ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹುಡುಗಿಯನ್ನು ಇಂಪ್ರೆಸ್ ಮಾಡ್ಬೇಕಾ ಹಾಗಾದ್ರೆ ಹೀಗೆ ನಡ್ಕೋಳ್ಳಿ..!!(ಸೈಕಾಲಜಿ ಪ್ರಕಾರ)

21

ಪ್ರಪಂಚದಲ್ಲಿ ಯಾರನ್ನ ಬೇಕಾದ್ರೂ ಮೆಚ್ಚಿಸಬಹುದು ಆದ್ರೆ ಈ ಹುಡ್ಗೀರನ್ನ ಮಾತ್ರ ಮೆಚ್ಚಿಸೋದು ಸಿಕ್ಕಾಪಟ್ಟೆ ಕಷ್ಟ. ಇವ್ರ್ ಮನಸು ಇವಾಗಿದ್ದಂಗ್ ಎರ್ಡ್ ನಿಮಿಷ ಆದ್ಮೇಲ್ ಇರಲ್ಲ, ಹೇಗಪ್ಪಾ ಅರ್ಥ ಮಾಡ್ಕೊಳೋದು. ಹೀರೋ ಥರ ಇದ್ರೆ ಹುಡ್ಗೀರು ಇಷ್ಟ ಪಡ್ತಾರೆ, ಹಾಗ್ ಮಾಡುದ್ರೆ ಇಷ್ಟ ಪಡ್ತಾರೆ ಅದು-ಇದು ಅಂತ ಏನೇನೋ ಇದೆ, ಆದ್ರೆ ಇವತ್ತು ನಾವು ಸೈಕಾಲಜಿ ಪ್ರಕಾರ ಹುಡುಗರು ಹೇಗಿದ್ರೆ ಹುಡ್ಗೀರಿಗೆ ಇಷ್ಟ ಅಂತ ಹೇಳ್ತೀವಿ, ಓದಿ ತಿಳ್ಕೊಳಿ ಬೇಕಾಗತ್ತೆ.

1. ನಿಮ್ಮ ಅನುಭವ ಹಂಚ್ಕೊಂಡ್ರೆ ಹುಡ್ಗೀರಿಗೆ ಇಷ್ಟ ಆಗುತ್ತೆ

ಮೊದಲನೇ ಸಲ ಭೇಟಿ ಆದಾಗ ನಿಮ್ಮ ಅನುಭವಾನ ಹಂಚಿಕೊಳ್ಳಿ, ನೀವ್ ಎಷ್ಟ್ ಚೆನ್ನಾಗಿ ಹೇಳ್ಬೇಕು ಅಂದ್ರೆ ಅವ್ರಿಗೆ ಅದೇ ಫೀಲ್ ಆಗ್ಬೇಕು. ನೀವು ಎಲ್ಲೋ ಸಿಕ್ಕಾಪಟ್ಟೆ ತರಲೆ ಮಾಡಿದ್ದು, ನೀವು ಟ್ರಿಪ್ಪಿಗೆ ಹೋಗಿದ್ದು, ಸಿನೆಮಾ ನೋಡಿದ್ದು ಹೀಗೆ. ನೀವ್ ಹೇಳ್ದಾಗ ಅವಳು ಆ ಅನುಭವದ ಆಲೋಚನೇಲಿ ಮುಳುಗಿಹೋಗೋದು ಅವಳಿಗೆ ಇಷ್ಟ

2. ಯಾವಾಗ್ಲೂ ಅವಳ ಹಿಂದೆನೇ ಇರಬೇಡಿ, ಇದು ಇಷ್ಟ ಆಗಲ್ಲ

ನೀವು ಯಾವಾಗ್ಲೂ ಹಿಂದೆ ಮುಂದೆ ಸುತ್ತಬಾರದು. ನಾಲ್ಕಾರು ಜನ ಇರೋಕಡೆ ಅಂತೂ ಮಾಡ್ಲೆಬಾರ್ದ. ಅವ್ಳು ನಿಮ್ಮನ್ನ ಕರೆದ ತಕ್ಷಣ ಹೋಗಬೇಡಿ, ಏನೋ ಬ್ಯುಸಿ ಇರೋತರ ನಾಟ್ಕ ಮಾಡುದ್ರು ಪರ್ವಾಗಿಲ್ಲ, ಆದ್ರೆ ಹೋಗೋದನ್ನ ಮರೀಬೇಡಿ. ನೀವು ಬ್ಯುಸಿ ಇದ್ರೀ, ಆದರು ಅವಳು ಕರೆದಾಗ ಹೋದ್ರಿ, ಆದ್ರಿಂದ ನಿಮಗೆ ಅವಳು ತುಂಬಾ ಇಷ್ಟ ಅಂತ ಅವಳಿಗೆ ಅನ್ನಿಸಿ, ನಿಮ್ಮನ್ನ ಜಾಸ್ತಿ ಇಷ್ಟ ಪಡ್ತಾಳೆ.

