ಈ ವ್ಯಕ್ತಿಯನ್ನು ಭೇಟಿ ಮಾಡಲು ಮೋದಿ ಕೂಡ ಹೋಗುತ್ತಾರಂತೆ !!ಏಕೆ ಗೊತ್ತಾ??
ಈ ವ್ಯಕ್ತಿಯನ್ನು ಭೇಟಿ ಮಾಡಲು ಮೋದಿ ಕೂಡ ಹೋಗುತ್ತಾರಂತೆ !!ಏಕೆ ಗೊತ್ತಾ??
ಹೌದು. ತಮ್ಮ ಸಾಮಾಜಿಕ ಕಳಕಳಿಯಿಂದ ಮಹಾರಾಷ್ಟ್ರದಲ್ಲಿ ತುಂಬಾ ಚಿರಪರಿಚಿತರಾಗಿ ಗುರುತಿಸಿಕೊಂಡಿರುವ ಈ ವ್ಯಕ್ತಿ ಸಾಂಬಾಜಿ ಬಿಡೆ. 85 ವರ್ಷದ ಸಾಂಬಾಜಿ ಕೊಲ್ಲಾಪುರದಲ್ಲಿ “ಶಿವ ಪ್ರತಿಷ್ಠಾನ” ಎಂಬ ಸಂಘಟನೆಯನ್ನು ಹುಟ್ಟುಹಾಕಿ ಲಕ್ಷಾಂತರ ಯುವಕರನ್ನು ಸ್ವಯಂಸೇವಕರಾಗಿಸಿದ್ದಾರೆ. ಅವರ ಸರಳ ನಡುವಳಿಕೆ ಹಾಗು ಸರಳ ವ್ಯಕ್ತಿತ್ವದಿಂದ ಇಂದು ಮನೆ ಮನೆಯಲ್ಲಿ ಮಾತಾಗಿದ್ದಾರೆ.
ಛತ್ರಪತಿ ಶಿವಾಜಿರವರ ಹಿಂಬಾಲಕರಾಗಿರುವ ಇವರು ಅವರಂತೆಯೇ ಅವರ ಹಿಂಬಾಲಕರಿಗೆ ಮಾರ್ಗದರ್ಶನ ಮಾಡುತ್ತ ತಮ್ಮ ಸಾಮಾಜಿಕ ಕಾರ್ಯಗಳನ್ನು ಮಾಡುತಿದ್ದಾರೆ. ಇವರನ್ನು ನೋಡಲು ಹಾಗು ಕೆಲ ಪ್ರಸ್ತುತ ವಿಷಯಗಳ ಬಗ್ಗೆ ಚರ್ಚಿಸಲು ಖುದ್ದು ಪ್ರಧಾನಿ ಮೋದಿಯವರು ಬರುವರೆಂದರೆ ಇವರ ಛಾಪು ಹೇಗಿರುವುದೆಂದು ನೀವೇ ಯೋಚಿಸಬೇಕು.
ಕೇವಲ ಪ್ರಧಾನಿ ಮೋದಿಯವರು ಮಾತ್ರವಲ್ಲದೆ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಒಂದು ದಿನ ತಾವು ಹೋಗುತಿದ್ದ ದಾರಿಯಲ್ಲಿ ತಮ್ಮ ಹೆಲಿಕಾಪ್ಟರ್ ನಿಲ್ಲಿಸಿ ಸಾಂಬಾಜಿರವರ ಬಳಿ ಬಂದು ಪ್ರಸ್ತುತ ರಾಜಕೀಯದ ಬಗ್ಗೆ ಚರ್ಚಿಸಿ ಹೋಗಿದ್ದರು. ಜೊತೆಗೆ ಮಹಾರಾಷ್ಟ್ರ ಹಾಗು ರಾಷ್ಟ್ರದ ಘಟಾನುಘಟಿಗಳು ಇವರ ಬಳಿ ಬಂದು ತಾವು ಶುರು ಮಾಡುವ ಯೋಜನೆಗಳಿಗೆ ಸಲಹೆ ಕೋರುತ್ತಾರೆ.
