ಹೆಚ್ಚಿನ ರಿಸ್ಕ್ ಇಲ್ಲದೆ, ಸಣ್ಣ ಪ್ರಮಾಣದಲ್ಲಿ ಬಿಸಿನೆಸ್ ಆರಂಭ ಮಾಡಿ, ತಿಂಗಳಿಗೆ ಬರೋಬ್ಬರಿ 60 ಸಾವಿರ ಗಳಿಸಿ ಹೇಗೆ ಗೊತ್ತೇ??

ಹೆಚ್ಚಿನ ರಿಸ್ಕ್ ಇಲ್ಲದೆ, ಸಣ್ಣ ಪ್ರಮಾಣದಲ್ಲಿ ಬಿಸಿನೆಸ್ ಆರಂಭ ಮಾಡಿ, ತಿಂಗಳಿಗೆ ಬರೋಬ್ಬರಿ 60 ಸಾವಿರ ಗಳಿಸಿ ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸ್ವ ಉದ್ಯೋಗ ಮಾಡಬೇಕೆಂದು ಅಂದುಕೊಂಡರೂ, ನಮ್ಮಲ್ಲಿ ಪ್ರತಿಭೆ ಇದ್ದರೂ ಸಾಕಷ್ಟು ಹೂಡಿಕೆ ಮಾಡಲು ಸಾಧ್ಯವಾಗದೇ ಆ ಕನಸು ಅರ್ಧದಲ್ಲಿಯೇ ನಿಂತುಹೋಗುತ್ತದೆ. ಆದರೆ ನಾವಿಲ್ಲಿ ಒಂದು ಸುಲಭವಾದ ಹಾಗೂ ಕಡಿಮೆ ಬಂಡವಾಳ ಹೂಡಿ ಮಾಡಬಹುದಾದ ಉದ್ಯಮದ ಬಗ್ಗೆ ಹೇಳ್ತೀವಿ. ಅದುವೇ ಪೇಪರ್ ಕಪ್ ಬ್ಯುಸನೆಸ್. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಇತ್ತೀಚಿಗೆ, ಟೀ, ಕಾಫಿ, ಜ್ಯೂಸ್ ಗಳೆಲ್ಲವೂ ಪೇಪರ್ ಕಪ್ ನಲ್ಲಿಯೇ ಕೊಡಲಾಗುತ್ತದೆ. ಹಾಗಾಗಿ ಪೇಪರ್ ಲೋಟಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪ್ಲಾಸ್ಟಿಕ್ ಗಳನ್ನು ಬಳಸಬಾರದು ಎನ್ನುವ ನಿಯಮಗಳ ಹಿನ್ನೆಲೆಯಲ್ಲಿ ವಿಶೇಷ ಪೇಪರ್ ಬಳಸಿ ತಯಾರಿಸಲಾಗುವ ಪೇಪರ್ ಕಪ್ ಇಂದು ಹೆಚ್ಚು ಹೆಚ್ಚು ಸೇಲ್ ಆಗುತ್ತಿವೆ. ಇದು ಪರಿಸರ ಸ್ನೇಹಿ ಕೂಡ ಹೌದು. ಪೇಪರ್ ಕಪ್ ತಯಾರಿಸಲು, ಬೇರೆ ಬೇರೆ ಗಾತ್ರದಲ್ಲಿ ತಯಾರಿಸಲು ಬೇರೆ ಬೇರೆ ರೀತಿಯ ಮಾದರಿ ಯಂತ್ರಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ. ನೀವು 1 ರಿಂದ 2 ಲಕ್ಷ ರೂಪಾಯಿಗೆ ಯಂತ್ರಗಳನ್ನು ಕೊಂಡು ಸಾಮಾನ್ಯ ಗಾತ್ರದ ಕಪ್ ಗಳನ್ನು ತಯಾರಿಸಬಹುದು.

