ಭಾರತದ ಈ ಹೆಸರಾಂತ ಕ್ರಿಕೆಟ್ ಆಟಗಾರರು ಮೋದಿಭಕ್ತರಂತೆ…!! ಯಾರೆಲ್ಲ ಗೊತ್ತಾ..??

ಭಾರತದ ಈ ಹೆಸರಾಂತ ಕ್ರಿಕೆಟ್ ಆಟಗಾರರು ಮೋದಿಭಕ್ತರಂತೆ…!! ಯಾರೆಲ್ಲ ಗೊತ್ತಾ..??

0

ಹೌದು ಬಂಧುಗಳೇ, ಟೀಮ್ ಇಂಡಿಯಾದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಸಹ ಆಟಗಾರರು ನರೇಂದ್ರಮೋದಿಯ ಕಾರ್ಯವೈಖರಿ, ನೇರನಡೆ, ವಾಕ್ಚಾತುರ್ಯ, ದೃಢನಿರ್ದಾರ, ದೇಶಪ್ರೇಮ, ಮತ್ತು ಅವರ ಯೋಜನೆಯ ಜನಪ್ರಿಯತೆ ಕಂಡು ಮನಸೋತಿದ್ದಾರೆ…

ಪ್ರಸುತ ಟೀಮ್ ಇಂಡಿಯಾದ ನಾಯಕ ವಿರಾಟ್ ಮೋದಿಯನ್ನು ಹೊರತುಪಡಿಸಿ ಅತ್ಯಂತ ಹೆಚ್ಚು ಟ್ವಿಟ್ಟರ್ ಮತ್ತು ಫೇಸ್ಬುಕ್ ಫಾಲೋವರ್ಸ್ ಇರುವ ವ್ಯಕ್ತಿ. ತನ್ನ ಆಟದಮೂಲಕ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿದವರು. ಈ ವಿರಾಟ್ ಮೋದಿಯ ದೊಡ್ಡ ಅಭಿಮಾನಿ ಅಂದ್ರೆ ನಂಬ್ತ್ತೀರಾ? ಮೋದಿಯ ಅಪನಗದಿಕರಣದ ಬಗ್ಗೆ ಮಾದ್ಯಮವೊಂದರ ಸಂದರ್ಶನದಲ್ಲಿ “ಇತಿಹಾಸದಲ್ಲಿಯೇ ನಾನು ನೋಡಿರದ ಒಂದು ದೃಢನಿರ್ದಾರ ಇದು, ಭಾರತದಿಂದ ಭ್ರಷ್ಟಾಚಾರ ತೊಲಗಿಸಲು ಪ್ರಧಾನಮಂತ್ರಿ ಈ ಮಾರ್ಗ ಸೂಕ್ತವಾಗಿದೆ, ನಾನು ಅವರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು

ಇದಲ್ಲದೆ ಇತ್ತೀಚಿಗೆ ನಾಗ್ಪುರದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯಾಟದ ಅಭ್ಯಾಸದ ವೇಳೆ ವಿರಾಟ್,ರವಿಶಾಸ್ತ್ರಿ “ಸ್ವಚ್ಛಭಾರತದ” ಕುರಿತು ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದರು. ಅದರಲ್ಲಿ ಪ್ರಧಾನ ಮಂತ್ರಿ ಮೋದಿಜಿಯ ಸ್ವಚ್ಛಭಾರತ ಯೋಜನೆಯೊಂದಿಗೆ ಕೈಜೋಡಿಸುವಂತೆ ಜನರಲ್ಲಿ ಮನವಿ ಮಾಡಿದ್ದರು!

ಪ್ರಧಾನಮಂತ್ರಿ ಟ್ವಿಟ್ಟರ್ ಮೂಲಕ ವಿರಾಟ್ ಕೊಯ್ಲಿಯ ಈ ನಡೆಯನ್ನು ಅಭಿನಂದಿಸಿದ್ದರು. ಅದಲ್ಲದೆ ವಿರಾಟ್ ಕೊಯ್ಲಿಯ ಸಹೋದರ ವಿಕಾಸ್ ಕೊಯ್ಲಿ ಕೂಡಾ ಹಲವಾರು ಕಾರ್ಯಕ್ರಮವೊಂದರಲ್ಲಿ ಮೋದಿಯ ಕಾರ್ಯವೈಖರಿಯನ್ನು ಹಾಡಿಕೊಂಡಾಡಿದ್ದಾರೆ.

