Cricket News: ವೀರೇಂದ್ರ ಸೆಹ್ವಾಗ್ ಸ್ಥಾನ ತುಂಬುತ್ತಿರುವ ಆಟಗಾರನನ್ನು ಹೆಸರಿಸಿದ ರವಿ ಶಾಸ್ತ್ರೀ: ಸುಮ್ಮನೆ ಇರಿ, ಎಂದು ಫುಲ್ ಗರಂ ಆದ ಸೆಹ್ವಾಗ್ ಫ್ಯಾನ್ಸ್. ಯಾಕೆ ಗೊತ್ತೇ??

Cricket News: ವೀರೇಂದ್ರ ಸೆಹ್ವಾಗ್ ಸ್ಥಾನ ತುಂಬುತ್ತಿರುವ ಆಟಗಾರನನ್ನು ಹೆಸರಿಸಿದ ರವಿ ಶಾಸ್ತ್ರೀ: ಸುಮ್ಮನೆ ಇರಿ, ಎಂದು ಫುಲ್ ಗರಂ ಆದ ಸೆಹ್ವಾಗ್ ಫ್ಯಾನ್ಸ್. ಯಾಕೆ ಗೊತ್ತೇ??

Cricket News: ಬಹುನಿರೀಕ್ಷಿತ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ (Border Gavaskar Trophy) ಫೆಬ್ರವರಿ 9ರಂದು ಶುರುವಾಗಿದೆ, ಇದು ನಾಲ್ಕು ಪಂದ್ಯಗಳ ಸರಣಿ ಆಗಿದ್ದು, ಮೊದಲ ಪಂದ್ಯ ಆಗಿದ್ದು, ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ನಡೆಯುತ್ತಿದೆ. ಮೊದಲ ದಿನ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಭಾರತದ ಬೌಲರ್ ಗಳ ಪರಾಕ್ರಮಕ್ಕೆ ಬಲಿಯಾಗಿ 177 ರನ್ ಗಳಿಗೆ ಆಲ್ ಔಟ್ ಆಯಿತು. ಎರಡನೆಯ ದಿನ ಬ್ಯಾಟಿಂಗ್ ಶುರು ಮಾಡಿದ ಭಾರತ ತಂಡ, ಊಟದ ಸಮಯದ ವೇಳೆಗೆ 150 ರನ್ ಗಳಿಸಿತು.

ಈ ಟೂರ್ನಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರ ಪಾಲಿಗೆ ಬಹಳ ಮಹತ್ವದ ಪಂದ್ಯ ಆಗಿದೆ, ಹಾಗೆಯೇ ಭಾರತ ತಂಡ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫಿನಾಲೆ ಪ್ರವೇಶ ಮಾಡುವುದಕ್ಕೂ ಕೂಡ ಇದು ಮುಖ್ಯವಾದ ಅವಕಾಶ. ಈ ಮೊದಲ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಅರ್ಧ ಶತಕ ಸಿಡಿಸುವ ಮೂಲಕ ಫಾರ್ಮ್ ಗೆ ಬಂದಿರುವ ಸೂಚನೆ ನೀಡಿದ್ದಾರೆ, 142 ಎಸೆತಗಳಲ್ಲಿ ರೋಹಿತ್ ಶರ್ಮಾ ಅವರು 85 ರನ್ಸ್ ಭಾರಿಸುವುದರ ಜೊತೆಗೆ ವಿರಾಟ್ ಕೊಹ್ಲಿ ಅವರ ಜೊತೆಗೆ ಒಳ್ಳೆಯ ಪಾರ್ಟ್ನರ್ಶಿಪ್ ನಲ್ಲಿ ಆಡುತ್ತಿದ್ದಾರೆ. ರೋಹಿತ್ ಅವರ ಈ ಫಾರ್ಮ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ರವಿಶಾಸ್ತ್ರಿ (Ravishastri) ಅವರು ಹೇಳಿಕೆ ನೀಡಿದ್ದಾರೆ. “ರೋಹಿತ್ ಶರ್ಮಾ ಅವರು ಫೀಲ್ಡ್ ನಲ್ಲಿದ್ದು ಹೆಚ್ಚು ರನ್ಸ್ ಗಳಿಸುವುದಕ್ಕೆ ಪ್ರಯತ್ನಪಡುತ್ತಾರೆ. ಬೌಲರ್ ಯಾರೇ ಆಗಿರಲಿ ಅವರಿಗೆ ಗೇಮ್ ಸುಲಭವಾಗಿ ಇರಲು ಆತ ಬಿಡುವುದಿಲ್ಲ.. ಇದನ್ನು ಓದಿ..Cricket News: ಭಾರಿ ನಿರೀಕ್ಷೆ ಮೂಡಿಸಿರುವ ಆಸ್ಟ್ರೇಲಿಯಾ ಹಾಗೂ ಭಾರತ ಟೆಸ್ಟ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರಂತೆ ಗೊತ್ತೇ? ಜಯವರ್ಧನೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಇವರು ವೀರೇಂದ್ರ ಸೆಹ್ವಾಗ್ ಅವರ ಹಾಗೆ ಹೆಚ್ಚು ರನ್ಸ್ ಗಳಿಸುತ್ತಾರೆ, ವೀರೇಂದ್ರ ಸೆಹ್ವಾಗ್ (Veerendra Sehwag) ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾಗ ಎದುರಿಗೆ ಇರುವ ಬೌಲರ್ ಗಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ. ಅದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಿಗೆ ಸುಲಭವಾಗುತ್ತದೆ..” ಎಂದು ಹೇಳಿದ್ದಾರೆ ರವಿಶಾಸ್ತ್ರಿ ಅವರು, ಈ ಟೂರ್ನಿ ರೋಹಿತ್ ಶರ್ಮಾ ಅವರು ಒಬ್ಬ ನಾಯಕ ಎನ್ನುವುದನ್ನು ಪ್ರೂವ್ ಮಾಡುವ ಸರಣಿ ಅಲ್ಲ, ಆದರೆ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಅವರು ಪ್ರೂವ್ ಮಾಡಿಕೊಳ್ಳುವುದರ ಜೊತೆಗೆ ತಂಡದ ಮೇಲೆ ಇರುವ ಒತ್ತಡ ಕಡಿಮೆ ಮಾಡಬೇಕು.. ಎಂದು ಕೂಡ ಹೇಳಿದ್ದಾರೆ. ಆದರೆ ಇವರ ಹೇಳಿಕೆ ಕೇಳಿ ಸೆಹ್ವಾಗ್ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ, ಸೆಹ್ವಾಗ್ ಅವರನ್ನು ರೋಹಿತ್ ಶರ್ಮಾ ಅವರ ಜೊತೆಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ ಸೆಹ್ವಾಗ್ ಅವರ ಫ್ಯಾನ್ಸ್. ಇದನ್ನು ಓದಿ..Cricket News: ಪದೇ ಪದೇ ಅದೇ ತಪ್ಪು: ರೋಹಿತ್ ಮೇಲೆ ಮತ್ತೆ ಕಿಡಿ ಕಾರಿದ ಅಭಿಮಾನಿಗಳು. ಯಾಕೆ ಗೊತ್ತೇ?? ಈತ ನಿಜಕ್ಕೂ ನಾಯಕನೇ ಎಂದದ್ದು ಯಾಕೆ ಗೊತ್ತೇ?