ಅಂದು ದರ್ಶನ್ ರವರ ನಟನೆ ನೋಡಿ ನಟ ಸೌರ್ವಭೌಮ ಡಾ ರಾಜ್ ಕುಮಾರ್ ರವರು ಮಾಡಿದ್ದೇನು ಗೊತ್ತೇ??

ಅಂದು ದರ್ಶನ್ ರವರ ನಟನೆ ನೋಡಿ ನಟ ಸೌರ್ವಭೌಮ ಡಾ ರಾಜ್ ಕುಮಾರ್ ರವರು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಸದ್ಯದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಅಗ್ರಸ್ಥಾನದಲ್ಲಿ ಕಾಣುವಂತಹ ನಟರಲ್ಲಿ ಒಬ್ಬರಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಮಾಸ್ ಅಭಿನಯದಿಂದಾಗಿ ಎಲ್ಲರ ಮನ ಗೆಲ್ಲುವಂತಹ ನಟ. ಅದಕ್ಕಾಗಿಯೇ ಇವರನ್ನು ಅಭಿಮಾನಿಗಳು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಬಾಕ್ಸಾಫೀಸ್ ಸುಲ್ತಾನ್ ಎಂಬಿತ್ಯಾದಿ ಪದನಾಮ ಗಳಿಂದಾಗಿ ಸಂಬೋಧಿಸುತ್ತಾರೆ.

ಇಂದಿಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಯಾವುದೇ ಪಾತ್ರಗಳಲ್ಲಿ ಅದನ್ನು ನೀರು ಕುಡಿದಷ್ಟು ಸುಲಭವಾಗಿ ನಟಿಸುತ್ತಾರೆ. ಕೇವಲ ಯಾವುದೇ ಒಂದು ರೀತಿಯ ವರ್ಗದ ಪಾತ್ರಗಳಿಗೆ ಸೀಮಿತವಾಗಿರದೆ ಪುರಾಣ ಐತಿಹಾಸಿಕ ಮಾಡರ್ನ್ ರೋಮ್ಯಾಂಟಿಕ್ ಹೀಗೆ ಯಾವುದೇ ರೀತಿಯ ಪಾತ್ರಗಳಲ್ಲಿ ತಮ್ಮನ್ನು ತಾವು ಪರಕಾಯ ಪ್ರವೇಶವನ್ನು ಮಾಡಿಕೊಂಡು ಪಾತ್ರಕ್ಕೆ 100% ನ್ಯಾಯವನ್ನು ನೀಡುತ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಅವರನ್ನು ಕೇವಲ ಮಾಸ್ ನಟ ಎಂಬುದಾಗಿ ಮಾತ್ರ ಫ್ರೇಮ್ ಮಾಡಲಾಗಿತ್ತು. ಆದರೆ ಅವೆಲ್ಲವನ್ನು ಹೊರತುಪಡಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಲಾಲಿಹಾಡು ಹಾಗೂ ನನ್ನ ಪ್ರೀತಿಯ ರಾಮು ಎಂಬಂತಹ 2 ವಿಭಿನ್ನವಾದ ಚಿತ್ರಗಳನ್ನು ಮಾಡಿದ್ದರು. ಅದರಲ್ಲಿಯೂ ನನ್ನ ಪ್ರೀತಿಯ ರಾಮು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕುರುಡನ ಪಾತ್ರದಲ್ಲಿ ಸಂಗೀತಗಾರನಾಗಿ ಮಿಂಚಿದ್ದರು.

ಈ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ನೋಡಿದ ನಂತರ ಕನ್ನಡ ಚಿತ್ರರಂಗದ ವರನಟ ಡಾಕ್ಟರ್ ರಾಜಕುಮಾರ್ ರವರ ಕಣ್ಣಿನಲ್ಲಿ ಕೂಡ ನೀರು ಬಂದಿತ್ತು. ಚಿತ್ರವನ್ನು ನೋಡಿದ ನಂತರವೇ ಕೂಡಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಸದಾಶಿವನಗರದ ತಮ್ಮ ಮನೆಗೆ ಕರೆಸಿಕೊಳ್ಳುತ್ತಾರೆ. ಮನೆಗೆ ಕರೆಸಿಕೊಂಡು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯನ್ನು ಅಭಿನಂದಿಸುತ್ತಾರೆ ಹಾಗೂ ತೂಗುದೀಪ ಶ್ರೀನಿವಾಸ್ ಅವರೊಂದಿಗೆ ಕಳೆದಿರುವಂತಹ ಸಮಯಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡು ಇದರ ಕುರಿತಂತೆ ದರ್ಶನ್ ಅವರಿಗೆ ತಿಳಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರಶಂಸೆಯನ್ನು ಮಾಡಿದಂತಹ ಅಣ್ಣಾವ್ರ ಹೃದಯ ಶ್ರೀಮಂತಿಕೆಗೆ ನಾವು ತಲೆಬಾಗಲೇಬೇಕು. ಇಂದಿನ ದಿನಗಳಲ್ಲಿ ಹೊಸಬರನ್ನು ಕಂಡರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಇದೇ ರೀತಿಯ ಕಾರ್ಯಗಳನ್ನು ಮಾಡುವುದನ್ನು ನೀವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.