“ಗುರೂಜಿ” ಎಂದೇ ತಮ್ಮ ಹಿಂಬಾಲಕರಿಂದ ಕರೆಸಿಕೊಳ್ಳುವ ಇವರು ತಮ್ಮ ಶ್ರಮ, ಹಾಗು ಸ್ವಾರ್ಥವಿಲ್ಲದ ಜೀವನದಿಂದ ಸಮಾಜಕ್ಕೆ ತಮ್ಮ ಕೈಯಲ್ಲಿ ಏನೆಲ್ಲಾ ಮಾಡಲಾಗುವುದೋ ಅದನ್ನೆಲ್ಲವನ್ನು ಮಾಡುತ್ತಾ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ತುಂಬಾ ಸಾಮಾನ್ಯರಂತೆ ಬದುಕುತ್ತಿರುವ ಇವರು ತಮ್ಮಿಂದ ಜನರಿಗೆ ಎಷ್ಟು ಸಹಾಯವಾಗಬಹುದೋ ಅದೆಲ್ಲವನ್ನು ಮಾಡುತಿದ್ದಾರೆ.
ಕಟ್ಟಾ ಹಿಂದುತ್ವವಾದಿಯಾಗಿರುವ ಇವರು ಕೆಲವು ವಿವಾದಾತ್ಮಕ ಚಳುವಳಿಗಳಲ್ಲಿಯೂ ಭಾಗವಹಿಸಿದ್ದರು. ಹಿಂದಿಯ “ಜೋದಾ ಅಕ್ಬರ್” ಚಲನಚಿತ್ರದಲ್ಲಿ ಇತಿಹಾಸವನ್ನು ತಪ್ಪು ತೋರಿಸಲಾಗಿದೆ ಎಂಬ ಕಾರಣಕ್ಕೆ ಹತ್ತಿರದ ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ತಡೆಹಿಡಿದಿದ್ದ ಕಾರಣ ಇವರು ಹಾಗು ಇವರ ಹಿಂಬಾಲಕರನ್ನು ಬಂಧಿಸಲಾಗಿತ್ತು. ಸಾಂಬಾಜಿರವರ ಶಿಕ್ಷಣ: ಗುರು ಸಾಂಬಾಜಿ ಬಿಡೆ ರವರು ಪುಣೆ ವಿಶ್ವವಿದ್ಯಾಲಯದಿಂದ ಎಂಎಸ್ಸಿ (ಅಣು ವಿಜ್ಞಾನದಲ್ಲಿ) ಪದವಿ ಪಡೆದವರಾಗಿದ್ದಾರೆ. ಹಾಗು ಸಾಂಬಾಜಿ ಬಿಡೆ ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ ಮುಗಿಸಿದ ಕಾರಣ ಅವರಿಗೆ ಚಿನ್ನದ ಪದಕದಿಂದ ಗೌರವಿಸಲಾಯಿತು.
ಏನೆಲ್ಲಾ ಮಾಡಬಹುದಾದ ಇವರು ಐಷಾರಾಮಿ ಜೀವನವನ್ನು ಬಿಟ್ಟು, ಬರಿಗಾಲಿನಿಂದ ನಡೆಯುತ್ತಾರೆ. ಇನ್ನೂ ತನ್ನ ಸ್ವಂತಕ್ಕಾಗಿ ಮನೆಯನ್ನು ಕಟ್ಟಿಲ್ಲ ಈ ಮಹಾತ್ಮ. ಅವರ ಯಾವ ಅನುಯಾಯಿಗಳಿಂದಲೂ ಒಂದು ಪೈಸೆ ಕೂಡ ನಿರೀಕ್ಷಿಸದೇ ರಾಜಕೀಯ ಪಕ್ಷಗಳಿಂದ ಆಸೆ-ಆಮಿಷಗಳನ್ನೆಲ್ಲಾ ತಿರಸ್ಕರಿಸಿ ಸಂತನಂತೆ ಬದುಕುತ್ತಿದ್ದಾರೆ.. –
– ಅಕ್ಷತಾ