Cricket News: ರೋಹಿತ್ ರವರನ್ನು ತೆಗೆದು ಹಾಕಿ, ಪಾಂಡ್ಯ ರವರಿಗೆ ಯಾಕೆ ನಾಯಕತ್ವ ನೀಡಬೇಕು ಗೊತ್ತೆ?? ಟಾಪ್ 5 ಕಾರಣಗಳು ಯಾವ್ಯಾವು ಗೊತ್ತೆ?

Cricket News: ರೋಹಿತ್ ರವರನ್ನು ತೆಗೆದು ಹಾಕಿ, ಪಾಂಡ್ಯ ರವರಿಗೆ ಯಾಕೆ ನಾಯಕತ್ವ ನೀಡಬೇಕು ಗೊತ್ತೆ?? ಟಾಪ್ 5 ಕಾರಣಗಳು ಯಾವ್ಯಾವು ಗೊತ್ತೆ?

Cricket News: ಭಾರತ ಕ್ರಿಕೆಟ್ ತಂಡದಲ್ಲಿ (Team India) ಈಗ ಬದಲಾವಣೆಯ ಅಲೆ ಶುರುಬಾಗಿದೆ. ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದ ನಂತರ, ನಾಯಕತ್ವ ಬದಲಾಗಬೇಕು, ಹೊಸ ತಂಡ ಸೃಷ್ಟಿಯಾಗಬೇಕು ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದ್ದು, ಈಗಾಗಲೇ ಭಾರತ ತಂಡದ ಭವಿಷ್ಯದ ನಾಯಕ ಯಾರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ, ಸಧ್ಯಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ಅವರು ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ಪಂದ್ಯವನ್ನು ನಾಯಕನಾಗಿ ಮುನ್ನಡೆಸಿದರು. ಅವರೆ ಟಿ20 ತಂಡದ ಕ್ಯಾಪ್ಟನ್ ಆಗಿ ಮುಂದುವರೆಯಬಹುದು ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಅವರೇ ಯಾಕೆ ಕ್ಯಾಪ್ಟನ್ ಆಗಬೇಕು ಎನ್ನುವ ಪ್ರಶ್ನೆ ಕೂಡ ಕೆಲವರಲ್ಲಿ ಇದೆ. ಆ ಪ್ರಶ್ನೆಗೆ ಇಂದು ಕಾರಣಗಳನ್ನು ತಿಳಿಸುತ್ತೇವೆ..

*ಕಳೆದ ಕೆಲವು ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಅವರು ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರು ಟೆಸ್ಟ್ ಪಂದ್ಯವನ್ನಾಡಿದ್ದು 2018ರಲ್ಲೇ ಕೊನೆ, ಅದಾದ ನಂತರ ಹಾರ್ದಿಕ್ ಪಾಂಡ್ಯ ಅವರು ಸಂಪೂರ್ಣವಾಗಿ ಟಿ20 ಪಂದ್ಯಗಳ ಮೇಲೆಯೇ ಗಮನ ಹರಿಸಿದ್ದಾರೆ. ಹಾಗಾಗಿ ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಹಾರ್ದಿಕ್ ಪಾಂಡ್ಯ.
*ಪಾಂಡ್ಯ ಅವರಿಗೆ ಇವ 29 ವರ್ಷ, ಇವರು ನ್ಯೂಜಿಲೆಂಡ್ ಸೀರೀಸ್ (Ind vs New) ಗೆ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದರು, ಅದರಲ್ಲಿ ಭಾರತ ತಂಡವು ಗೆಲುವು ಸಾಧಿಸಿತು.
*ಕಳೆದ ವರ್ಷ ಐಪಿಎಲ್ (IPL) ನಲ್ಲಿ ಹೊಸದಾಗಿ ಸೇರ್ಪಡೆಯಾದ ಗುಜರಾತ್ ಟೈಟನ್ಸ್ (Gujarat Titans) ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ, ಮೊದಲ ವರ್ಷವೇ ಐಪಿಎಲ್ ಟ್ರೋಫಿ ಗೆದ್ದರು. ಆಡಿದ 15 ಪಂದ್ಯಗಳಲ್ಲಿ ಬರೋಬ್ಬರಿ 487 ರನ್ಸ್ ಗಳಿಸಿದರು ಹಾರ್ದಿಕ್ ಪಾಂಡ್ಯ. ಇದನ್ನು ಓದಿ.. Cricket News: ವಿಶ್ವಕಪ್ ನಲ್ಲಿ ಕೊಹ್ಲಿ ಬಾರಿಸಿದ ಆ ಎರಡು ಸಿಕ್ಸರ್ ಗಳನ್ನು ನೆನಪಿಸಿಕೊಂಡ ಅದೇ ಪಾಕ್ ಬೌಲರ್ ಈಗ ಹೇಳಿದ್ದೇನು ಗೊತ್ತೇ??

*ಒಳ್ಳೆಯ ಫಿನಿಷರ್ ಆಗಿರುವ ಹಾರ್ದಿಕ್ ಪಾಂಡ್ಯ ಎಂಥದ್ದೇ ಪರಿಸ್ಥಿತಿ ಕಷ್ಟದ ಪರಿಸ್ಥಿತಿಯೇ ಇದ್ದರು ಕೂಡ, ಅದನ್ನು ಸರಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡವನ್ನು ಒಗ್ಗಟ್ಟಿನಿಂದ ಹಿಡಿದಿಟ್ಟುಕೊಳ್ಳುತ್ತಾರೆ.
*ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ ಅವರು ಬಹಳ ಸಮಯ ಟೀಮ್ ಇಂಡಿಯಾ ಇಂದ ದೂರವೇ ಉಳಿದಿದ್ದರು. ಆದರೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ ನಂತರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಂಬ್ಯಾಕ್ ಮಾಡಿದ ನಂತರ ಆಡಿರುವ ಪಂದ್ಯಗಳಲ್ಲಿ 607 ರನ್ಸ್ ಗಳಿಸಿದ್ದು, ಇವರ ಸ್ಟ್ರೈಕ್ ರೇಟ್ 146 ಇದೆ ,ಜೊತೆಗೆ 20 ವಿಕೆಟ್ಸ್ ಪಡೆದಿದ್ದಾರೆ ಹಾರ್ದಿಕ್ ಪಾಂಡ್ಯ.
ಈ ಎಲ್ಲಾ ಕಾರಣಗಳಿಂದ ಹಾರ್ದಿಕ್ ಪಾಂಡ್ಯ ಅವರಿಗೆ ಕ್ಯಾಪ್ಟನ್ಸಿ ನೀಡುವುದು ಒಳ್ಳೆಯ ಆಯ್ಕೆ ಎಂದು ಹೇಳಲಾಗುತ್ತಿದ್ದು, ಅವರು ತಂಡವನ್ನು ಸರಿಯಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ಓದಿ..Post Office Saving Schemes: ಈ ಚಿಕ್ಕ ಯೋಜನೆಯಲ್ಲಿ 50 ರೂಪಾಯಿ ಹೂಡಿಕೆ ಮಾಡಿದರೆ, 35 ಲಕ್ಷ ರೂಪಾಯಿ ಲಾಭ. ಯಾವ ಸ್ಕೀಮ್ ಗೊತ್ತೇ?