ತಂಡದ ಇನ್ನೋರ್ವ ಯುವ ಆಟಗಾರ ಇತ್ತೀಚಿಗೆ ಸಿಕ್ಸ್ ಗೆ ಹೆಸರುವಾಸಿಯಾದ ಹಾರ್ದಿಕ್ ಪಾಂಡ್ಯ ಕೂಡ ಮೋದಿಯ ದೊಡ್ಡ ಅಭಿಮಾನಿ. ಮೋದಿಯ ಅಪನಗದಿಕರಣ ಕುರಿತು ಟ್ವಿಟ್ ಮಾಡುತ್ತಾ “ಎಂಥಾ ಒಂದು ಮಾಸ್ಟರ್ ಸ್ಟ್ರೋಕ್ ಮೋದಿ ಜಿ, ಭ್ರಷ್ಟಾಚಾರದ ವಿರುದ್ಧ ಮೋದಿಯೊಂದಿಗೆ ಕೈ ಜೋಡಿಸಿ” ಎಂದು ಜನರಲ್ಲಿ ಮನವಿ ಮಾಡಿದ್ದರು.

ಆರಂಭಿಕ ಆಟಗಾರ ಶಿಖರ್ಧವನ್ ಕೂಡಾ ಮೋದಿಗೆ ಮನಸೋತಿದ್ದಾರೆ. ಹಲವಾರು ವೇದಿಕೆಗಳಲ್ಲಿ ಮೋದಿಯನ್ನು ಹೊಗಳಿದ ಅವರು. ಮೋದಿಯ “ಭೇಟಿ ಬಚಾವೋ ಭೇಟಿ ಪಡವೋ” ಯೋಜನೆಯೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು, ಮೋದಿಯ “ಸೆಲ್ಫಿ ವಿತ್ ಬೇಟಿ” ಕಾರ್ಯಕ್ರಮಕ್ಕೆ ತನ್ನ ಮಗಳು ಹಾಗೂ ತನ್ನ ಫೋಟೋ ಆಪಲೋಡ್ ಮಾಡಿದ್ದಾರೆ. ಅಲ್ಲದೆ ಈ ಯೋಜನೆಯೊಂದಿಗೆ ಕೈ ಜೋಡಿಸುವಂತೆ ಮನವಿಯೂ ಮಾಡಿದ್ದಾರೆ.

ಇನ್ನೋರ್ವ ಆಟಗಾರ. ಮಿಂಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುವ ಆಲ್ರೌಂಡರ್ ರವೀಂದ್ರ ಜಡೇಜಾ! ರವೀಂದ್ರ ಜಡೇಜಾ ದಿನಕ್ಕೊಂದು ಭಾರಿ ಆದ್ರೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಮೋದಿಯನ್ನು ಹೊಗಳಿ ಟ್ವಿಟ್ ಮಾಡಿತ್ತಾರೆ. ಮೋದಿಯ ಪ್ರತಿಯೊಂದು ನಡೆಯನ್ನೂ ಕೂಡ ಜಡೇಜಾ ಸಮರ್ಥಿಸುತ್ತಾರೆ.ಇತ್ತೀಚೆಗೆ ನರೇಂದ್ರ ಮೋದಿ ನೇದರ್ರ್ಲ್ಯಾಂಡ್ ಗೆ ಭೇಟಿಕೊಟ್ಟಗ ಅಲ್ಲಿನ ಪ್ರಧಾನಮಂತ್ರಿ ಮೋದಿಗೆ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.

