ಅದು ದೇಶಭಕ್ತರನ್ನು ಗಲ್ಲಿಗೇರಿಸಿದ ಬೆಟ್ಟದ ದೇವಸ್ಥಾನ! ಪ್ರಸ್ತುತ ರಾಷ್ಟ್ರಧ್ವಜವನ್ನು ಹಾರಿಸುವ ದೇಶದ ಏಕೈಕ ದೇವಸ್ಥಾನ!!

ಭಾರತವನ್ನು ದೇವಸ್ಥಾನಗಳ ದೇಶ ಎಂದು ಕರೆಯುತ್ತಾರೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಐತಿಹಾಸಿಕ ಮಹತ್ವವಿದೆ. ಅದರಲ್ಲಿ ಒಂದು ವಿಶೇಷವಾದ ದೇವಸ್ಥಾನ ಈ ಬೆಟ್ಟದ ದೇವಾಲಯ ಅಥವಾ “ಪಹಾಡಿ ಮಂದಿರ್”.

ಸಮುದ್ರ ಮಟ್ಟಕ್ಕಿಂತ ಸುಮಾರು 2140ಅಡಿ ಎತ್ತರದಲ್ಲಿ ಮತ್ತು 500ಕ್ಕೂ ಹೆಚ್ಚು ಮೆಟ್ಟಲುಗಳಿರುವ 350ಅಡಿ ಎತ್ತರದ ಬೆಟ್ಟವೊಂದರ ಮೇಲೆ ನಿಂತಿದೆ. ಜಾರ್ಖಾಂಡ್ ರಾಜ್ಯದ ರಾಂಚಿ ರೈಲ್ವೆನಿಲ್ದಾಣದಿಂದ ಬರೋಬ್ಬರಿ ಏಳು ಕಿಲೋಮೀಟರ್ ದೂರವಿರುವ ಈ ದೇವಾಲಯ ಶಿವಲಿಂಗವನ್ನು ಒಳಗೊಂಡಿದೆ. ದಿನನಿತ್ಯ ಇಲ್ಲಿ ಪೂಜೆ ನಡೆಯುತ್ತದೆ.

Image

ಈ ದೇವಸ್ಥಾನದ ವಿಶೇಷವೆಂದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜನವರಿ 26ರಂದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು. ರಾಷ್ಟ್ರಧ್ವಜವನ್ನು ಹಾರಿಸುವ ದೇಶದ ಏಕೈಕ ದೇವಾಲಯವಿದು. ಈ ಪರಂಪರೆ 1947ರಿಂದ ಪ್ರಾರಂಭವಾಯಿತು.
image


ಬ್ರಿಟಿಷರ ಕಾಲದಲ್ಲಿ ಈ ದೇವಸ್ಥಾನ ಮರಣದಂಡನೆಗೆ ಒಳಗಾದ ದೇಶಭಕ್ತರನ್ನು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವ ಜಾಗವಾಗಿ ಪರಿವರ್ತನೆಯಾಯಿತು. 1947ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿಯಾಗಿ ಸ್ವತಂತ್ರವಾದ ನಂತರ ಇಲ್ಲಿ ಕೃಷ್ಣ ಚಂದ್ರ ದಾಸ್ ಎಂಬ ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತಿಯ ಪ್ರತೀಕವಾಗಿ ಮೊದಲಬಾರಿಗೆ ರಾಷ್ಟ್ರ ಧ್ವಜವನ್ನು ಹಾರಿಸಿದರು. ತದನಂತರ ಧ್ವಜಹಾರಿಸುವ ಈ ಪರಂಪರೆ ಶುರುವಾಯಿತು. ದೇವಸ್ಥಾನದಲ್ಲಿ ಗಲ್ಲಿಗೇರಿ ಹುತಾತ್ಮರಾದ ಕ್ರಾಂತಿಕಾರಿಗಳಿಗೆ ಗೌರವದ ನಮನವಾಗಿ ಈ ಧ್ವಜವನ್ನು ಹಾರಿಸಲಾಗುತ್ತದೆ.

image

ಅಲ್ಲಿರುವ ಒಂದು ಶಿಲಾಶಾಸನದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಹಾಗೂ 1947ರ ಸ್ವಾತಂತ್ರ್ಯ ಘೋಷಣೆಯ ಅಂಕಿತವೂ ಇದೆ. ಮನೋಹರ್ ಪರಿಕ್ಕರ್ ರಕ್ಷಾಮಂತ್ರಿಯಾಗಿದ್ದಾಗ ಇಲ್ಲಿಗೆ ಬೀಟಿಕೊಟ್ಟು ಪ್ರಪಂಚದಲ್ಲೇ ಅತ್ಯಂತ ಎತ್ತರದಲ್ಲಿ ಅಂದರೆ ಸರಿಸುಮಾರು 498 ಅಡಿ ಎತ್ತರದ ರಾಷ್ಟ್ರ ಧ್ವಜಹಾರಿಸಿ ಹೊಸ ದಾಖಲೆ ಬರೆದಿದ್ದರು.

ಈ ಶಿವದೇವಾಲಯ ತುಂಬಾ ವಿಶೇಷವಾದುದ್ದೇ. ಅನೇಕ ಕ್ರಾಂತಿಕಾರಿಗಳು ಕೋನೆಯುಸಿರುಬಿಟ್ಟ ಈ ದೇವಾಲಯವೇ ಧನ್ಯ!! ಈ ಪರಂಪರೆ ಎಲ್ಲಾ ದೇವಸ್ಥಾನದಲ್ಲೂ ಪ್ರಾರಂಭವಾಗಲಿ ಎಂಬುದೇ ನನ್ನ ಆಶಯ.

ಸಚಿನ್ ಜೈನ್ ಹಳೆಯೂರ್

ನಿಮಗೆ ಈ ಅಂಕಣ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ….

Post Author: Ravi Yadav