Cricket News: ಪದೇ ಪದೇ ಅದೇ ತಪ್ಪು: ರೋಹಿತ್ ಮೇಲೆ ಮತ್ತೆ ಕಿಡಿ ಕಾರಿದ ಅಭಿಮಾನಿಗಳು. ಯಾಕೆ ಗೊತ್ತೇ?? ಈತ ನಿಜಕ್ಕೂ ನಾಯಕನೇ ಎಂದದ್ದು ಯಾಕೆ ಗೊತ್ತೇ?
Cricket News: ಪದೇ ಪದೇ ಅದೇ ತಪ್ಪು: ರೋಹಿತ್ ಮೇಲೆ ಮತ್ತೆ ಕಿಡಿ ಕಾರಿದ ಅಭಿಮಾನಿಗಳು. ಯಾಕೆ ಗೊತ್ತೇ?? ಈತ ನಿಜಕ್ಕೂ ನಾಯಕನೇ ಎಂದದ್ದು ಯಾಕೆ ಗೊತ್ತೇ?
Cricket News: ನಿನ್ನೆ ಫೆಬ್ರವರಿ 9ರಿಂದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) 3 ಟೆಸ್ಟ್ ಪಂದ್ಯಗಳ ಸರಣಿ ಶುರುವಾಗಿದೆ. ಮೊದಲ ಪಂದ್ಯ ನಾಗ್ಪುರದಲ್ಲಿ (Nagpur) ನಡೆಯುತ್ತಿದೆ. ರೋಹಿತ್ ಶರ್ಮಾ (Rohit Sharma) ಅವರು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship) ಫೈನಲ್ಸ್ ತಲುಪಲು ಈ ಬಾರ್ಡರ್ ಗವಾಸ್ಕರ್ ಟ್ರೋಫಿ ಸೀರೀಸ್ ಗೆಲ್ಲುವುದು ಬಹಳ ಮುಖ್ಯ ಆಗಿದೆ. ಈ ನಿಟ್ಟಿನಲ್ಲಿ ಭಾರತ ತಂಡ ಬಹಳಷ್ಟು ಶ್ರಮ ಹಾಕುತ್ತಿದೆ. ರವೀಂದ್ರ ಜಡೇಜಾ ಅವರು ತಂಡಕ್ಕೆ ಕಂಬ್ಯಾಕ್ ಮಾಡಿರುವುದು ಒಳ್ಳೆಯ ವಿಚಾರ ಆಗಿದೆ.
ಈ ಟೆಸ್ಟ್ ಸೀರೀಸ್ ಗೆ ಒಳ್ಳೆಯ ಆರಂಭ ಕೂಡ ಸಿಕ್ಕಿದೆ. ಟಾಸ್ ಗೆದ್ದು ಆಸ್ಟೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆದರೆ ರವೀಂದ್ರ ಜಡೇಜಾ (Ravindra Jadeja) ಹಾಗೂ ಬೌಲರ್ ಗಳ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ ಕೇವಲ 177 ರನ್ ಗಳಿಗೆ ಆಲೌಟ್ ಆಗಿದೆ. ಪಂದ್ಯವು ಭಾರತದ ಪರವಾಗಿ ಇದ್ದರೂ ಕೂಡ, ನೆಟ್ಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ಅವರು ತೆಗೆದುಕೊಂಡಿರುವ ನಿರ್ಧಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿ, ಕೋಪ ಹೊರಹಾಕಿದ್ದಾರೆ. ಅದಕ್ಕೆ ಕಾರಣ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ಆಡುವ 11ರ ಬಳಗಕ್ಕೆ ಶುಬ್ಮನ್ ಗಿಲ್ (Shubhman Gill) ಅವರು ಆಯ್ಕೆಯಾಗಿಲ್ಲ. ಇದನ್ನು ಓದಿ..Cricket News: ಭಾರಿ ನಿರೀಕ್ಷೆ ಮೂಡಿಸಿರುವ ಆಸ್ಟ್ರೇಲಿಯಾ ಹಾಗೂ ಭಾರತ ಟೆಸ್ಟ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರಂತೆ ಗೊತ್ತೇ? ಜಯವರ್ಧನೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ಈ ವರ್ಷ ಈಗಾಗಲೇ 4 ಸೆಂಚುರಿ ಭಾರಿಸಿದ್ದಾರೆ ಗಿಲ್, ಟಿ20 ಮತ್ತು ಏಕದಿನ ಪಂದ್ಯಗಳು ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೂ ಸಹ ಅವರನ್ನು ಆಯ್ಕೆ ಮಾಡದೆ ಇರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಯಾವುದಾದರು ಆಟಗಾರ ಉತ್ತಮ ಪ್ರದರ್ಶನ ನೀಡಿದರೆ ಅವರನ್ನು ಮುಂದಿನ ಪಂದ್ಯಗಳಿಂದ ಹೊರಗಡೆ ಇಡಲಾಗುತ್ತೆ ಅಂತ ಇಲ್ಲಿ ಸೂಚನೆ ಕೊಡ್ತಿದ್ದಾರೆ ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದು, ಗಿಲ್ ಅವರಷ್ಟು ಚೆನ್ನಾಗಿ ಆಡದ ಕೆ.ಎಲ್.ರಾಹುಲ್ (K L Rahul) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಅವಕಾಶ ನೀಡಿ, ಶುಬ್ಮನ್ ಗಿಲ್ ಅವರನ್ನು ಆಯ್ಕೆ ಮಾಡದೆ ಇರುವುದು ಅನ್ಯಾಯ ಎನ್ನುತ್ತಿದ್ದಾರೆ. ಇದನ್ನು ಓದಿ..Cricket News: ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡದಲ್ಲಿ ಈತನೇ ಮಿಂಚಬೇಕು, ಈತನೇ ಮುಖ್ಯ ಎಂದ ಅಶ್ವಿನ್: ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??