3. ನಿಮ್ಮ ಪ್ರತಿಭೆ, ನಿಮ್ಮ ಕೆಲೆ ಅವಳಿಗೆ ತೋರಿಸಿದರೆ ಇಷ್ಟ ಪಡ್ತಾಳೆ

ಹಾಗಂತ ನಾ ಹಾಡೇಳ್ತೀನಿ ಕೇಳು, ನಾ ಡಾನ್ಸ್ ಮಾಡ್ತೀನಿ ನೋಡು ಅಂತ ಅನ್ನದಲ್ಲ. ಸಮಯ ಸಂದರ್ಭ ಸರಿಯಾಗಿ ಸಿಕ್ದಾಗ ಉಪಯೋಗಿಸಿಕೊಳ್ಳಬೇಕು. ನಿಮ್ಮ ಕೆಲೇನ ಅವಳಮೇಲೆ ಹೇರಬೇಡಿ, ಆದ್ರೆ ನಿಮಗೆ ಇಂತ ಕಲೆ ಇದೆ ಅಂತ ಅವಳಿಗೆ ಗೊತ್ತಾಗ್ಬೇಕು ಅಷ್ಟೇ.

4. ಹೇಳಿದ್ದಕ್ಕೆಲ್ಲ ಹೂಂ ಅನ್ನಬೇಡಿ, ಸವಾಲ್ ಹಾಕಿ… ಅವಳಿಗೆ ಇಷ್ಟ ಆಗತ್ತೆ

ನೀ ಹೇಳಿದ್ದೆ ಸರಿ ಅಂತ ಅನ್ನೋರು ಯಾವಾಗ್ಲೂ ಸ್ನೇಹಿತರು. ಅಷ್ಟೇನೂ ಮುಖ್ಯವಲ್ಲ ಅನ್ನೋ ಅಂತ ಮಾತುಗಳಿಗೆ ಸ್ವಲ್ಪ ಇಲ್ಲ ಅಂತ ಅನ್ನಿ ನೀವು, ಕೆಲವು ಸವಾಲ್ ಹಾಕಿ. ಸವಾಲನ್ನ ಎಲ್ಲ ಹುಡ್ಗೀರು ಇಷ್ಟ ಪಡ್ತಾರೆ ಅಷ್ಟೇ ಅಲ್ಲ ಸವಾಲಿಗೆ ಉತ್ತರ ಕೊಡ್ಬೇಕಲ್ವಾ ಆದ್ರಿಂದ ನಿಮ್ಮ ಬಗ್ಗೆ ಯೋಚನೆ ಜಾಸ್ತಿ ಮಾಡ್ತಾಳೆ, ಹಾಗೆ ಇಷ್ಟ ಆಗೋಗ್ತೀರ.

5. ಅವಳನ್ನ ಅರ್ಥ ಮಾಡ್ಕೊಳಿ, ಸಹಾಯ ಮಾಡಿ… ಪಕ್ಕಾ ಇಷ್ಟ ಆಗ್ತೀರ

ಸಹಾಯ ಅಂದ್ರೆ ತರಕಾರಿ ತರದು, ಕೆಲಸ ಮಾಡ್ಕೊಡೋದು ಅಂತಲ್ಲ, ಮಾನಸಿಕವಾಗಿ ಸಹಾಯ ಮಾಡಿ. ಅವಳನ್ನ ಅರ್ಥ ಮಾಡ್ಕೊಳಿ, ಯಾವದಕ್ಕೆ ಖುಷಿ ಪಡ್ತಾಳೆ, ಯಾವದಕ್ಕೆ ಬೇಜಾರಾಗ್ತಾಳೆ, ಯಾವದಕ್ಕೆ ಹೆದ್ರುಕೋತಾಳೆ ಇದೆಲ್ಲ ತಿಳ್ಕೊಳಿ. ಇದನೆಲ್ಲ ಅವಳ ಹತ್ತಿರ ಹೇಳಿ, ಖಂಡಿತ ಅವಳ ಮನಸಲ್ಲಿ ನಿಮಗೆ ಜಾಗ ಇರತ್ತೆ.

6. ನಿಮ್ಮ ಗುರಿ ಸಾಧಿಸಕ್ಕೆ ಅವಳ ಸಹಾಯ ಬೇಕು ಅಂತ ಅವಳಿಗೆ ಹೇಳಿ

ಯಾವತ್ತೂ ಅವಳನ್ನ ಅಡಚಣೆ ಅಂತ ಹೇಳ್ಬೇಡಿ, ನಿನ್ನಿಂದ ನನ್ನ ಗುರಿ ಸಾದಿಸಕ್ಕೆ ಆಗ್ತಿಲ್ಲ ಅನ್ನಬೇಡಿ. ನನ್ನ ಗುರಿ ಸಾಧಿಸಲು ನಿನ್ನ ಸಹಾಯಬೇಕು, ನನಗೆ ಜೊತೆಯಾಗಿ ಇರು ಅಂತ ಹೇಳಿ. ಅವಳಿಗೆ ಖುಷಿಯಾಗತ್ತೆ, ಅಷ್ಟೇ ಅಲ್ಲ ನಿಮ್ಮ ಗುರಿ ಮುಟ್ಟಕ್ಕೆ ಖಂಡಿತ ಸಹಾಯ ಮಾಡ್ತಾಳೆ.