ನರೇಂದ್ರಮೋದಿ ಈ ಸೈಕಲ್ ಜೊತೆಗಿನ ಫೋಟೋವನ್ನು ಸಾಮಾಜಿಕಜಾಲತಾಣದಲ್ಲಿ ಹಾಕಿ “ಸೈಕಲ್ ಉಪಯೋಗಿಸಿ ಆರೋಗ್ಯ ಮತ್ತು ಪರಿಸರ ಉಳಿಸಿಕೊಳ್ಳಿ” ಎಂದು ಟ್ವಿಟ್ ಮಾಡಿದ್ದರು. ಇದನ್ನು ಅನುಸರಿಸುತ್ತಾ ಜಡೇಜಾ ವೆಸ್ಟಿಂಡಿಸ್ ಪ್ರವಾಸದ ವೇಳೆ ಸೈಕಲ್ನಲ್ಲಿ ಅಭ್ಯಾಸ ಮಾಡಿದ್ದು. ಆ ಫೋಟೋವನ್ನು ಟ್ವಿಟ್ಟರ್ ಲ್ಲಿ ಹಾಕಿ “ನಾನು ಪ್ರಧಾನಮಂತ್ರಿಯಿಂದ ಸ್ಫೂರ್ತಿ ಪಡೆದು ಸೈಕಲ್ ಓಡಿಸುತ್ತಿದ್ದೇನೆ” ಎಂದು ಧನ್ಯವಾದ ಹೇಳುತ್ತಾ ಟ್ವಿಟ್ ಮಾಡಿದ್ದಾರೆ.

ಖ್ಯಾತ ಬ್ಯಾಟ್ಸ್ ಮ್ಯಾನ್ 6 ಬಾಲ್ ಗೆ 6 ಸಿಕ್ಸರ್ ಸಿಡಿಸಿದ ಜನರ ಮನಗೆದ್ದವರು ಯುವರಜ್ ಸಿಂಗ್ . ಆದ್ರೆ ಆ ಯುವರಾಜನ ಮನವನ್ನೇ ಗೆದ್ದವರು ಮೋದಿ. ಇತ್ತೀಚೆಗೆ ಕಳೆದ ತಿಂಗಳು ಪ್ರಧಾನಿ ಮೋದಿ ಯುವರಾಜ್ ಸಿಂಗ್ ಗೆ ಪತ್ರವೋನದನ್ನು ಬರೆದಿದ್ದರು. ಪತ್ರದಲ್ಲಿ ಯುವರಾಜ್ ಮಾಡಿದ “youwe can” ಎಂಬ ಸಂಘಟನೆಯ ಸಾಮಾಜಿಕ ಚಟುವಟಿಕೆಯ ಬಗ್ಗೆ ಮೆಚ್ಚುಗೆಯ ಮಾತು ಇತ್ತು. ಈ ಪತ್ರದ ಪ್ರತಿಯನ್ನು ಯುವರಾಜ್ ಟ್ವಿಟ್ಟರ್ ಲ್ಲಿ ಪೋಸ್ಟ್ ಮಾಡಿ ಮೋದಿಜಿಗೆ ಧನ್ಯವಾದ ಹೇಳುತ್ತಾ “ಇಷ್ಟು ಕಾರ್ಯಪ್ರವೃತ್ತ ಆಗಿರುವ ಪ್ರಧಾನಿಯನ್ನು ಇದೆ ಮೊದಲಬಾರಿಗೆ ನೋಡುತ್ತಿದ್ದೇನೆ,ನಾವು ನಿಮ್ಮೊಂದಿಗಿದ್ದೇವೆ” ಎಂದು ಮೋದಿಯನ್ನು ಪ್ರಶಂಸಿದ್ದಾರೆ.

ಖ್ಯಾತ ಎಡಗೈ ಬೌಲರ್ ಇರ್ಫಾನ್ ಪಠಾಣ್ ಕೂಡಾ ಮೋದಿಯ ಅಭಿಮಾನಿ. ಗುಜರಾತಿನವರೆ ಆಗಿರುವ ಪಠಾಣ್ ಇತ್ತೀಚಿಗೆ ಗುಜರಾತಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪರವಾಗಿ ಪ್ರಚಾರಕ್ಕೆ ಧುಮಿಕಿದ್ದಾರೆ. ಅಲ್ಲದೆ ಪ್ರಧಾನಮಂತ್ರಿಯನ್ನು ಹಾಡಿ ಹೋಗಳುತ್ತಿದ್ದಾರೆ.

