮನೋಭಾವನೆಯಿಂದ ವರ್ತಿಸಿದರು. ಯಾವುದೇ ಅಧಿಕ ಭದ್ರತಾ ಕ್ರಮ ಕೈಗೊಳಲ್ಲಿಲ್ಲ. ಕಾರಣ ಈ ರೀತಿಯ ಘಟನೆ ನಡೆದುಹೊಯ್ತು.

ಘಟನೆಗೆ ಸಂಬಂಧಿಸಿದಂತೆ ಸೀಮಿ ಮತ್ತು ಇಂಡಿಯನ್ ಮುಜಾದ್ದೀನ್ ಸಂಘಟನೆಯ 11 ಭಯೋತ್ಪಾದಕರನ್ನು NIA ಬಂದಿಸಿತ್ತು.

ಇಷ್ಟಾದ್ರೂ ವಿಶೇಷ ಏನಂದ್ರೆ ಅಷ್ಟು ಹೊಗೆ ತುಂಬಿದ್ದರೂ ಅಷ್ಟು ಶಬ್ದ ಕೇಳಿದರೂ ಒಬ್ಬನೇ ಒಬ್ಬ ಕಾರ್ಯಕರ್ತ ಆ ಕಡೆ ಗಮನ ಕೊಡಲಿಲ್ಲ. ಸತ್ತರೂ ಪರವಾಗಿಲ್ಲ ಮೋದಿಯ ಬಾಷಣ ಕೇಳಲೇಬೇಕು ಎನ್ನುವ ಛಲ ಲಕ್ಷ ಲಕ್ಷ ಕಾರ್ಯಕರ್ತರಲ್ಲಿತ್ತು. ಕಾರ್ಯಕರ್ತರಿಗೆ ತಕ್ಕ ನಾಯಕ ಮೋದಿ. ಅವರೂ ಹೆದರದೇ ಜೀವದ ಹಂಗುತೊರೆದು ಕಾರ್ಯಕರ್ತನ್ನು ಉದ್ದೇಶಿಸಿ ಮಾತಾಡಿದರು. ಸಾಯುದಾದ್ರೆ ಕಾರ್ಯಕರ್ತರ ಮದ್ಯೆಯೇ ಸಾಯುತ್ತೇನೆ ಎಂದು ನಿರ್ಧಾರ ಮಾಡಿದ ನಾಯಕ ಮೋದಿ.

ಬಿಜೆಪಿಯ ಕಾರ್ಯಕರ್ತರು ದೈರ್ಯಶಾಲಿಗಳು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಅನ್ನೋ ಕಾರ್ಯಕರ್ತರು ಅವರು. ಬೇರೆ ಪಕ್ಷದಲ್ಲಿ ಈ ರೀತಿ ಇದೆಯಾ? ಈ ರೀತಿಯ ಕಾರ್ಯಕರ್ತರು ಇದ್ದಾರಾ? ಕಾರ್ಯಕರ್ತರಿಗಾಗಿ ನಾಯಕ , ನಾಯಕನಿಗಾಗಿ ಕಾರ್ಯಕರ್ತರು ಪ್ರಾಣ ಕೊಡಲು ತಯಾರಿದ್ದರಾ?

ದೇಹ ಮಣ್ಣಿಗಾದ್ರೆ, ಉಸಿರು ಧರ್ಮಕ್ಕಾಗಿ,ಪಕ್ಷಕ್ಕಾಗಿ,ದೇಶಕ್ಕಾಗಿ ಅನ್ನೋರು ಬಿಜೆಪಿಯ ಕಾರ್ಯಕರ್ತರು. ಅದಿಕ್ಕೆ ಅವರೆಲ್ಲರಿಗೂ ಅಚ್ಚುಮೆಚ್ಚು..

✍ಸಚಿನ್ ಜೈನ್ ಹಳೆಯೂರು