ಮುಂದುವರಿದಿದೆ ಮೋದಿ ಹವಾ ಚುನಾವಣೆ ನಡದ್ರೆ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ..!!

2019ರ ಲೋಕಸಭೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಜನವರಿ 18, 2018 ಸಂಜೆ ಶುಭ ಸುದ್ದಿ ಸಿಕ್ಕಿದೆ. ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಹಾಗೂ ಸಿ ವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಎನ್ ಡಿಎ ಮುನ್ನಡೆ ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಮತ್ತೆ ಮೋದಿ ಅಲೆ ಏಳುವುದು ಖಚಿತವಾಗಿದೆ.

543 ಲೋಕಸಭೆ ಸ್ಥಾನಗಳ ಪೈಕಿ ಎನ್ ಡಿಎ ಹಾಗೂ ಯುಪಿಎ ಎಷ್ಟು ಸ್ಥಾನ ಗಳಿಸಬಹುದು ಎಂದು ನಡೆಸಲಾದ ಸಮೀಕ್ಷೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಯುಪಿಎ ಗಿಂತ ಮೋದಿ ನೇತೃತ್ವದ ಎನ್ ಡಿಎ ನಡುವಿನ ಅಂತರ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆ ಈಗಲೂ ದೇಶದಲ್ಲಿ ಮುಂದುವರಿದಿದ್ದು, ಒಂದು ವೇಳೆ ಈಗ ಚುನಾವಣೆ ನಡೆದರೆ ಎನ್‍ಡಿಎ ಮೈತ್ರಿಕೂಟ 335 ಸ್ಥಾನಗಳನ್ನು ಗೆಲ್ಲಲಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

ಒಟ್ಟು 543 ಕ್ಷೇತ್ರಗಳಲ್ಲಿ ಎನ್‍ಡಿಎ ಮೈತ್ರಿಕೂಟ 335 ಸ್ಥಾನಗಳನ್ನು ಗೆದ್ದರೆ ಯುಪಿಎ 89 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್ ಸಿ ವೋಟರ್ ಸಮೀಕ್ಷೆ ತಿಳಿಸಿದೆ.

ಕರ್ನಾಟಕದಲ್ಲಿ ಏನು?

ಕರ್ನಾಟಕದಲ್ಲಿ 22(+5) ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದರೆ ಕಾಂಗ್ರೆಸ್ 5(-4) ಇತರೇ 1(-1) ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ತಿಳಿಸಿದೆ.

ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಈ ಮೈತ್ರಿಕೂಟ 17 ಸ್ಥಾನಗಳನ್ನು ಪಡೆದರೆ ಬಿಜೆಪಿ 11 ಸ್ಥಾನಗಳನ್ನು ಪಡೆಯಲಿದೆ ಸಮೀಕ್ಷೆ ಹೇಳಿದೆ.

ಬಿಜೆಪಿ 45.2%, ಕಾಂಗ್ರೆಸ್ 36.5%, ಜೆಡಿಎಸ್ 15.6% ಮತಗಳನ್ನು ಪಡೆಯಲಿದೆ.

2014 ರಲ್ಲಿ ಬಿಜೆಪಿ 43.1%, ಕಾಂಗ್ರೆಸ್ 40.9%, ಜೆಡಿಎಸ್ 15.6% ಮತಗಳನ್ನು ಪಡೆದಿತ್ತು. ಕರ್ನಾಟಕದ ಸಮೀಕ್ಷೆ ಹೊರಬೀಳುವ ಹೊತ್ತಿಗೆ ಎನ್ ಡಿಎ 144 ಹಾಗೂ ಯುಪಿಎ 32ನಂತೆ ಇತ್ತು.

ರಿಪಬ್ಲಿಕ್ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಎನ್ ಡಿಎ 22 ಹಾಗೂ ಯುಪಿಎ 5 ಸ್ಥಾನಗಳು ಹಾಗೂ ಇತರೆ 1 ಬರಲಿದೆ.

ಕರ್ನಾಟಕದಲ್ಲಿ 2014ರ ಲೋಕಸಭೆ ಚುನಾವಣಾ ಫಲಿತಾಂಶ: ಎನ್ ಡಿಎ 17, ಯುಪಿಎ 9 ಹಾಗೂ ಇತರೆ 2 ಬಂದಿತ್ತು. ಜನವರಿ 2018ರ ಸಮೀಕ್ಷೆಯಂತೆ ಕಮಲ ಪಾಳಯಕ್ಕೆ 5 ಹೆಚ್ಚುವತಿ ಸ್ಥಾನ ಸಿಗಲಿದ್ದು, ಯುಪಿಎ 4 ಸ್ಥಾನ ಕಳೆದುಕೊಳ್ಳಲಿದೆ. ಇತರೆ ಪಕ್ಷಗಳು 1 ಸ್ಥಾನ ಕಳೆದುಕೊಳ್ಳಲಿವೆ.

Post Author: Ravi Yadav