Job News: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ತಿಂಗಳಿಗೆ 57 ಸಾವಿರ ಸಂಬಳ: ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ? ಇಂದೇ ಮಾಡಿ, ಕೆಲಸ ಗಳಿಸಿ.

Job News: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ತಿಂಗಳಿಗೆ 57 ಸಾವಿರ ಸಂಬಳ: ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ? ಇಂದೇ ಮಾಡಿ, ಕೆಲಸ ಗಳಿಸಿ.

Job News: ಸರ್ಕಾರಿ ಕೆಲಸ ಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ, ಅದರಲ್ಲೂ ಸೆಂಟ್ರಲ್ ಗವರ್ನ್ಮೆಂಟ್ ಕೆಲಸ ಸಿಗುತ್ತೆ ಅಂದ್ರೆ ಪ್ರಯತ್ನ ಪಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗೆ ಆಸಕ್ತಿ ಇರುವವರಿಗೆ ಇಂದು ನಾವು ಒಂದು ಸಿಹಿ ಸುದ್ದಿ ತಂದಿದ್ದೇವೆ. ಅದೇನು ಎಂದರೆ, ಬೆಂಗಳೂರು ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದ್ದು, ಆಸಕ್ತಿ ಇರುವವರು ಕೆಲಸಕ್ಕೆ ಅಪ್ಲೈ ಮಾಡಬಹುದು. 61 ಇನ್ಕಮ್ ಟ್ಯಾಕ್ಸ್ ಇನ್ಸ್ಪೆಕ್ಟರ್, ಟ್ಯಾಕ್ಸ್ ಅಸಿಸ್ಟಂಟ್ ಕೆಲಸ ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ 2023ರ ಮಾರ್ಚ್ 23 ಕೊನೆಯ ದಿನಾಂಕ ಆಗಿದೆ. ಈ ಕೆಲಸಕ್ಕೆ ಪೋಸ್ಟ್ ಮೂಲಕ ಅರ್ಜಿ ಹಾಕಬಹುದು.

ಈ ಹುದ್ದೆಯ ಪೂರ್ತಿ ಮಾಹಿತಿ ನೋಡುವುದಾದರೆ, ಖಾಲಿ ಇರುವ ಹುದ್ದೆ ಆದಾಯ ತೆರಿಗೆ ಇನ್ಸ್ಪೆಕ್ಟರ್ ಮತ್ತು ಟ್ಯಾಕ್ಸ್ ಅಸಿಸ್ಟಂಟ್, ಖಾಲಿ ಇರುವ ಒಟ್ಟು ಹುದ್ದೆಗಳು 61, ಇದಕ್ಕೆ ಬೇಕಿರುವ ವಿದ್ಯಾರ್ಹತೆ, 10ನೇ ತರಗತಿ ಓದಿರಬೇಕು, ಪದವಿ ಆಗಿರಬೇಕು. ತಿಂಗಳ ಸಂಬಳ ₹44,900 ರಿಂದ ₹1,42,400 ರೂಪಾಯಿ, ಕೆಲಸ ಖಾಲಿ ಇರುವ ಸ್ಥಳ ಬೆಂಗಳೂರು. ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ ಮಾರ್ಚ್ 23. ಇಲ್ಲಿ ಆದಾಯ ತೆರಿಗೆ ಇನ್ಸ್ಪೆಕ್ಟರ್ ಹುದ್ದೆ ಒಟ್ಟು10 ಹುದ್ದೆ ಖಾಲಿ ಇದೆ, 32 ಟ್ಯಾಕ್ಸ್ ಅಸಿಸ್ಟಂಟ್ ಹುದ್ದೆಗಳು ಖಾಲಿ ಇದೆ. 19 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆ ಖಾಲಿ ಇದೆ. ಅಪ್ಲಿಕೇಶನ್ ಹಾಕುವ ದಿನ ಶುರು ಆಗಿರುವುದು ಫೆಬ್ರವರಿ 6 ರಿಂದ ಮುಗಿಯುವುದು ಮಾರ್ಚ್ 24ರಂದು. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳವಿಲ್ಲದೆ, ಈ ಬಿಸಿನೆಸ್ ಆರಂಭಿಸಿದರೆ, ತಿಂಗಳಿಗೆ ಕನಿಷ್ಠ 1 ಲಕ್ಷ ಆದಾಯ ಫಿಕ್ಸ್: ಹೇಗೆ ಆರಂಭಿಸಬೇಕು ಗೊತ್ತೇ?

