ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್..!!ಈ ಪುಟ್ಟ ಬಾಲಕನ ಕಥೆ ಓದಿ ಶೇರ್ ಮಾಡಿ .

ಅಪ್ಪನ ಸಾವು, ಅಮ್ಮನಿಗೆ ಮರುಮದುವೆ, ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾನೆ 7ರ ಪೋರ.

ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

ವರದಿಗಳ ಪ್ರಕಾರ ಬಾಲಕನ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಯಿ ಪುಟ್ಟ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿ ಬೇರೊಂದು ಮದುವೆಯಾಗಿದ್ದಾಳೆ. ನಂತರ ಬಾಲಕ ತನ್ನ ತಂದೆಯ ಮಾಜಿ ಸಹೋದ್ಯೋಗಿಯ ಬಳಿ ಬೆಳೆದಿದ್ದಾನೆ. ಅವರನ್ನ ಈತ ಅಂಕಲ್ ಅಂತಾ ಕರೀತಾನೆ.

ಮೊದಮೊದಲು ತನ್ನ ಅಂಕಲ್‍ಗೆ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡಲು ಸಹಾಯ ಮಾಡುತ್ತಿದ್ದ. ಆದ್ರೆ ನಂತರ ತನ್ನ ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು, ತಾನಾಗೇ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡುತ್ತಾನೆ. ಒಂದು ದಿನಕ್ಕೆ 30 ಪ್ಯಾಕೇಜ್‍ಗಳನ್ನ ತಲುಪಿಸುತ್ತಾನೆ. ಹಾಗೇ ಈತ ಈ ಪ್ರದೇಶದಲ್ಲಿ ಸಖತ್ ಫೇಮಸ್ ಆಗಿದ್ದು, ಜನ ಈ ಬಾಲಕನನ್ನ ಮಿನಿ ಸೆಲೆಬ್ರಿಟಿ ಅಂತ ಕರೀತಾರೆ.

ಈ ಕೆಲಸ ಮಾಡೋದ್ರಲ್ಲಿ ನನಗೆ ಎಷ್ಟು ಸಂತೋಷವಿದೆ ಎಂದ್ರೆ ಮುಂದೆ ದೊಡ್ಡವನಾದ ಮೇಲೂ ಡೆಲಿವರಿ ಬಾಯ್ ಆಗಬೇಕು ಎಂದು ಬಾಲಕ ಹೇಳಿದ್ದಾನೆ.

ವಾಂಗ್ ಕಿಂಗ್ವೀ ಎಂಬವರು ಬಾಲಕನ ಫೋಟೋ ಹಂಚಿಕೊಂಡ ನಂತರ ಚಾಂಗ್ ನ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಬಾಲಕ ಸ್ವಲ್ಪ ಕಷ್ಟ ಪಡುತ್ತಾ ನನಗೆ ಪ್ಯಾಕೇಜ್ ಡೆಲಿವರಿ ಮಾಡೋದನ್ನ ಕಂಡು ಆಶ್ಚರ್ಯವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.

ಚಳಿಯಿಂದ ಬಾಲಕನ ಕೈ ಕೆಂಪಾಗಿತ್ತು. ಹೀಗಾಗಿ ಮನೆಯಲ್ಲಿ ಕೆಲ ಕಾಲ ವಿಶ್ರಮಿಸಲು ಹೇಳಿದೆ ಎಂದು ವಾಂಗ್ ಕಿಂಗ್ವೀ ಹೇಳಿದ್ದಾರೆ. ಬಾಲಕನಿಗೆ ಒಂದು ಚೆಸ್ ಸೆಟ್ ಉಡುಗೊರೆಯಾಗಿ ನೀಡಿದ್ದಾರೆ.

ಬಾಲಕನ ಬಗ್ಗೆ ಸುದ್ದಿ ವರದಿಯಾದ ಬಳಿಕ ಸ್ಥಳೀಯ ಅಧಿಕಾರಿಗಳು ಆತನನ್ನು ವೆಲ್‍ಫೇರ್ ಅಸೋಸಿಯೇಷನ್‍ಗೆ ಕಳಿಸಿದ್ದು, ಬಾಲಕ ಅಲ್ಲಿ ತನ್ನ 7ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾನೆ. ಬಾಲಕನ ತಾಯಿಗಾಗಿ ಕೂಡ ಹುಡುಕಾಟ ನಡೆಸಲಾಗ್ತಿದೆ. ಅಲ್ಲಿಯವರೆಗೆ ಚಾಂಗ್ ವೆಲ್‍ಫೇರ್ ಅಸೋಸಿಯೇಷನ್‍ನಲ್ಲಿ ಇರಲಿದ್ದು, ಆತನ ವಿದ್ಯಾಭ್ಯಾಸವನ್ನ ಅವರೇ ನೋಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

 

ಈ ಪುಟ್ಟ ಬಾಲಕನ ಕಥೆ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಶೇರ್ ಮಾಡಿ.

Post Author: Ravi Yadav