ಈ ಉದ್ಯಮ ಆರಂಭಿಸಲು ಮುಖ್ಯವಾಗಿ ಪೇಪರ್ ಕಪ್ ಫ್ರೇಮಿಂಗ್ ಯಂತ್ರ ಬೇಕು ಇದಕ್ಕೆ 5 ಲಕ್ಷ ರೂಪಾಯಿ ಬಂಡವಾಳ ಬೇಕು. ಇನ್ನು ಕಚೇರಿಯ ಇತರ ಉಪಕರಣಗಳಿಗೆ ಸುಮಾರು 50 ಸಾವಿರ ರೂಪಾಯಿಗಳು ಬೇಕಾಗುತ್ತವೆ. ಇನ್ನು ನಿಮಗೆ 90 ಕೆಜಿಯಷ್ಟು ಪೇಪರ್ ರೀಲ್ ಗಳು ಆರಂಭದಲ್ಲಿ ಬೇಕಾಗುತ್ತವೆ. ಜೊತೆಗೆ 78 ರೂ( ಕೆಜಿಗೆ) ಇರುವ ಬಾಟಮ್ ರೀಲ್ ಬೇಕು. ಈ ಯಂತ್ರಗಳನ್ನು ದೆಹಲಿ, ಹೈದರಾಬಾದ್, ಆಗ್ರಾ ಮೊದಲಾದೆಡೆ ಖರೀದಿಸಬಹುದಾಗಿದೆ. ಇಂಡಿಯಾ ಮಾರ್ಟ್ ಮತ್ತು ಅಲಿಬಾಬಾ ವೆಬ್‌ಸೈಟ್‌ನಲ್ಲಿ ಈ ಯಂತ್ರಗಳ ಮಾರಾಟಗಾರರನ್ನು ನೇರವಾಗಿ ಸಂಪರ್ಕಿಸಬಹುದು.

ಇನ್ನು ಮನೆಯಲ್ಲಿಯೇ ಸಣ್ಣ ಯಂತ್ರವನ್ನು ಇಟ್ಟುಕೊಂಡು ಸಣ್ಣ ಪ್ರಮಾಣದ ಪೇಪರ್ ಕಪ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಬಹುದು. ಈ ಉದ್ಯಮವನ್ನು ದೊಡ್ಡದಾಗಿ ಆರಂಭಿಸುವುದಾದರೆ ಎಂಎಸ್ಎಂಇ ಅಥವಾ ಉದ್ಯೋಗ್ ಆಧಾರ್ ನೋಂದಣಿಯಲ್ಲಿ ಉದ್ಯಮವನ್ನು ನೋಂದಾಯಿಸಿಕೊಳ್ಳಬೇಕು. ಜೊತೆಗೆ, ಟ್ರೇಡ್ ಲೈಸೆನ್ಸ್, ಸಂಸ್ಥೆಯ ಚಾಲ್ತಿ ಖಾತೆ, ಪಾನ್ ಕಾರ್ಡ್, ಆಧಾರ್ ಮೊದಲಾದ ದಾಖಲೆಗಳು ಬೇಕು. ಉದ್ಯೋಗ್ ಆಧಾರ್ ನೋಂದಣಿ ಮಾಡಿಸಿ ಮುದ್ರಾ ಸಾಲವನ್ನು ಪಡೆದು ಉದ್ಯಮ ಆರಂಭಿಸಬಹುದು.

ಪೇಪರ್ ಕಪ್ ಗಳನ್ನು ಒಂದು ನಿಮಿಷದಲ್ಲಿ ಸುಮಾರು 50 ಕಪ್‌ಗಳನ್ನು ತಯಾರಿಸಬಹುದು. ದಿನಕ್ಕೆ 2 ಶಿಫ್ಟ್‌ಗಳಲ್ಲಿ 26 ದಿನ ಕೆಲಸ ಮಾಡಿದರೂ, ತಿಂಗಳಿಗೆ 15,60,000 ಕಪ್‌ಗಳನ್ನು ತಯಾರಿಸಬಹುದು. ಇನ್ನು ಒಂದುಕಪ್ ಗೆ 30 ಪೈಸೆ ಎಂದರೂ 4,68,000 ರೂಪಾಯಿಗಳಷ್ಟು ಆದಾಯ ಸಿಗುತ್ತದೆ. ಇದರಲ್ಲಿ ವೆಚ್ಚ ಕಳೆದು 60 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸಬಹುದು.