ಹಿಮಾಚಲದ ಹಿಮದ ನಡುವೆ ಭೂಗರ್ಭದಿಂದ ಅಕ್ಕಿ ಹಾಕಿದಾಗ ಅನ್ನವಾಗುವಷ್ಟು ಬಿಸಿಯಿರುವ ನೀರು ಉಕ್ಕಿಬರುತ್ತದೆ! ಯಾವುದು ಆ ಪುಣ್ಯ ಸ್ಥಳ?

ಹಿಮಾಚಲದ ಹಿಮದ ನಡುವೆ ಭೂಗರ್ಭದಿಂದ ಅಕ್ಕಿ ಹಾಕಿದಾಗ ಅನ್ನವಾಗುವಷ್ಟು ಬಿಸಿಯಿರುವ ನೀರು ಉಕ್ಕಿಬರುತ್ತದೆ! ಯಾವುದು ಆ ಪುಣ್ಯ ಸ್ಥಳ?

0

ಹಿಮಾಲಯದ ಹಿಮಬಂಡೆಗಳ ನಡುವೆ ಸೂರ್ಯನ ಬಿಸಿಲಿಗೆ ಹಿಮಕರಗಿ ನೀರು ಬರುದೇನೋ ನಿಜ. ಆದರೆ ಕೈಯಲ್ಲಿ ಸ್ಪರ್ಶ ಮಾಡದಷ್ಟು ಬಿಸಿನೀರು ಬರುತ್ತದೆ ಅಂದಾಗ ನಂಬಲು ಕಷ್ಟವಾಗುತ್ತಿದೆಯಲ್ವಾ? ಹೌದು ಬಂಧುಗಳೇ ನಂಬಲು ಅಸಾದ್ಯವಾದ ಅವಿಸ್ಮರಣೀಯ ಹಾಗೂ ವಿಸ್ಮಯ ಆ ಸ್ಥಳಗಳಲ್ಲಿದೆ. ಬಿಸಿನೀರು ರಾತ್ರಿ ಹಗಲೆನ್ನದೆ ವರ್ಷದ 365 ದಿನವೂ ಉಕ್ಕಿಬರುತ್ತದೆ. ಅದುಕೂಡ ಸುಮಾರು ಐದಕ್ಕೂ ಹೆಚ್ಚು ಜಾಗದಲ್ಲಿ ಅನ್ನುವುದು ವಿಶೇಷ.Himalaya Rice
ಉತ್ತರ ಭಾರತದ ಹಿಮಾಲಯದ ತಪ್ಪಲಿನ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಈ ಪುಣ್ಯ ಬಿಸಿನೀರಿನ ಕುಂಡಗಳಿವೆ. ಒಟ್ಟು ಐದು ಪವಿತ್ರ ಬಿಸಿನೀರಿನ ಕುಂಡಗಲಿದ್ದು ಆ ಸ್ಥಳಗಳಿಗೆ ಸಂಬಂದಿಸಿದಂತೆ ಅದರದ್ದೇ ಆದ ಇತಿಹಾಸಗಳಿವೆ ಹಾಗೂ ಪ್ರತಿಯೊಂದು ಕುಂಡವೂ ದೇವಸ್ಥಾನದ ಕೆರೆಗಳಾಗಿದೆ. ಅದರಲ್ಲಿ ಪ್ರಮುಖವಾದದ್ದು ವಶಿಷ್ಟಕುಂಡ. ಕುಲು ಜಿಲ್ಲೆಯಲ್ಲಿ ಬಿಯಾಸ್ ನದಿಯ ತಟದಲ್ಲಿದೆ. ಪ್ರಸಿದ್ಧ ಮನಾಲಿ ನಗರದಿಂದ ಸರಿಸುಮಾರು ಆರು ಕಿಲೋಮೀಟರ್ ದೂರದಲ್ಲಿದೆ.

ಗ್ರಾಮವೊಂದರ ಕೇಂದ್ರಭಾಗದಲ್ಲಿರುವ ಈ ನೀರಿನಕುಂಡದಲ್ಲಿ ಸ್ನಾನಮಾಡಲು ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಮೈ ಕೊರೆಯುವ ಚಳಿಯಲ್ಲಿ ಬಿಸಿನೀರಿನ ಕೆರೆ ಸಿಕ್ಕರೆ ಯಾರಿಗೆಬೇಡ ಹೇಳಿ? ಈ ಬಿಸಿನೀರಿನ ಕೆರೆಯಲ್ಲಿ ಮಿಂದೆದ್ದರೆ ಸಕಲ ಚರ್ಮರೋಗಗಳು ನಿವಾರಣೆಯಾಗುತ್ತದೆ ಎಂಬ ಪ್ರತೀತಿಯೂ ಇದೆ. ಇಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಸ್ನಾನದ ವ್ಯವಸ್ಥೆ ಇದೆ. ಚಳಿಗಾಲದಲ್ಲಿ ನೀರು ಸುಮಾರು 110ಡಿಗ್ರೀಯಿಂದ 120 ಡಿಗ್ರಿಯವರೆಗೆ ಬಿಸಿ ಇರುತ್ತದೆ.