ಎಲ್ಲಕ್ಕೂ ಮಿಕ್ಕಿ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಲಿಟ್ಟಲ್ಮಾಸ್ಟರ್ ಸಚಿನ್ ಕೂಡ ಮೋದಿಯ ದೊಡ್ಡ ಅಭಿಮಾನಿ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೋದಿಯ ವಿರುದ್ಧ ವಾರಣಾಸಿಯಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಸಚಿನ್ ಅವರನ್ನು ಕಣಕ್ಕಿಳಿಯುವಂತೆ ಕೇಳಿಕೊಂಡಾಗ ಸಚಿನ್ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅಲ್ಲದೆ ಮೋದಿಯ ಸ್ವಚ್ಛಭಾರತ, ಭೇಟಿಬಚಾವೋ ಭೇಟಿ ಪಡವೋ, ಅಪನಗದಿಕರಣ, ಜಿಎಸ್ ಟಿ,ಸರ್ಜಿಕಲ್ ಸ್ಟೈಕ್ ಮುಂತಾದ ಪ್ರಮುಖ ಯೋಜನೆಗಳನ್ನು ಸಚಿನ್ ಸಮರ್ಥಿಸಿದ್ದಾರೆ. ಅಲ್ಲದೆ ಈಗಾಗಲೇ 4 ಭಾರಿ ಪ್ರಧಾನ ಮಂತ್ರಿಯನ್ನು ಭೇಟಿಯಾಗಿದ್ದಾರೆ.

ಸುರೇಶ್ ರೈನಾ ಕೂಡ ಮೋದಿಯ ಸ್ವಚ್ಛಭಾರತ,ಭೇಟಿಬಚಾವೋ ಭೇಟಿ ಪಡಾವೋ, ರನ್ ಫೋರ್ ಯುನಿಟಿ ಮುಂತಾದ ಕಾರ್ಯಕ್ರಮದಲ್ಲಿ ತನ್ನನ್ನು ಜೋಡಿಸಿಕೊಂಡಿದ್ದಾರೆ. ಅಲ್ಲದೆ ನರೇಂದ್ರಮೋಡಿಜಿಯನ್ನು “ಚಿನ್ನದ ಮನಸಿರುವ ವ್ಯಕ್ತಿ” ಎಂದು ಹೊಗಳಿದ್ದಾರೆ.

ಇನ್ನು ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಬಿಜೆಪಿಯ ಪ್ರತಿನಿಧಿಗಳು ಮಾತಾಡುದಕ್ಕಿಂತ ಹೆಚ್ಚು ಬಿಜೆಪಿಯ ಬಗ್ಗೆ ಗಂಭೀರ್, ಸೆಹವಾಗ್ ಮಾತಾಡುತ್ತಾರೆ.

 

ಈ ಎಲ್ಲವನ್ನೂ ಗಮನಿಸಿದಾಗ ಸ್ವಾತಂತ್ರ್ಯ ಭಾರತ ಕಂಡ ಅದ್ಭುತ ನಾಯಕ ಮೋದಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರನ್ನು ಅನುಸರಿಸದವರುಂಟೆ? ಅದು ಕ್ರೀಡೆ ಆಗಿರಲಿ ಸಿನಿಮಾಜಗತ್ತು ಆಗಿರಲಿ ಹೆಚ್ಚಿನವರು ಮೋದಿಯ ಸಮರ್ಥಕರು. ಮೋದಿ ತನ್ನ ಕಠಿಣ ಪರಿಶ್ರಮದ ಮೂಲಕ ಭಾರತೀಯರ ಯಾಕೆ ಇಡೀ ವಿಶ್ವದ ಮನಗೆದ್ದವರು. ಈ ಹಿಂದಿನ ಪಧಾನಮಂತ್ರಿಳು ಇಷ್ಟು ಪ್ರೀತಿ ಸಂಪಾದಿಸಿದ್ದಾರೆ ಎಂದು ಒಮ್ಮೆ ಯೋಚನೆ ಮಾಡಿ!?

ಭಾರತ ಭಾಗ್ಯವಿಧಾತ ನರೇಂದ್ರ ಮೋದಿಜಿ ಇನ್ನೂ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಲಿ ಎನ್ನುವುದೇ ನಮ್ಮ ಆಶಯ.

✍ ಸಚಿನ್ ಜೈನ್ ಹಳೆಯೂರ್