7. ಎಲ್ಲ ಬೊಂಬ್ಡಿ ಹೊಡಿಬೇಡಿ, ಕೆಲವೊಂದು ವಿಷಯ ಗುಟ್ಟಾಗಿಡಿ… ಅವ್ಳಿಗೆ ಇಷ್ಟ ಆಗತ್ತೆ

ನಿಮ್ಮ ಪ್ರತಿಯೊಂದು ವಿಷಯಾನು ಅವಳ ಹತ್ತಿರ ಹೇಳ್ಬೇಡಿ, ಕೆಲವೊಂದನ್ನ ಗುಟ್ಟಾಗಿ ಇಡಿ ಅದನ್ನ ಅವಳೇ ಕಂಡುಹಿಡಿದಾಗ ಅವಳಿಗೆ ಖುಷಿ ಸಿಗತ್ತೆ. ಅತೀ ಮುಖ್ಯವಾದ ವಿಚಾರ ಗುಟ್ಟು ಮಾಡಬೇಡಿ ರಾದ್ಧಾಂತ ಆಗತ್ತೆ!

8. ಜಾಸ್ತಿ ಖಾರದ್ ತಿಂಡಿ ಸಿಗೋ ಕಡೆ ತಿನ್ನಕ್ಕೆ ಕರ್ಕೊಂಡ್ ಹೋಗಿ

ಹೌದು ಖಾರ ಜಾಸ್ತಿ ಆದಾಗ ಎದೆಬಡಿತ ಜಾಸ್ತಿ ಆಗತ್ತೆ, ಅಷ್ಟೇ ಅಲ್ಲ ನಿಮ್ಮ ಬಾಗೆ ಆಸಕ್ತಿ, ಕುತೂಹಲ ಜಾಸ್ತಿ ಆಗತ್ತೆ. ಹೆಂಗೆ ಅಂತ ಕೇಳ್ಬೇಡಿ ಅದಕ್ಕೆ ಸೈಕಾಲಜಿ ಅನ್ನೋದು. ಖಾರ ಮನಸಲ್ಲಿ ಭಯ, ಉದ್ವೇಗ ಹಾಗೆ ಸುಮಾರು ಭಾವನೇನ ಜಾಸ್ತಿ ಮಾಡತ್ತೆ

9. ಸ್ವಲ್ಪ ನಾಚ್ಕೊಳಿ, ಸ್ವಲ್ಪ ರೊಮ್ಯಾಂಟಿಕ್ ಆಗಿರಿ… ಅವಳಿಗೆ ಇಷ್ಟ ಆಗತ್ತೆ

ನಾಚ್ಕೊಳೋದು ಅಂದ್ರೆ ಹೆಂಗಸರು ಆಡೋಥರ ಆಡಿ ಅಂತಲ್ಲ, ಕೆಲವೊಮ್ಮೆ ಯಾವಾಗ ಆ ಥರ ಸಮಯ ಬರತ್ತೋ ಆಗ. ಅವಳ ಬಗ್ಗೆ ಕುತೂಹಲ ತೋರಿಸಿ. ಸ್ವಲ್ಪ ರೊಮ್ಯಾಂಟಿಕ್ ಆಗಿರಿ, ಹೌದು ಸ್ವಲ್ಪ ಅವಳಿಗೆ ಹತ್ರ ಆಗಿ. ತೀರಾ ಅತೀ ಬೇಡ. ನಿಮ್ಮ ನಾಡಿ ಅವಳಿಗೆ ಮಿಡಿಯುತ್ತೆ ಅಂತ ಅವಳಿಗೆ ಗೊತ್ತಾಗಲಿ.

10. ನಾನು ತುಂಬ ಬುದ್ಧಿವಂತ ಅಂತ ಕೊಚ್ಕೋಬೇಡಿ… ನಿಮಗೆ ಏನಾದರೂ ಹೇಳಿಕೊಡಬೇಕು ಅನ್ನೋ ಆಸೆ ಇರುತ್ತೆ ಅವಳಿಗೆ

ಹೌದು, ನಿಮ್ಮಿಬ್ಬರಲ್ಲಿ ಅವಳಿಗೆ ಬುದ್ದಿ ಜಾಸ್ತಿ ಅನ್ನೋಥರ ಇದ್ದುಬಿಡಿ. ಕೆಲವೊಂದನ್ನ ಅವಳು ನಿಮಗೆ ಹೇಳಿಕೊಡೋದು ಅವಳಿಗೆ ತುಂಬಾ ಖುಷಿ ಕೊಡತ್ತೆ.

ಮೂಲ: ಅಂತೆಕಂತೆ
http://antekante.com/3070?utm_source=fb&utm_medium=social&utm_content=1&utm_campaign=pgak