ಈ ಕೆಲಸಗಳಿಗೆ ವಿದ್ಯಾರ್ಹತೆ, ಆದಾಯ ತೆರಿಗೆ ಇನ್ಸ್ಪೆಕ್ಟರ್ ಕೆಲಸಕ್ಕೆ ಪದವಿ ಮುಗಿದಿರಬೇಕು, ಟ್ಯಾಕ್ಸ್ ಅಸಿಸ್ಟಂಟ್ ಕೆಲಸಕ್ಕೆ ಪದವಿ ಮುಗಿದಿರಬೇಕು, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಕೆಲಸಕ್ಕೆ10ನೇ ತರಗತಿ ಮುಗಿದಿರಬೇಕು. ಸಂಬಳ ಎಷ್ಟು ಎಂದು ಹೇಳುವುದಾದರೆ, ಆದಾಯ ತೆರಿಗೆ ಇನ್ಸ್ಪೆಕ್ಟರ್ ಹುದ್ದೆಗೆ, ₹44,900 ರಿಂದ ₹1,42,400. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ₹18,00 ರಿಂದ ₹56,900.. ಟ್ಯಾಕ್ಸ್ ಅಸಿಸ್ಟಂಟ್ ಹುದ್ದೆಗೆ ₹25,000 ರಿಂದ ₹81,000 ವರೆಗೆ. ವಯಸ್ಸಿನ ಮಿತಿ, ಇನ್ಕಮ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಕೆಲಸಕ್ಕೆ 30 ವರ್ಷ, ಟ್ಯಾಕ್ಸ್ ಅಸಿಸ್ಟಂಟ್ ಗೆ 18 ರಿಂದ 27 ವರ್ಷ, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18 ರಿಂದ 25 ವರ್ಷ. ಸ್ಪೋರ್ಟ್ಸ್ ಅಭ್ಯರ್ಥಿಗಳಿಗೆ 5 ವರ್ಷ ಸದಿಳಿಕೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಇನ್ನೆಲ್ಲಾ ಅಭ್ಯರ್ಥಿಗಳು 100 ರೂಪಾಯಿಯನ್ನು ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮಾಡಬೇಕು. ಈ ಹುದ್ದೆಗೆ ಆಯ್ಕೆ ಆಗುವುದು ಲಿಖಿತ ಪರಿಕಜ್ಹೆ ಮತ್ತು ಇಂಟರ್ವ್ಯೂ ಮೂಲಕ. ನಿಮ್ಮ ಅರ್ಜಿಯನ್ನು, ಈ ಕೆಳಕಂಡ ವಿಳಾಸಕ್ಕೆ ಕಳಿಸಿ..
ಆದಾಯ ತೆರಿಗೆ ಆಯುಕ್ತರು (ನಿರ್ವಾಹಕರು ಮತ್ತು TPS)
O/o ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು
ಕರ್ನಾಟಕ ಮತ್ತು ಗೋವಾ ಪ್ರದೇಶ
ಕೇಂದ್ರ ಕಂದಾಯ ಕಟ್ಟಡ
ನಂ.1, ಕ್ವೀನ್ಸ್ ರಸ್ತೆ
ಬೆಂಗಳೂರು
ಕರ್ನಾಟಕ-560001
ಹೆಚ್ಚಿನ ಮಾಹಿತಿಗಾಗಿ.. [email protected] ವೆಬ್ಸೈಟ್ ಗೆ ಭೇಟಿ ನೀಡಿ. ಇದನ್ನು ಓದಿ..Railway Jobs 2023: ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; ಬಾರಿ ಹುದ್ದೆಗಳನ್ನು ಭಾರ್ತಿ ಮಾಡಲು ಮುಂದಾದ ರೈಲ್ವೆ; ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??