ಇನ್ನೊಂದು ಪ್ರಸಿದ್ಧ ಬಿಸಿನೀರಿನಕುಂಡ ಮನಿಕರಣ. ಕುಲು ನಗರದಿಂದ ಸರಿಸುಮಾರು 45ಕಿ.ಮೀ. ದೂರದಲ್ಲಿದೆ. ಪಾರ್ವತಿ ಹಿಮಶಿಖರಗಳ ತಪ್ಪಲಲ್ಲಿರುವ ಈ ಜಾಗ ಪ್ರಭಾತಿ ನದಿಯ ತಟದಲ್ಲಿದೆ. ಇಲ್ಲೂ ಶುದ್ಧವಾದ ಬಿಸಿನೀರು ಭೂಮಿಯೊಳಗಿನಿಂದ ಉಕ್ಕಿಬರುತ್ತದೆ. ಆದರೆ ಇಲ್ಲಿ ತಾಪಮಾನ ಅಕ್ಕಿ ಹಾಕಿದಾಗ ಅನ್ನ ಆಗುವಷ್ಟು ಬಿಸಿಇರುತ್ತದೆ.

ಇನ್ನೊಂದು ಬಿಸಿನೀರಿನ ಕುಂಡ ಮಂಡಿ ಜಿಲ್ಲೆಯಲ್ಲಿರುವ ತಟ್ಟಪಾನಿ. ತಟ್ಟಪಾನಿ ಅಂದರೆ ಬಿಸಿನೀರು ಎಂದರ್ಥ. ಇದು ಭಾರತದ ಸ್ವಿಝೆರ್ಲ್ಯಾಂಡ್ ಎಂದು ಕರೆಯಲ್ಪಡುವ ಶಿಮ್ಲಾ ನಗರದಿಂದ ಸರಿಸುಮಾರು 51ಕೀ.ಮೀ ದೂರದಲ್ಲಿದೆ. ಸಟ್ಲೆಜ್ ನದಿತಟದಲ್ಲಿರುವ ತಟ್ಟಪಾನಿಯಲ್ಲಿ ಎರಡು ಅವಳಿ ಬಿಸಿನೀರಿನ ಕುಂಡಗಳಿವೆ. ಇದು ಇತರ ಕೆರೆಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಅತೀ ಸಣ್ಣದು.

Himalaya Rice

ಮತ್ತೊಂದು ಪ್ರಮುಖ ಕುಂಡ ಖೀರ್ ಗಂಗಾ. ಕುಲು ನಗರದಿಂದ ಸುಮಾರು 26ಕೀ.ಮೀ ದೂರದಲ್ಲಿರುವ ಈ ಬಿಸಿನೀರಿನ ಕುಂಡ ಹಿಂದೂ ಇತಿಹಾಸದ ಪ್ರಕಾರ ಅತಿ ಮಹತ್ವ ಪಡೆದಿದೆ. ಶಿವನ ಮಗನಾದ ಕಾರ್ಥಿಕನ ಸಮಾಧಿ ಈ ಜಾಗದಲ್ಲಿದೆ ಎಂಬ ಸಾವಿರಾರು ವರ್ಷದ ಹಳೆಯದಾದ ನಂಬಿಕೆ ಇದೆ. ಇದರ ಬಿಸಿನೀರು ಹಾಲಿನಂತೆ ಬೆಳ್ಳಗೆ ಇರುವುದರಿಂದ ಅದನ್ನು ಖೀರ್ ಗಂಗಾ ಎನ್ನಲಾಗುತ್ತದೆ. ಹಿಂದಿಯಲ್ಲಿ ಖೀರ್ ಅಂದರೆ ಹಾಲು ಎಂದರ್ಥ. ಇನ್ನೊಂದು ಬಿಸಿನೀರಿನ ಕುಂಡ ಕಸೊಲ್. ಕುಲು ಜಿಲ್ಲೆಯಲ್ಲಿರುವ ಇದು ಅತ್ಯಂತ ಕಡಿಮೆ ತಾಪಮಾನವಿರುವ ಬಿಸಿನೀರಿನ ಕುಂಡವಾಗಿದೆ.

ಪ್ರಕೃತಿಯ ಈ ವಿಸ್ಮಯ ನಂಬಲು ಅಸಾದ್ಯವಾದರೂ ನಿಜವಾದ ಅಚ್ಚರಿಯ ವಿಷಯ. ಕೊರೆಯುವ ಚಳಿಯಮದ್ಯೆ ಭೂಮಿಯ ಗರ್ಭದಿಂದ ಬಿಸಿನೀರು ಉಕ್ಕಿಬರುತ್ತದೆ. ಲಕ್ಷಾಂತರ ಬಕ್ತರು ಈ ಹಿಂದೂ ಪವಿತ್ರ ಸ್ಥಳಗಳ ದರ್ಶನ ಮಾಡುತ್ತಾರೆ. ಇಂತಹ ಅಚ್ಚರಿಯನೊಳಗೊಂಡ ನಮ್ಮ ತಾಯಿನಾಡು ಶ್ರೇಷ್ಠ ಅಲ್ವಾ? ಈ ನೀರು ಚರ್ಮರೋಗಗಳಿಗೆ ದಿವ್ಯ ಔಷದವೂ ಹೌದು.

ವರ್ಷದ ಎಲ್ಲಾ ಸಮಯದಲ್ಲಿ ಈ ನೀರಿನ ಕುಂಡದಲ್ಲಿ ಬಿಸಿನೀರು ಉಕ್ಕಿಬರುವುದರಿಂದ ನೀವು ಯಾವ ಸಮದಲ್ಲಿ ಹೋದರೂ ಅದನ್ನು ನೋಡಬಹುದು, ಅನುಭವಿಸಬಹುದು. ಅವಕಾಶ ಸಿಕ್ಕರೆ ಜೀವನದಲ್ಲಿ ಒಮ್ಮೆ ಇಲ್ಲಿಗೆ ಭೇಟಿಕೊಡಿ ಎನ್ನುತ್ತಾ….

ಸಚಿನ್ ಜೈನ್ ಹಳೆಯೂರ್